ನವದೆಹಲಿ:ಸಾಮಾನ್ಯವಾಗಿ ಮಳೆಗಾಲದ ಸಂಸತ್ ಅಧಿವೇಶನ ಜೂನ್ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಈ ಸಲದ ಅಧಿವೇಶನ ನಡೆಯುವುದು ಬಿಡುವುದು ಕರೊನಾ ಹಾವಳಿಯ ತೀವ್ರತೆಯ ಮೇಲೆ ಅವಲಂಬಿತವಾಗಿದೆ.
ಅಧಿವೇಶನ ನಡೆಸಬೇಕು ಎಂಬ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ ಜೂನ್ ಅಂತ್ಯದ ವೇಳೆಗೆ ಭಾರತದಲ್ಲಿ ಕರೊನಾ ವೈರಾಣು ಸೋಂಕಿತರ ಸಂಖ್ಯೆ ಯಾವ ಪ್ರಮಾಣದಲ್ಲಿ ಇರುತ್ತದೆ ಎಂಬುದೂ ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಇದನ್ನೂ ಓದಿಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ
ದೈಹಿಕ ಅಂತರದ ಕ್ರಮಗಳನ್ನು ಶಿಸ್ತಾಗಿ ಪಾಲಿಸಿ ಅಧಿವೇಶನ ನಡೆಸಬಹುದು ಎಂಬ ಯೋಚನೆ ಕೇಂದ್ರ ಸರ್ಕಾರಕ್ಕೆ ಇದ್ದರೂ, ಇದಕ್ಕೆ ವಿರೋಧ ಪಕ್ಷಗಳ ನಾಯಕರು ಒಪ್ಪುತ್ತಾರೆಯೇ ಎಂಬುದೂ ಮುಖ್ಯವಾಗಿದೆ. ಏಕೆಂದರೆ, ಸಂಸದ ಅಥವಾ ಅವರ ಆಪ್ತರಲ್ಲಿ ಯಾರಿಗಾದರೂ ಸೋಂಕು ತಗುಲಿದಲ್ಲಿ ವಿರೋಧ ಪಕ್ಷಗಳ ನಾಯಕರು ಅದನ್ನೇ ಕೇಂದ್ರದ ವಿರುದ್ಧ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸುವ ಸಾಧ್ಯತೆಗಳಿವೆ.
ಹೀಗಾಗಿ, ಕೇಂದ್ರ ಸರ್ಕಾರ ನೇರವಾಗಿ ರಿಸ್ಕ್ ತೆಗೆದುಕೊಳ್ಳುವ ಬದಲು ವಿರೋಧ ಪಕ್ಷಗಳ ಜತೆ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳಬಹುದು.
ಇದನ್ನೂ ಓದಿಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ
ಈ ಮಧ್ಯೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಓಂ ಬಿರ್ಲಾ, ‘‘ಕರೊನಾದ ತುರ್ತು ಆರೋಗ್ಯ ಸ್ಥಿತಿಯಿದ್ದರೂ, ಸೂಕ್ತ ಸಮಯಕ್ಕೆ ಮುಂಗಾರು ಅಧಿವೇಶನ ನಡೆಯಬಹುದು ಎಂಬ ಆಶಾಭಾವ ಹೊಂದಿದ್ದೇನೆ. ಹಾಗಿದ್ದರೂ, ಆಗಿನ ಸನ್ನಿವೇಶ ಹೇಗಿರಲಿದೆ ಎಂಬುದೂ ಮುಖ್ಯ’’ ಎಂದು ಹೇಳಿದ್ದಾರೆ. ಕಳೆದ ವರ್ಷ ಜೂನ್ 17ರಂದು ಮಳೆಗಾಲದ ಅಧಿವೇಶನ ಪ್ರಾರಂಭವಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
