ಬರಮೇರ್​:ಪ್ರಯಾಣಿಕರು ತುಂಬಿದ್ದ ಖಾಸಗಿ ಬಸ್​​ವೊಂದಕ್ಕೆ ಟ್ಯಾಂಕರ್​​ ಟ್ರಕ್​​ ಅಪ್ಪಳಿಸಿದ ಪರಿಣಾಮವಾಗಿ ಬಸ್​​ ಹೊತ್ತಿ ಉರಿದಿರುವ ಘಟನೆ ರಾಜಸ್ಥಾನದಿಂದ ವರದಿಯಾಗಿದೆ. ರಾಜಸ್ಥಾನದ ಬರಮೇರ್​ ಜಿಲ್ಲೆಯ ಪಚ್​ಪದ್ರ ಗ್ರಾಮದ ಬಳಿ ಬರಮೇರ್​-ಜೋಧ್​ಪುರ್​ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ. ಪರಿಣಾಮವಾಗಿ ಕನಿಷ್ಠ 5 ಜನ ಸಾವಪ್ಪಿದ್ದಾರೆ ಹಾಗೂ ಹಲವು ಇತರ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ 9.55 ಕ್ಕೆ ಬಲೋತ್ರಾದಿಂದ ಪ್ರಯಾಣಿಕರೊಂದಿಗೆ ಹೊರಟ ಬಸ್ಸಿಗೆ ರಾಂಗ್​ ಸೈಡ್​ನಲ್ಲಿ ಬಂದ ಟ್ಯಾಂಕರ್​ ಟ್ರೇಲರ್​ ಡಿಕ್ಕಿ ಹೊಡೆಯಿತು. ಇದರಿಂದಾಗಿ ಬಸ್​ಗೆ ಬೆಂಕಿ ಹತ್ತಿಕೊಂಡಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಬಸ್ಸಿನಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ಬರ್​​ಮೇರ್​ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ಪುನೀತ್​ ಮುದ್ದಿಸಿದ್ದ ಆನೆಮರಿಗೆ ಅವರದ್ದೇ ಹೆಸರು! ಅರಣ್ಯ ಇಲಾಖೆಯಿಂದ ವಿಶಿಷ್ಟ ಶ್ರದ್ಧಾಂಜಲಿ

ಒಂಟಿ ಮನೆಯಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರ ನಡೆಸುತ್ತಿದ್ದ 12 ಜನರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seventeen =
Remember me
