ನವದೆಹಲಿ:ದತ್ತಾಂಶ ರಕ್ಷಣಾ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯು ಜಿಯೊ, ಏರ್​ಟೆಲ್, ಉಬರ್, ಓಲಾ ಮತ್ತು ಟ್ರೂಕಾಲರ್​ಗಳಿಗೆ ನೋಟಿಸ್ ಜಾರಿ ಮಾಡಿದೆ. ದತ್ತಾಂಶ ಭದ್ರತೆಗೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ಸಮಿತಿ ಈ ಸಂಸ್ಥೆಗಳಿಗೆ ಸೂಚಿಸಿದೆ. ಎಲ್ಲ ಕಂಪನಿಗಳಿಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಸಾಮಾಜಿಕ ಜಾಲತಾಣ ಫೇಸ್​ಬುಕ್ ಮತ್ತು ಟ್ವಿಟ್ಟರ್, ಇ-ಕಾಮರ್ಸ್ ಕಂಪನಿ ಅಮೆಜಾನ್ ಪ್ರತಿನಿಧಿಗಳು ಈಗಾಗಲೇ ಸಮಿತಿ ಮುಂದೆ ಹಾಜರಾಗಿದ್ದಾರೆ. ಗೂಗಲ್ ಮತ್ತು ಪೇಟಿಎಂ ಪ್ರತಿನಿಧಿಗಳು ಗುರುವಾರ ಸಮಿತಿ ಮುಂದೆ ಹಾಜರಾಗಲಿದ್ದಾರೆ. ವ್ಯಕ್ತಿಗಳ ಖಾಸಗಿ ದತ್ತಾಂಶಗಳಿಗೆ ರಕ್ಷಣೆ ನೀಡುವುದು ಸಮಿತಿ ಉದ್ದೇಶವಾಗಿದೆ. ಅದಕ್ಕಾಗಿ ಒಂದು ಪ್ರಾಧಿಕಾರ ರಚನೆಯ ಗುರಿಯೂ ಇದೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ.
ನವದೆಹಲಿ:ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೇಹ್ ನಗರವನ್ನು ಚೀನಾದ ಭಾಗವಾಗಿ ಟ್ವಿಟರ್ ತೋರಿಸಿದ್ದು, ಶಿಕ್ಷಾರ್ಹ ಅಪರಾಧ ಎಂದು ಸಂಸದೀಯ ಸಮಿತಿ ತಿಳಿಸಿದೆ. ಈ ವಿಚಾರವಾಗಿ ಟ್ವಿಟರ್ ಅಸಮಪರ್ಕ ಉತ್ತರ ನೀಡಿರುವುದಾಗಿ ಸಂಸದೆ ಮೀನಾಕ್ಷಿ ಲೇಖಿ ನೇತೃತ್ವದ ಸಮಿತಿ ಹೇಳಿದೆ. ಕೆಲ ದಿನಗಳ ಹಿಂದೆ ಟ್ವಿಟರ್​ನಲ್ಲಿ ಲೇಹ್ ನಗರವನ್ನು ಚೀನಾದ ಭಾಗವಾಗಿ ಬಿಂಬಿಸಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಸಂಸದೀಯ ಜಂಟಿ ಸಮಿಟಿಯು ಟ್ವಿಟರ್​ಗೆ ಪ್ರಶ್ನೆಗಳನ್ನು ಕೇಳಿದೆ. ‘ವೈಯಕ್ತಿಯ ದತ್ತಾಂಶ ಮಸೂದೆಯನ್ನು ಪರಿಶೀಲಿಸಲಾಗಿದೆ. ಭಾರತೀಯರ ಭಾವನೆಯನ್ನು ಗೌರವಿಸುವುದಾಗಿ’ ಟ್ವಿಟ್ಟರ್ ಹೇಳಿಕೊಂಡಿದೆ. ಆದರೆ ಇದು ಕೇವಲ ಭಾವನೆಗಳ ವಿಚಾರವಲ್ಲ. ಭಾರತೀಯ ಸಾರ್ವಭೌಮತ್ವ, ಏಕತೆಗೆ ಸಂಬಂಧಿಸಿದ ವಿಚಾರ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಏಳು ವರ್ಷದವರೆಗೆ ಜೈಲು ಶಿಕ್ಷೆ ನೀಡಬಹುದು ಎಂದು ಸಮಿತಿ ಹೇಳಿದೆ.
ತಂದೆಗೆ ಕರೊನಾ ಪಾಸಿಟಿವ್, ಮಗನಿಗೆ ತಪ್ಪಿತು ಆಡುವ ಅವಕಾಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 8 =
Remember me
