ನವದೆಹಲಿ: ಗುಜರಾತಿನ ಜಾಮ್​ನಗರ ಮೂಲದ ಆಯುರ್ವೇದ ಇನ್​ಸ್ಟಿಟ್ಯೂಟ್ಸ್​ಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವ ಮಸೂದೆಯನ್ನು ಬುಧವಾರ ಸಂಸತ್ತು ಅಂಗೀಕರಿಸಿದೆ. “ದ ಇನ್​ಸ್ಟಿಟ್ಯೂಟ್​ ಆಫ್ ಟೀಚಿಂಗ್​ ಆ್ಯಂಡ್ ರೀಸರ್ಚ್​ ಇನ್ ಆಯುರ್ವೇದ ಬಿಲ್ 2020” ಎಂಬ ಹೆಸರಿನ ಮಸೂದೆಯನ್ನು ರಾಜ್ಯಸಭೆ ಧ್ವನಿಮತದೊಂದಿಗೆ ಅಂಗೀಕರಿಸಿದೆ.
ಲೋಕಸಭೆಯಲ್ಲಿ ಈ ಮಸೂದೆ ಕಳೆದ ಅಧಿವೇಶನದಲ್ಲೇ ಅಂಗೀಕೃತವಾಗಿತ್ತು. ಇನ್​ಸ್ಟಿಟ್ಯೂಠ್ ಆಫ್​ ಪೋಸ್ಟ್ ಗ್ರಾಜುವೇಟ್​ ಟೀಚಿಂಗ್ ಆ್ಯಂಡ್ ರಿಸರ್ಚ್​ ಇನ್ ಆಯುರ್ವೇದ, ಗುಲಾಬ್​​ಕನ್ವೇರಬಾ ಆಯುರ್ವೇದ ಮಹಾವಿದ್ಯಾಲಯ, ಇನ್​ಸ್ಟಿಟ್ಯೂಟ್ ಆಫ್ ಆಯುರ್ವೇದ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಎಂಬ ಮೂರು ಸಂಸ್ಥೆಗಳಿಗೆ ಈ ಮೂಲಕ ರಾಷ್ಟ್ರೀಯ ಸ್ಥಾನಮಾನ ಪಡೆಯಲಿವೆ.
ಇದನ್ನೂ ಓದಿ:ಜಂಟಿ ಆಯುಕ್ತರೇ, ಪಾಲಿಕೆ ಮಾಜಿ ಸದಸ್ಯರ ಬೀಳ್ಕೊಡುಗೆ ಸಮಾರಂಭಕ್ಕೆ ಖರ್ಚು ಮಾಡಿದ ದುಡ್ಡು ಯಾರದ್ದು?
ಆಯುರ್ವೇದ ಅತ್ಯಂತ ಪುರಾತನ ವೈದ್ಯಪದ್ಧತಿಯಾಗಿದ್ದು, ಸಾಂಪ್ರದಾಯಿಕ ಪರಂಪರೆಯನ್ನೂ ಹೊಂದಿದೆ. ಆತ್ಮನಿರ್ಭರ ಭಾರತ ಯೋಜನೆ ಪ್ರಕಾರ ಔಷಧೀಯ ಸಸ್ಯಗಳನ್ನು ಬೆಳೆಸುವುದಕ್ಕೆ, ಕೃಷಿಕರಿಗೆ ನೆರವಾಗುವುದಕ್ಕೆ ಕೇಂದ್ರ ಸರ್ಕಾರ 4,000 ಕೋಟಿ ರೂಪಾಯಿಯನ್ನು ಇದಕ್ಕಾಗಿ ಮೀಸಲಿಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. (ಏಜೆನ್ಸೀಸ್)
ದಕ್ಷಿಣ ಭಾರತದಲ್ಲಿ ಐಎಸ್​ ಉಗ್ರ ಚಟುವಟಿಕೆ- 122 ಆರೋಪಿಗಳ ಬಂಧನ ಖಾತರಿಪಡಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + thirteen =
Remember me
