ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ತನಕ ನಡೆಸುವುದಕ್ಕೆ ಕ್ಯಾಬಿನೆಟ್ ಕಮಿಟಿ ಶಿಫಾರಸು ಮಾಡಿದೆ. ಈ ಅಧಿವೇಶದಲ್ಲಿ ಒಟ್ಟು 18 ಕಲಾಪಗಳು ನಡೆಯಲಿದ್ದು, ಕಲಾಪ ದಿನಾಂಕಗಳ ಪಟ್ಟಿ ನಂತರದಲ್ಲಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್​ -19 ಸೋಂಕಿನ ಕಾರಣಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಲೋಕಸಭೆ, ರಾಜ್ಯಸಭೆಗಳ ಚೇಂಬರ್​, ಗ್ಯಾಲರಿಯ ಪೂರ್ಣ ಪ್ರಮಾಣದ ಬಳಕೆ ಈ ಬಾರಿ ಸದಸ್ಯರಿಗೇ ಮೀಸಲಾಗಿ ಇರಲಿದೆ.
ಇದನ್ನೂ ಓದಿ:ಉಪ್ಪಿನಕಾಯಿ ಜಾರೂ ಹೋಯ್ತು, 81,000 ರೂಪಾಯಿನೂ ಹೋಯ್ತು!
ರಾಜ್ಯಸಭಾ ಸಚಿವಾಲಯದ ಮಾಹಿತಿ ಪ್ರಕಾರ, ಮೇಲ್ಮನೆಯ ಎರಡೂ ಚೇಂಬರ್​​ಗಳಲ್ಲಿ ಮತ್ತು ಗ್ಯಾಲರಿಗಳಲ್ಲಿ ಸದಸ್ಯರು ಕೂರಲಿದ್ದಾರೆ. ಭಾರತದ ಸಂಸತ್​ ಇತಿಹಾಸದಲ್ಲಿ 1952ರ ನಂತರ ಇಂತಹ ಕ್ರಮ ಇದೇ ಮೊದಲ ಬಾರಿ ತೆಗೆದುಕೊಳ್ಳಲಾಗಿದೆ. ಇದರಂತೆ, ಚೇಂಬರ್​ನಲ್ಲಿ 60 ಸದಸ್ಯರು, ಗ್ಯಾಲರಿಯಲ್ಲಿ 51 ಸದಸ್ಯರು ಕುಳಿತರೆ, ಉಳಿದ 132 ಸದಸ್ಯರು ಲೋಕಸಭೆಯ ಚೇಂಬರ್​ನಲ್ಲಿ ಕುಳಿತುಕೊಳ್ಳಲಿದ್ದಾರೆ. ಲೋಕಸಭೆ ಕಲಾಪಕ್ಕೂ ಇಂಥದ್ದೇ ಉಪಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. (ಏಜೆನ್ಸೀಸ್)
ಪಕ್ಕದ ರಾಜ್ಯದವರು ಓಕೆ ಅಂದ್ರೆ ಕೂಡ್ಲೇ ಬಸ್ ಬಿಡ್ತೇವೆ- ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
