ನವದೆಹಲಿ:ಸಂಸತ್​ನ ಮೇಲ್ಮನೆ ರಾಜ್ಯಸಭೆಯಲ್ಲಿ ಈ ವರ್ಷ 73 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ 51 ಸ್ಥಾನಗಳ ಆಯ್ಕೆ ಏಪ್ರಿಲ್​ನಲ್ಲಿ ನಡೆಯಲಿದೆ. ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಬಿಜೆಪಿಗೆ ಇದು ಮಹತ್ವದ ಚುನಾವಣೆಯಾಗಿದ್ದು, ಕಾಂಗ್ರೆಸ್ ಕೂಡ ಹೆಚ್ಚು ಸೀಟುಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ. ಅಂದಾಜಿನ ಪ್ರಕಾರ ಎರಡೂ ರಾಷ್ಟ್ರೀಯ ಪಕ್ಷಗಳ ಸ್ಥಾನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ತೃಣಮೂಲ ಕಾಂಗ್ರೆಸ್ ಮತ್ತು ವೈಎಸ್​ಆರ್ ಕಾಂಗ್ರೆಸ್ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ 82 ಸದಸ್ಯರನ್ನು ಹೊಂದಿದೆ. ಬಿಜೆಡಿ ಮತ್ತು ವೈಎಸ್​ಆರ್​ಸಿಯಂತಹ ಪಕ್ಷಗಳ ಬೆಂಬಲ ಪಡೆದು ಮಸೂದೆಗಳನ್ನು ಅಂಗೀಕರಿಸುತ್ತಿದೆ. ಏಪ್ರಿಲ್​ನಲ್ಲಿ ಬಿಜೆಪಿಯ 18 ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಇವರಲ್ಲಿ 13 ಸ್ಥಾನಗಳು ಬಿಜೆಪಿಗೆ ಲಭಿಸಬಹುದು ಎಂದು ಅಂದಾಜಿಸಲಾಗಿದೆ. 46 ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್​ನ 11 ಸದಸ್ಯರು ನಿವೃತ್ತಿ ಹೊಂದಲಿದ್ದು, ಅದು 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಒಡಿಶಾದ ಮೂರು ಸ್ಥಾನಗಳಲ್ಲಿ ಬಿಜೆಡಿಗೆ ಎರಡು ಮತ್ತು ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ. ಆಂಧ್ರಪ್ರದೇಶದ ಎಲ್ಲ ನಾಲ್ಕು ಸ್ಥಾನಗಳನ್ನೂ ವೈಎಸ್​ಆರ್ ಕಾಂಗ್ರೆಸ್ ಬಾಚಿಕೊಳ್ಳಲಿದೆ. ಹಿಮಾಚಲ ಮತ್ತು ಹರಿಯಾಣದಿಂದ ಬಿಜೆಪಿಗೆ ತಲಾ ಒಂದು ಸ್ಥಾನ ಸಿಗಲಿದೆ ಎನ್ನಲಾಗಿದೆ. ಶಿವಸೇನೆ ಜತೆ ಮೈತ್ರಿ ಮುರಿದು ಬಿದ್ದಿದ್ದರಿಂದ ಸರ್ಕಾರ ರಚಿಸಲು ವಿಫಲವಾಗಿರುವ ಬಿಜೆಪಿ ಮಹಾರಾಷ್ಟ್ರದಿಂದ ಇಬ್ಬರು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುವ ನಿರೀಕ್ಷೆಯಲ್ಲಿದೆ. ಶಿವಸೇನೆ ಕೂಡ ತನ್ನ ಮೈತ್ರಿ ಪಕ್ಷಗಳಾದ ಎನ್​ಸಿಪಿ, ಕಾಂಗ್ರೆಸ್​ನ ಬೆಂಬಲ ಪಡೆದು ಒಬ್ಬರನ್ನು ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆ ಇದೆ. ಎನ್​ಸಿಪಿ, ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಕ್ರಮವಾಗಿ 2 ಮತ್ತು 1 ಸ್ಥಾನಗಳನ್ನು ಪಡೆಯಲಿವೆ.
ರಾಜ್ಯಸಭೆ ಚುನಾವಣೆ ನಡೆಯುವ ರಾಜ್ಯಗಳು
ಮಹಾರಾಷ್ಟ್ರ- 7, ತಮಿಳುನಾಡು- 6, ಪಶ್ಚಿಮ ಬಂಗಾಳ ಮತ್ತು ಬಿಹಾರ- ತಲಾ 5, ಆಂಧ್ರಪ್ರದೇಶ, ಗುಜರಾತ್- ತಲಾ 4, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಒಡಿಶಾ – ತಲಾ 3, ಜಾರ್ಖಂಡ್ ಮತ್ತು ಛತ್ತೀಸ್​ಗಢ- ತಲಾ 2, ಅಸ್ಸಾಂ, ಮಣಿಪುರ, ಹರಿಯಾಣ ಮತ್ತು ಹಿಮಾಚಲಪ್ರದೇಶದ- ತಲಾ 1 ಸ್ಥಾನಗಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
