ಬೆಂಗಳೂರು:ಅಫ್ಘಾನಿಸ್ತಾನದಲ್ಲಿನ ಘರ್ಷಣೆ, ಅಲ್ಲೋಲ-ಕಲ್ಲೋಲ ಕುರಿತು ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದ ನಡೆಯುತ್ತಿದ್ದು, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರೂ ಆಗಿರುವ ಮಾಜಿ ರಾಯಭಾರಿ ಪಾರ್ಥಸಾರಥಿ ಹಾಗೂ ರಾಜಕೀಯ ವಿಶ್ಲೇಷಕ ಪ್ರೇಮಶೇಖರ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರ ಪ್ರಶ್ನೆಗಳಿಗೂ ಪ್ರತಿಕ್ರಿಯಿಸುತ್ತಿದ್ದಾರೆ.
ಅಫ್ಘಾನಿಸ್ತಾನಕ್ಕಾಗಿ ಅಮೆರಿಕ 20 ವರ್ಷಗಳಲ್ಲಿ 3 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ, 2442 ಸೈನಿಕರನ್ನು ಕಳೆದುಕೊಂಡಿದ್ದೆ. ಇಷ್ಟಾದರೂ ಮತ್ತೆ ಅದೇ ತಾಲಿಬಾನಿಗೆ ವಾಪಸ್ ಬಿಟ್ಟುಕೊಟ್ಟು ಹೋಗಿದೆ. ಇದಕ್ಕೆ ಪ್ರಮುಖ ಕಾರಣ ಮಾನಸಿಕ ದೃಢತೆ. ಯುದ್ಧ ರಣರಂಗದಲ್ಲಿ ನಡೆಯುವ ಮೊದಲು ಮಾನಸಿಕವಾಗಿ ನಡೆಯುತ್ತದೆ. ಆದರೆ ಅಫ್ಘಾನಿಸ್ತಾನ ಮನಸಿನಲ್ಲಿ ದೃಢನಿಶ್ಚಯ ಇಲ್ಲದೆ ಶರಣಾಗಿದೆ ಎಂದು ಪ್ರೇಮಶೇಖರ ಅಭಿಪ್ರಾಯ ಪಟ್ಟಿದ್ದಾರೆ.
ತಾಲಿಬಾನ್​ ಸಣ್ಣ ಅವಧಿಯಲ್ಲಿ ಕಾಬೂಲನ್ನು ಹಿಡಿತಕ್ಕೆ ತೆಗೆದುಕೊಂಡಿದ್ದು ಅಚ್ಚರಿ ಏನಲ್ಲ. ಪ್ರೆಸಿಡೆಂಟ್ ಬುಷ್ ಇದನ್ನು ಶುರು ಮಾಡಿದ್ದು. ತಾಂತ್ರಿಕವಾಗಿ ಅಷ್ಟೇನೂ ಸಮರ್ಥವಲ್ಲದ ತಾಲಿಬಾನ್​ ಮುಂದೆ ಪ್ರಪಂಚದ ಸೂಪರ್ ಪವರ್ ಎನಿಸಿರುವ ಅಮೆರಿಕ ತನ್ನ ಪವರ್ ಹಿಂದೆಗೆದುಕೊಂಡಿದೆ. ಸೂಪರ್ ಪವರ್​ ಆಗಿರುವ ಅಮೆರಿಕ ಹಾಗೆ ಹಿಂಪಡೆಯಬಾರದಿತ್ತು ಎಂದು ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಗುರಿ ಈಡೇರಿದೆ ಎಂಬುದನ್ನು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಮುಖ್ಯ ಗುರಿ ಇದ್ದಿದ್ದು ಅಲ್​ಖೈದಾ. ಈ ಮೂಲಕ ಅವರು ಅದನ್ನು ಈಡೇರಿಸಿಕೊಂಡಿದ್ದಾರೆ. ಆದರೆ ಸೂಪರ್ ಪವರ್​ ಆಗಿರುವ ಅಮೆರಿಕ ಪವರ್​ ಹಿಂಪಡೆಯಬಾರದಿತ್ತು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸಂವಾದ ಆಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
https://www.clubhouse.com/join/vijayavani/0Atc8mC9/Mw7JarkM
ಕಳೆದು ಹೋದ ಮೊಬೈಲ್​ಫೋನ್​ಗಾಗಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ; ಫೋನ್​ ಕಳ್ಕೊಂಡವನೊಬ್ಬ, ಪ್ರಾಣ ಕಳ್ಕೊಂಡಿದ್ದು ಮತ್ತೊಬ್ಬ…

ಆರ್ಟಿಕಲ್​ 371 ಹಿಂಪಡೆಯದೇ ಇದ್ದಿದ್ದರೆ ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕೆ ಆದ ಸ್ಥಿತಿಯೇ ಆಗುತ್ತಿತ್ತು: ಬಿ.ವೈ. ರಾಘವೇಂದ್ರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − ten =
Remember me
