ನವದೆಹಲಿ:ಪ್ರಯಾಣಿಕರಿಂದ ತುಂಬಿದ್ದ ಸಾರ್ವಜನಿಕರ ಸಾರಿಗೆಯಲ್ಲಿ ಪಿಕ್​ಪಾಕೆಟ್​ ಮಾಡಲು ಬಂದಿದ್ದ ಐದಕ್ಕೂ ಹೆಚ್ಚು ಜೇಬುಗಳ್ಳರ ಗುಂಪೊಂದು ಅನಾಮಧೇಯ ಪ್ರಯಾಣಿಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ತಮ್ಮ ಕಣ್ಣು ಮುಂದೆಯೇ ಸಹ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದರು, ಬಸ್​ನಲ್ಲಿದ್ದ ಒಬ್ಬರು ಸಹ ಸಹಾಯಕ್ಕೆ ಬಾರದೆ ಹೋಗಿದ್ದು, ನೆಟ್ಟಿಗರನ್ನು ಕೆರಳಿಸಿದೆ.
ಇದನ್ನೂ ಓದಿ:ಅಯ್ಯೋ ದೇವರೇ.. ಹತ್ತಾರು ಯುವಕರು ಒಟ್ಟಿಗೆ ಒಂದೇ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದರು..
ಬಸ್‌ನೊಳಗೆ ಏಕಾಏಕಿ ನುಗ್ಗಿದ ಜೇಬುಗಳ್ಳರು ಯುವಕನ ಮೇಲೆ ಹಿಗ್ಗಾಮುಗ್ಗಾ ಹೊಡೆದು, ಆತನನ್ನು ಅಮಾನುಷವಾಗಿ ಥಳಿಸಿ ಸಾರಿಗೆಯಿಂದ ಹೊರಕ್ಕೆ ತಳ್ಳಿದ ಘಟನೆ ಬಸ್​ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಬ್ಬರ ನಡುವಿನ ಮಾರಾಮಾರಿಗೆ ಅಷ್ಟು ಪ್ರಯಾಣಿಕರು ಸಾಕ್ಷಿಯಾಗಿದ್ದು, ಒಬ್ಬರೂ ಸಹ ಯುವಕನನ್ನು ಪಾರು ಮಾಡುವ ಪ್ರಯತ್ನ ಸಹ ಮಾಡಿಲ್ಲ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಹ ಪ್ರಯಾಣಿಕರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
https://x.com/DELHIBUSES1/status/1791157616942645357?ref_src=twsrc%5Etfw%7Ctwcamp%5Etweetembed%7Ctwterm%5E1791157616942645357%7Ctwgr%5Ed6d96e9fdc141b206f17ed55cc964946389dd492%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fdelhi-bus-passenger-allegedly-thrashed-by-group-of-pickpockets-visuals-surface
ಪ್ರಯಾಣಿಕನನ್ನು ಎಳೆದಾಡಿದ ಜೇಬುಗಳ್ಳರ ಗುಂಪು, ಆತನ ಬಟ್ಟೆ ಹರಿದು, ಕಾಲಿನಲ್ಲಿ ತುಳಿದು, ಕಪಾಳಮೋಕ್ಷ ಮಾಡಿರುವುದು ದೃಶ್ಯದಲ್ಲಿ ಕಾಣಬಹುದು. ಸದ್ಯ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಸ್ಥಳೀಯ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ,(ಏಜೆನ್ಸೀಸ್).
‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
