ನ್ಯೂಯಾರ್ಕ್:ಬೃಹತ್​ ಕಂಟೈನರ್​ ಹಡಗು ಡಿಕ್ಕಿ ಹೊಡೆದ ಪರಿಣಾಮ ಯುನೈಟೆಡ್​​ ಸ್ಟೇಟ್ಸ್​, ಮೇರಿಲ್ಯಾಂಡ್​ನ ಬಾಲ್ಟಿಮೋರ್​ನಲ್ಲಿರುವ ಫ್ರಾನ್ಸಿಸ್​ ಸ್ಕಾಟ್​ ಕೀ ಬ್ರಿಡ್ಜ್​ನ ಬಹು ಭಾಗ ಕುಸಿದು ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಯುಎಸ್​ ಸ್ಥಳೀಯ ಕಾಲಮಾನ ತಡರಾತ್ರಿ 1.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಈ ಘಟನೆಯನ್ನು “ಸಾಮೂಹಿಕ ಅಪಘಾತ” ಎಂದು ಬಾಲ್ಟಿಮೋರ್​ನ ಅಗ್ನಿಶಾಮಕ ಇಲಾಖೆ ಕರೆದಿದೆ. ಮಾಧ್ಯಮ ವರದಿಗಳ ಪ್ರಕಾರ ಅನೇಕ ವಾಹನಗಳು ಪಟಾಪ್ಸ್ಕೋ ನದಿಯ ಪಾಲಾಗಿವೆ. ಅಲ್ಲದೆ, ಘಟನಾ ಸಮಯದಲ್ಲಿ 20 ನಿರ್ಮಾಣ ಕಾರ್ಮಿಕರು ಸೇತುವೆ ಮೇಲಿದ್ದರು ಎಂದು ವರದಿಯಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ 3 ಕಿ.ಮೀ ಉದ್ದದ ಬೃಹತ್​ ಸೇತುವೆ ಕುಸಿದು ಬೀಳುವ ಭಯಾನಕ ದೃಶ್ಯ ಸೆರೆಯಾಗಿದೆ. ಫ್ರಾನ್ಸಿಸ್​ ಸ್ಕಾಟ್​ ಕೀ ಸೇತುವೆಯ ಒಂದು ಪಿಲ್ಲರ್​​ಗೆ ಹಡಗು ಡಿಕ್ಕಿ ಹೊಡೆಯುತ್ತದೆ. ಇದರ ಪರಿಣಾಮ ಸೇತುವೆಯ ಅನೇಕ ಭಾಗಗಳಲ್ಲಿ ಬಿರುಕು ಬಿಟ್ಟು ಒಮ್ಮೆಲೆ ಕುಸಿದು ನದಿಗೆ ಬೀಳುತ್ತದೆ.
ಸೇತುವೆಗೆ ಡಿಕ್ಕಿ ಹೊಡೆದ ಬೆನ್ನಲ್ಲೇ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ, ನೀರಿನಲ್ಲಿ ಮುಳುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ.
The Francis Scott Key Bridge in Baltimore, Maryland which crosses the Patapsco River has reportedly Collapsed within the last few minutes after being Struck by a Large Container Ship; a Mass Casualty Incident has been Declared with over a Dozen Cars and many Individuals said to…pic.twitter.com/SsPMU8Mjph
— OSINTdefender (@sentdefender)March 26, 2024

ಸಿಂಗಪೂರ್​ ಮೂಲದ ಕಂಟೈನರ್ ಹಡಗು ಡಾಲಿ, ಬಾಲ್ಟಿಮೋರ್​ನಲ್ಲಿರುವ ಫ್ರಾನ್ಸಿಸ್​ ಸ್ಕಾಟ್​ ಕೀ ಬ್ರಿಡ್ಜ್​ನ​ ಪಿಲ್ಲರ್​ ಒಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಹಡಗಿನ ನೋಂದಾಯಿತ ಮಾಲೀಕರಾದ ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಸಿನರ್ಜಿ ಮೆರೈನ್ ಗ್ರೂಪ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಘಟನೆಗೆ ನಿಖರವಾದ ಕಾರಣ ತಿಳಿದುಬರಬೇಕಿದೆ. ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಮತ್ತು ಹಡಗಿನಲ್ಲಿದ್ದ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಎರಡೂ ದಿಕ್ಕುಗಳಲ್ಲಿನ ಎಲ್ಲಾ ಮಾರ್ಗಗಳನ್ನು ಸಂಚಾರಕ್ಕಾಗಿ ಮುಚ್ಚಲಾಗಿದೆ ಎಂದು ಸ್ಥಳೀಯ ಟ್ರಾಫಿಕ್ ತಿಳಿಸಿದೆ.(ಏಜೆನ್ಸೀಸ್​)
ಈ ಒಂದು ಕಾರಣಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲ್ಲ! ಕೊನೆಗೂ ಮೌನ ಮುರಿದ ತ್ರಿಷಾ

ಕ್ರಿಕೆಟ್​ ಬಿಟ್ಟು 2 ತಿಂಗಳು ಕೊಹ್ಲಿ ಹೇಗಿದ್ರು ಗೊತ್ತಾ? ನಿಜಕ್ಕೂ ಅದ್ಭುತ ಅನುಭವ ಎಂದ ವಿರಾಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
