ಮುಂಬೈ:ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿದ ಬೆನ್ನಲ್ಲೇ ಪುಣೆಯಿಂದ ದೆಹಲಿಯತ್ತ ಸಾಗುತ್ತಿದ್ದ ಆಕಾಸ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶವಾದ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಇದನ್ನೂ ಓದಿ:‘ನನ್ನ ಕಾಲುಗಳು ಉದ್ದವಾಗಿವೆಯೆಂದು ವಾಯುಪಡೆಯಲ್ಲಿ ಕೆಲಸಕ್ಕಾಗಿ ನನ್ನನ್ನು ತಿರಸ್ಕರಿಸಲಾಗಿತ್ತು’: ಅಮಿತಾಭ್​​ ಬಚ್ಚನ್
ಪುಣೆಯಿಂದ ದೆಹಲಿಗೆ ತೆರಳುತ್ತಿದ್ದ ಆಕಾಸ ಫ್ಲೈಟ್​ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇದೆ ಎಂದು ಹೇಳಿದ ಕೂಡಲೇ ಆತಂಕಗೊಂಡ ವಿಮಾನ ಸಿಬ್ಬಂದಿ ಇಂದು ಮಧ್ಯರಾತ್ರಿ 12.42ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಡಿಂಗ್​ ಮಾಡಿದೆ.
ವಿಮಾನ ಕೆಳಗಿಳಿದ ತಕ್ಷಣ ಬಾಂಬ್ ಪತ್ತೆ ಮತ್ತು ಡಿಸ್ಪೋಸಲ್ ಸ್ಕ್ವಾಡ್ (BDDS) ತಂಡವನ್ನು ಕರೆಸಿ, ವ್ಯಕ್ತಿಯ ಬ್ಯಾಗ್ ಅನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ ಬ್ಯಾಗ್​ನಲ್ಲಿ ಯಾವುದೇ ಬಾಂಬ್​ ಕಂಡುಬಂದಿಲ್ಲ. ತದನಂತರದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಕಾರವಾರ ವಾಯುನೆಲೆ ನಿರಾಶ್ರಿತರಿಗೆ ಸಮಪ್ರಮಾಣದ ಪರಿಹಾರ; ಸಿಎಂ ಸಿದ್ದರಾಮಯ್ಯ ಭರವಸೆ
ಆಕಾಸ ಏರ್​ಲೈನ್ಸ್​ ಅಧಿಕೃತ ಹೇಳಿಕೆಯ ಪ್ರಕಾರ, “ಅಕಾಸಾ ಏರ್ ಫ್ಲೈಟ್ ಕ್ಯೂಪಿ 1148, ಅಕ್ಟೋಬರ್ 21, 2023 ರಂದು 12.07ಕ್ಕೆ ಪುಣೆಯಿಂದ ದೆಹಲಿಗೆ ತೆರಳುತ್ತಿತ್ತು. 185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ದಿದ್ದ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಬೆದರಿಕೆ ಕರೆ ಸ್ವೀಕರಿಸಿದೆವು” ಎಂದು ತಿಳಿಸಿದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, “ಸಿಐಎಸ್ಎಫ್ ಅಧಿಕಾರಿ ಮುಂಬೈ ಪೊಲೀಸ್ ನಿಯಂತ್ರಣಕ್ಕೆ ಮುಂಜಾನೆ 2.30ರ ಸುಮಾರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಆ ವಿಮಾನದ ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸಲಾಯಿತು. ಬಿಡಿಡಿಎಸ್ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿ ಹಾಜರಿದ್ದರು. ಆದರೆ ತನಿಖೆಯ ವೇಳೆ ಪೊಲೀಸರಿಗೆ ಅಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಭಗವಂತ ಕೇಸರಿ’ ಚಿತ್ರದ 2ದಿನದ ಕಲೆಕ್ಷನ್‌ 27ಕೋಟಿ ರೂ.: ಬಾಲಕೃಷ್ಣ ಸಂಭಾವನೆ ಎಷ್ಟು?
“ಆ ವಿಮಾನದಲ್ಲಿ ವ್ಯಕ್ತಿಯ ಜತೆಗೆ ಪ್ರಯಾಣಿಸುತ್ತಿದ್ದ ಅವರ ಸಂಬಂಧಿಯೊಬ್ಬರು ಅವರು ಎದೆನೋವಿಗೆ ಮದ್ದು ಸೇವಿಸಿ ಏನೇನೋ ಬೊಬ್ಬೆ ಹೊಡೆಯುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಲಂಕಷ ತನಿಖೆಯ ನಂತರ ಮುಂಬೈ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ವಿಮಾನ ದೆಹಲಿಯತ್ತ ಸಾಗಿತು. ಸದ್ಯ ಮುಂಬೈ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).
ಮನೆಗೊಂದು ಉದ್ಯೋಗ, ಸಮಪ್ರಮಾಣದ ಪರಿಹಾರ, ಸೈಟ್​​​ಗಾಗಿನ ನಿರಾಶ್ರಿತರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
