ಬೆಂಗಳೂರು:ಪ್ರತಿ ಹೆಣ್ಣು ಕೂಡ ತಾಯಿ ಆಗಬೇಕು ಎಂದು ಬಯಸುತ್ತಾಳೆ. ಆದರೆ ಈ ‘ಪ್ಯಾರ್​ಗೆ ಆಗ್​ಬಿಟ್ಟೈತೆ’ ಹುಡುಗಿ ‘ನಾನಂತೂ ಅಮ್ಮನಾಗಲ್ಲ’ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ.
ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದು ಬೇರೆ ಯಾರೂ ಅಲ್ಲ. ಕನ್ನಡದ ‘ಗೋವಿಂದಾಯ ನಮಃ’ ಸಿನಿಮಾದಲ್ಲಿ ‘ಪ್ಯಾರ್​ಗೆ ಆಗ್​ಬಿಟ್ಟೈತೆ’ ಎನ್ನುತ್ತ ಕನ್ನಡಿಗರ ಮನಗೆದ್ದು ನೆಲೆಸಿ ಈಗ ‘ಬಟರ್​ ಫ್ಲೈ’ ಹಾರಿಸುತ್ತಿರುವ ನಟಿ ಪಾರೂಲ್ ಯಾದವ್.
‘ಹೆಣ್ತನದ ಸಾರವೇ ತಾಯ್ತನ. ಆದರೆ ನಾನಿಂದು ಅಮ್ಮನಾಗಲು ಬಯಸುತ್ತಿಲ್ಲ. ಹೀಗಂತ ಹೇಳುವುದು ಒಂದು ಹೆಣ್ಣಿಗೆ ತುಂಬಾ ಕಷ್ಟ. ಆದರೆ ನಾನು ಆಣೆ ಮಾಡಿ ಹೇಳುತ್ತಿದ್ದೇನೆ, ನಾನು ತಾಯ್ತನವನ್ನು ತ್ಯಜಿಸುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಏನು ಮಾಡುವುದು? ಈ ದೇಶ ಎಲ್ಲ ಕಡೆಯಲ್ಲೂ ಹೆಣ್ಣಿಗೆ ಕೆಟ್ಟದಾಗಿಯೇ ಇದೆ. ಹತ್ರಾಸ್​ನಲ್ಲಿನ ಅತಿಘೋರ ಘಟನೆಯೇ ಅದಕ್ಕೆ ತಾಜಾ ಉದಾಹರಣೆ. ಕಾರಣಗಳು ಬೇರೆ ಇರಬಹುದು, ಆದರೆ ಸಂಕಷ್ಟ ಯಾವಾಗಲೂ ಹೆಣ್ಣಿಗೇ, ಅವಳಿಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ..’ ಎಂಬುದಾಗಿ ಪಾರೂಲ್​ ಹೇಳಿಕೊಂಡಿದ್ದಾರೆ.
Being a mother is the epitome of womanhood but, today I don't want to be a mother. It's the most difficult thing for a girl to say but I swear I'm giving up my motherhood. What if my child is a girl?? This country is brutal for women – all around.
— Parul Yadav (@TheParulYadav)October 1, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 12 =
Remember me
