ಆನೆ ತನ್ನ ದಂತದಿಂದ ಬಸ್​ ಎಡಭಾಗಕ್ಕೆ ತಿವಿದು ಹಾನಿಯುಂಟು ಮಾಡುತ್ತಿರುವ , ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಂಧ್ರಪ್ರದೇಶದ ಪಾರ್ವತಿಪುರಂನ ಮಾನ್ಯಂ ಜಿಲ್ಲೆಯ ಅರ್ಥಮ್​​ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ.
ಆಕ್ರೋಶಗೊಂಡಿದ್ದ ಆನೆ ಬಸ್​​ನ ಮುಂಭಾಗದ ಗ್ಲಾಸ್​​​​​ಗೆ ತನ್ನ ಸೊಂಡಿಲಿನಿಂದ ಹೊಡೆದ ಪರಿಣಾಮ ಬಸ್​​ಮುಂಭಾಗದ ಗ್ಲಾಸ್​​ ಸಂಪೂರ್ಣವಾಗಿ ಪುಡಿ ಪುಡಿಯಾಗಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಬಸ್​​​ನಿಂದ ಕೆಳಗೆ ಇಳಿದಿದ್ದಾರೆ.
#BreakingNews: Elephant goes on rampage in Parvathipuram Manyam district of#AndhraPradesh. Head butts a private bus and charges locals. Forest officials trying to capture the animal. Huge traffic jam as vehicles stopped near Manna Gate of Komarada Mandal.@newstapTweetspic.twitter.com/2d9EunWrZQ
ಆನೆಯು ಬಸ್​​ ಮುಂಭಾಗದ ಗ್ಲಾಸನ್ನ ಪುಡಿ ಮಾಡೋದು ಮಾತ್ರವಲ್ಲ, ಅಲ್ಲೇ ಸುತ್ತುವರೆದಿದ್ದ ಜನರನ್ನೂ ಒಂದಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಪ್ರಯಾಣಿಜಕರು ಗಾಬರಿಯಿಂದ ಓಡುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಲ್ಲದೆ ಆನೆ ಬಸ್​​ ನಿಲ್ಲಿಸಿದ ಜಾಗದಿಂದ ಸ್ವಲ್ಪ ದೂರ ತೆರಳುತ್ತಿದ್ದಂತಯೇ ಚಾಲಕ ಬಸ್​​ ರಿವರ್ಸ್​​​ ತೆಗೆದುಕೊಂಡು ಹೋಗಿದ್ದಾನೆ. ಆನೆ ತುಂಬಾ ದೂರ ಹೋದ ಬಸ್​​ ಒಳಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತೆ. ಎರಡ್ಮೂರು ದಿನದ ಹಿಂದೆ ರಸ್ತೆ ಮಧ್ಯೆ ನಿಂತಿದ್ದ ಆನೆ ಕಂಡು ಸರ್ಕಾರಿ ಬಸ್ ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು. ಬೈಕ್-ಕಾರು ಸವಾರರು ಕೂಡ ನಿಂತಲ್ಲೇ ನಿಂತಿದ್ದರು. ಗಾಡಿ ರಿವರ್ಸ್ ತೆಗೆದು ಹೋಗೋದಕ್ಕೂ ಸಾಧ್ಯವಿಲ್ಲ ಅಮತಾರೆ ಜನರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 2 =
Remember me
