ನವದೆಹಲಿ:ನಾವೆಲ್ಲರೂ ಸಣ್ಣವರಾಗಿದ್ದಾಗ ಸಾಧು ಬಳಿ ಬೆಳೆದ ಗಿಳಿಯ ವರ್ತನೆ ಹಾಗೂ ಕಟುಕನ ಬಳಿ ಬೆಳೆದ ಗಿಳಿಯ ವರ್ತನೆ ಕುರಿತ ಕತೆಯನ್ನು ಕೇಳಿರುತ್ತೇವೆ. ಅಲ್ಲದೆ, ಗಿಳಿಗಳು ಜನರ ಮಾತು, ಹಾಡುಗಳನ್ನು ಅನುಕರಿಸುತ್ತವೆ ಎಂಬುದೂ ಗೊತ್ತಿರುವ ಸಂಗತಿ.
ಆದರೆ, ಮುಂಬೈನಲ್ಲಿ ವ್ಯಕ್ತಿಯೊಬ್ಬರು ಗಿಟಾರ್​ ನುಡಿಸಲು ಆರಂಭಿಸಿದರೆ, ಅದೆಲ್ಲಿಯೋ ಇರುವ ಗಿಳಿಗಳು ಅವರ ಮನೆಯ ಕಿಟಕಿ ಬಳಿಗೆ ಬಂದು ಗಿಟಾರ್​ನ ಹಿಮ್ಮೇಳಕ್ಕೆ ತಕ್ಕಂತೆ ಹಾಡು ಹಾಡಲಾರಂಭಿಸುತ್ತವೆ!
ಇದನ್ನೂ ಓದಿ:ಮಾತು ಕೇಳಿಲ್ಲ ಅಂದ್ರೆ ಉದ್ಧವ್​ ಕಾಕಾಗೆ ಹೇಳ್ತೇನೆ ಅಂದಿದ್ದ ಅಮ್ಮನಿಗೆ ಖುದ್ದು ಫೋನ್​ ಮಾಡಿದ ಸಿಎಂ ಠಾಕ್ರೆ!
ಈ ಗಿಳಿಗಳಿಗೆ ಯಾವುದೇ ತರಬೇತಿ ನೀಡದಿದ್ದರೂ, ಗಿಟಾರ್​ನ ಸದ್ದು ಕೇಳುತ್ತಲೇ ಕಿಟಕಿ ಬಳಿಗೆ ಹಾರಿ ಬಂದು ಹಾಡುತ್ತವೆ ಎಂದು ಜತಿನ್​ ತಾಲೂಕ್ದಾರ್​ ಎಂಬುವರು ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಗಿಳಿಗಳು ಹಾಡುತ್ತಿರುವ ವಿಡಿಯೋ ತುಣಕನ್ನೂ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.
ಈ ಗಿಳಿಗಳಿಗೆ ತಾವು ಜಿಮ್​ ಮತ್ತು ಕೈರಿ ಎಂದು ಹೆಸರು ಇಟ್ಟಿರುವುದಾಗಿಯೂ ಹೇಳಿದ್ದಾರೆ. ಕಾಡು ಗಿಳಿಗಳು ಸಾಮಾನ್ಯವಾಗಿ ನಾಚಿಕೆಯ ಸ್ವಭಾವದವಾಗಿರುತ್ತವೆ. ಆದರೂ ಈ ಕಾಡು ಗಿಳಿಗಳು ಈಗ ತಮಗೆ ಇಷ್ಟು ಹತ್ತಿರಾಗಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://www.facebook.com/1185561299/videos/10223202220822264/
ಲಡಾಖ್​ ಬಿಕ್ಕಟ್ಟಿನ ನಡುವೆಯೂ ಭಾರತದಿಂದ 2 ರಸ್ತೆಗಳ ಕಾಮಗಾರಿ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
