ಒಡಿಶಾ:ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಅಪರೂಪದ ಆಘಾತಕಾರಿ ರೈಲು ದುರಂತದಿಂದಾಗಿ ಸುಮಾರು 288ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 900ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು. ಇದೀಗ ಎಕ್ಸ್​ಪ್ರೆಸ್​ವೇ ದುರಸ್ತಿಗೊಂಡಿದ್ದು ಪ್ಯಾಸೆಂಜರ್​ ರೈಲುಗಳು ಸಂಚರಿಸಲು ಶುರು ಮಾಡಿವೆ.
ಇದನ್ನೂ ಓದಿ:ಒಡಿಶಾ ರೈಲು ಅಪಘಾತ ಪ್ರಕರಣ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಪೊಲೀಸರು; ಯಾರಿಗೆ, ಯಾಕೆ?
ನಿನ್ನೆಯಷ್ಟೇ ಕೇಂದ್ರ ರೈಲ್ವೇ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್​ ಮಾಡಿ ಗೂಡ್ಸ್ ರೈಲು ಸಂಚಾರ ಆರಂಭವಾಗಿದ್ದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡಿದ್ದರು. ಅದರೊಂದಿಗೆ “ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅವಿರತ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ಬೇಗ ದುರಸ್ತಿ ಮಾಡಲಾಗಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ ಮೂಲಕ ತಿಳಿಸಿದ್ದರು.
Down-line restoration complete. First train movement in section.pic.twitter.com/cXy3jUOJQ2
— Ashwini Vaishnaw (@AshwiniVaishnaw)June 4, 2023

ಅದರಂತೆ ಬೆಂಗಳೂರು-ಹೌರಾ ಎಕ್ಸ್​ಪ್ರೆಸ್​ ರೈಲು ಅಪಘಾತಕ್ಕೆ ಈಡಾಗಿದ್ದ ಮಾರ್ಗದಲ್ಲಿ ಕಲ್ಲಿದ್ದಲು ತುಂಬಿದ್ದ ಗೂಡ್ಸ್​ ಗಾಡಿಯೊಂದು ರೂರ್ಕೆಲಾ ಸ್ಟೀಲ್​ ಪ್ಲಾಂಟ್​ ಕಡೆಗೆ ಸಂಚಾರ ಮಾಡಿತ್ತು. ಇದೀಗ ಮೂರು ರೈಲುಗಳ ಭೀಕರ ಅಪಘಾತ ನಡೆದ 51 ಗಂಟೆಗಳ ಒಳಗಾಗಿ ಪ್ಯಾಸೆಂಜರ್​ ರೈಲು ಅದೇ ಮಾರ್ಗದಲ್ಲಿ ಸಂಚಾರ ಮಾಡಿದೆ. ಈ ಬಗ್ಗೆ ಎಎನ್​ಐ ವಿಡಿಯೋ ಒಂದನ್ನು ಟ್ವೀಟ್​ ಮಾಡಿದೆ.
#WATCH| Indian Railways has started running passenger trains on the tracks which were affected due to#TrainAccidentin Odisha’s Balasorepic.twitter.com/E9NTCv1ieO
— ANI (@ANI)June 5, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 6 =
Remember me
