ನವದೆಹಲಿ:ಸಂಸತ್ತಿನ ಭದ್ರತಾ ಲೋಪಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳಿಂದ ಸೃಷ್ಟಿಯಾಗಿರುವ ನಿರುದ್ಯೋಗವೇ ಕಾರಣ ಎಂದು ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ದೂರಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ, ಸಂಸತ್ತಿನಲ್ಲಿ ಭದ್ರತಾ ಲೋಪ ಆಗಿ ಹೋಗಿದೆ. ಆದರೆ, ಇದು ಏಕಾಯಿತು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಮೋದಿ ಪಾಲಿಸಿಗಳಿಂದ ದೇಶದ ಯುವಕರಿಗೆ ಕೆಲಸಗಳು ಸಿಗುತ್ತಿಲ್ಲ. ಸಂಸತ್ತಿನ ಭದ್ರತಾ ಲೋಪಕ್ಕೆ ನಿರುದ್ಯೋಗ ಮತ್ತು ಹಣದುಬ್ಬರವೇ ಕಾರಣ. ಇಂದು ದೇಶದ ಜನತೆ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ವಿರುದ್ಧ ಹರಿಹಾಯ್ದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇವಲ ಮಾಧ್ಯಮಗಳೊಂದಿಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ, ಸದನದಲ್ಲಿ ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ಭದ್ರತಾ ಲೋಪವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಅಮಿತ್​ ಷಾ ಆರೋಪಕ್ಕೆ ಉತ್ತರಿಸಿದ ಖರ್ಗೆ, ಕಾಂಗ್ರೆಸ್​ ಹೆಸರೇಳಿಕೊಂಡು ಅಮಿತ್​ ಷಾ ಮತ ಕೇಳುತ್ತಿದ್ದಾರೆ ಮತ್ತು ಗಾಂಧಿ ಮತ್ತು ನೆಹರೂ ಅವರನ್ನು ನಿಂದಿಸಿ ಮತ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಡೆದಿದ್ದೇನು?ಡಿ.13ರಂದು ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಆರೋಪಿ ಸಾಗರ್ ಶರ್ಮಾ, ಸಂದರ್ಶಕರ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದ ಆಘಾತಕಾರಿ ದೃಶ್ಯಗಳಿಗೆ ಸಾಕ್ಷಿಯಾಯಿತು. ಹಳದಿ ಹೊಗೆ ಹೊರಸೂಸುವ ಡಬ್ಬಿಯನ್ನು ತೆರೆದು ಸ್ಪೀಕರ್ ಕುರ್ಚಿಯನ್ನು ತಲುಪುವ ಪ್ರಯತ್ನದಲ್ಲಿ ಸಾಗರ್​ ಶರ್ಮ ಡೆಸ್ಕ್‌ನಿಂದ ಡೆಸ್ಕ್‌ಗೆ ಜಿಗಿದನು. ಆದರೆ, ಕೆಲ ಸಂಸದರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಂತೆ, ಅಲ್ಲಿಯೇ ಇದ್ದ ಮನೋರಂಜನ್ ಕೂಡ ಹೊಗೆ ಡಬ್ಬಿ ತೆರೆದು ಓಡಲು ಆರಂಭಿಸಿದರು. ಆದರೆ, ಆತನನ್ನು ಕೂಡ ಶೀಘ್ರದಲ್ಲೇ ವಶಕ್ಕೆ ಪಡೆಯಲಾಯಿತು. ಲೋಕಸಭೆಯ ಒಳಗೆ ನಡೆದ ಈ ಆಘಾತಕಾರಿ ಘಟನೆಗೂ ಮುನ್ನ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಸಿಡಿಸಿದರು ಮತ್ತು “ಸರ್ವಾಧಿಕಾರ”ದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆರೋಪಿಗಳ ಉದ್ದೇಶವೇನು?ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಹಿಂಸಾಚಾರದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಲು ಮತ್ತು ಅವುಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವೆಲ್ಲರೂ ಸೇರಿ ಸಂಸತ್ತಿನ ಒಳಗೆ ನುಗ್ಗುವ ಸಂಚು ರೂಪಿಸಿದೆವು ಎಂದು ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
ಮಾಸ್ಟರ್​ಮೈಂಡ್​ ಬೆನ್ನಲ್ಲೇ ಮತ್ತಿಬ್ಬರು ವಶಕ್ಕೆಇಡೀ ಪ್ರಕರಣ ಮಾಸ್ಟರ್​ ಮೈಂಡ್​ ಲಲಿತ್ ಝಾನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಸ್ನೇಹಿತ ಮಹೇಶ್​ನನ್ನೂ ನಿನ್ನೆ (ಡಿ.15) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ, ಘಟನೆಯಲ್ಲಿ ಕೈಲಾಶ್ ಎಂಬಾತನ ಪಾತ್ರದ ಬಗ್ಗೆಯೂ ಮಾಹಿತಿ ಹೊರಬಂದಿದೆ. ನಂತರ ಆತನನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಲಲಿತ್ ಝಾ ಬಸ್ ಮೂಲಕ ರಾಜಸ್ಥಾನಕ್ಕೆ ಪ್ರಯಾಣಿಸಿದ್ದ. ದೆಹಲಿಗೆ ಮರಳುವ ಮೊದಲು ಮೊಬೈಲ್ ಫೋನ್​ಗಳನ್ನು ನಾಶಪಡಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸೋಷಿಯಲ್ ಮೀಡಿಯಾ ಗ್ರೂಪ್​ನ ಮೂಲಕ ಲಲಿತ್ ಝಾ ಮತ್ತು ಮಹೇಶ್ ಪರಿಚಿತರಾಗಿದ್ದರೆನ್ನಲಾಗಿದೆ. ಮಹೇಶ್ ಕೂಡ ಸಂಸತ್ತಿನಲ್ಲಿ ನಡೆಸಿದ ಪ್ರತಿಭಟನೆಯ ಭಾಗವಾಗಲು ಬಯಸಿದ್ದ. ಸಂಸತ್​ನ ಭದ್ರತೆಯನ್ನು ಭೇದಿಸುವ ಮುನ್ನ ಆರೋಪಿಗಳು ಲಖನೌದಲ್ಲಿ ಎರಡು ಜೋಡಿ ಬೂಟುಗಳಲ್ಲಿ ಹೊಗೆಯ ಡಬ್ಬಿ ಅಡಗಿಸಿಡಲು 2.5 ಇಂಚು ಆಳದ ಕುಳಿಗಳನ್ನು ಕೆತ್ತಿಸಿದ್ದರೆನ್ನಲಾಗಿದೆ.
