ಪಣಜಿ:ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದಾಗಿ ಕರ್ನಾಟಕದ ಮಂಗಳೂರಿನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್​ ರೈಲು ದಕ್ಷಿಣ ಗೋವಾದ ದೂಧ್​ಸಾಗರ್​ ಮತ್ತು ಸೊನಾಲಿಮ್​ ನಡುವೆ ಶುಕ್ರವಾರ ಹಳಿತಪ್ಪಿದೆ.
ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ನೈರುತ್ಯ ರೈಲ್ವೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ರೈಲು ನಂಬರ್​ 01134 ಮಂಗಳೂರು ಜಂಕ್ಷನ್​ನಿಂದ ಛತ್ರಪತಿ ಶಿವಾಜಿ ಮಹಾರಾಜ್​ ಟರ್ಮಿನಸ್​ ತೆರಳುತ್ತಿತ್ತು. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಿಪ್ಲುನ್​ ಮತ್ತು ಕಾಮಥೆ ನಡುವೆ ಇರುವ ವಶಿಷ್ಠಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಡಂಗಾವ್​ ಲೊಂಡಾ ಮಿರಾಜ್​ ಬದಲಿ ಮಾರ್ಗದಲ್ಲಿ ಪ್ಯಾಸೆಂಜರ್​ ರೈಲು ತೆರಳುತ್ತಿತ್ತು. ಆದರೆ, ದೂಧ್​ಸಾಗರ್​ ಮತ್ತು ಸೊನೌಲಿಮ್​ ಮಾರ್ಗ ಮಧ್ಯೆ ಭೂಕುಸಿತದಿಂದ ರೈಲು ಹಳಿತಪ್ಪಿದೆ.
ಮತ್ತೊಂದು ರೈಲು, ಹಜರತ್ ನಿಜಾಮುದ್ದೀನ್-ವಾಸ್ಕೋ ಡಾ ಗಾಮಾ ಎಕ್ಸ್‌ಪ್ರೆಸ್, ಭೂಕುಸಿತದಿಂದಾಗಿ ಕಾರಂಜೋಲ್ ಮತ್ತು ದುಧ್‌ಸಾಗರ್ ನಡುವಿನ ಹಳಿಗಳಲ್ಲಿ ನಿಲ್ಲಿಸಲಾಯಿತು. ರೈಲನ್ನು ಕರ್ನಾಟಕದ ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು.(ಏಜೆನ್ಸೀಸ್​)
ಟೋಕಿಯೋ ಒಲಿಂಪಿಕ್ಸ್: ಮೊದಲ ಸುತ್ತಿನಲ್ಲಿ ಗೆಲುವಿನ ನಗಾರಿ ಬಾರಿಸಿದ ಭಾರತದ ‘ನಗಾಲ್’

Tokyo Olympics| ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಮೀರಾಬಾಯಿ ಚಾನುಗೆ ಪ್ರಧಾನಿ ಶ್ಲಾಘನೆ​

ಸೆಪ್ಟೆಂಬರ್​ನಿಂದ ಮಕ್ಕಳಿಗೂ ಕರೊನಾ ಲಸಿಕೆ ಆರಂಭ ಸಾಧ್ಯತೆ: ಏಮ್ಸ್​ ಮುಖ್ಯಸ್ಥ ಡಾ. ರಣದೀಪ್​ ಗುಲೇರಿಯಾ

Sign in to your account
Please enter an answer in digits:five × one =
Remember me