ಲಲಿತ್ ಝಾ ಹಿನ್ನೆಲೆಇಡೀ ಘಟನೆಯ ಮಾಸ್ಟರ್​ಮೈಂಡ್ ಲಲಿತ್ ಝಾ ಮೂಲತಃ ಬಿಹಾರದವನಾಗಿದ್ದು, ಕೋಲ್ಕತ್ತಾದಲ್ಲಿ ಶಿಕ್ಷಕನಾಗಿದ್ದ. ಹೋರಾಟಗಾರ ಭಗತ್​ಸಿಂಗ್​ರಿಂದ ಪ್ರೇರಿತನಾಗಿದ್ದ ಲಲಿತ್ ಝಾ, ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ತರುವ ವಿಡಿಯೊಗಳನ್ನು ಚಿತ್ರೀಕರಿಸಿ, ನಂತರ ಆ ಕುರಿತ ಮಾಧ್ಯಮ ಪ್ರಸಾರ ಖಚಿತಪಡಿಸಿಕೊಳ್ಳಲು ವಿಡಿಯೊಗಳನ್ನು ನೀಲಾಕ್ಷ ಎಂಬಾತ ನಡೆಸುತ್ತಿದ್ದ ಸಂಸ್ಥೆಗೆ ಹಸ್ತಾಂತರಿಸಿದ್ದ. ಲಲಿತ್ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ. ಲಲಿತ್ ಶಾಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದು, ಕೋಲ್ಕತದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಕೋಲ್ಕತದ ಬುರ್ರಬಜಾರ್​ಗೆ ಏಕಾಂಗಿಯಾಗಿ ಬಂದಿದ್ದ. 2 ವರ್ಷ ಹಿಂದೆ ಇದ್ದಕ್ಕಿದ್ದಂತೆ ಈ ಸ್ಥಳ ತೊರೆದಿದ್ದ ಎಂದು ಆತನ ಮನೆ ಪಕ್ಕದ ಟೀ ಸ್ಟಾಲ್ ಮಾಲೀಕ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ನಾರ್ಥ್ ಪರಗಣ ಪೊಲೀಸರು ಲಲಿತ್ ಸ್ನೇಹಿತ ನೀಲಾಕ್ಷನ ನಿವಾಸಕ್ಕೆ ಭೇಟಿ ಕೊಟ್ಟು, ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ನೀಲಾಕ್ಷನ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಾಗ ಲಲಿತ್ ವರ್ತನೆಗಳು ಹೇಗಿದ್ದವು, ಆತನ ಸಂಪರ್ಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.
ವಿಪಕ್ಷ ಸಂಸರ ಅಮಾನತುಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ 14 ಪ್ರತಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡಿರುವ 14 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್‌, ಇಬ್ಬರು ಸಿಪಿಎಂ, ಒಬ್ಬರು ಸಿಪಿಐ ಮತ್ತು ಇಬ್ಬರು ಡಿಎಂಕೆ ಪಕ್ಷದವರಾಗಿದ್ದಾರೆ ಎಂದು ತಿಳಿದು ಬಂದಿದೆ.(ಏಜೆನ್ಸೀಸ್​)
ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ಮನೋರಂಜನ್ ಕೊಠಡಿ ಸೀಜ್

300 ಕೋಟಿ ಹಣ ನನ್ನದಲ್ಲ ಆದರೆ… ಕೊನೆಗೂ ಬಾಯ್ಬಿಟ್ಟ ಕಾಂಗ್ರೆಸ್​ ಸಂಸದ, ಈ ಮಾತನ್ನು ನೀವು ಒಪ್ಪುವಿರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
