ಹೊಸದಿಲ್ಲಿ:ತಾವು ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನ 7 ಗಂಟೆಗಳು ವಿಳಂಬಗೊಂಡಿದ್ದು,ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ವಿಮಾನದ ಸಿಬ್ಬಂದಿಗಳೊಡನೆ ತೀವ್ರ ವಾಗ್ವಾದಕ್ಕಿಳಿದ ಪರಿಣಾಮ ತಡರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಗದ್ದಲ ಉಂಟಾಗಿದೆ.
ಇದನ್ನೂ ಓದಿ:ಕಲಾಪದಲ್ಲಿ ಜಂಟಿ ಸಮರ; ಬಿಜೆಪಿ-ಜೆಡಿಎಸ್​ ನಾಯಕರಿಂದ ರಹಸ್ಯ ಸಮಾಲೋಚನೆ
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆ ವೇಳಾಪಟ್ಟಿಯಲ್ಲಿನ ಬದಲಾವಣೆಗಳ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿ, ಸರಿಯಾಗಿ ತಿಳಿಸಲಾಗಿತ್ತು ಎಂದು ತಿಳಿಸಿದೆ. ಶುಕ್ರವಾರ ಮಧ್ಯಾಹ್ನ ದೆಹಲಿಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಗುಂಪು ಸ್ಪೈಸ್‌ಜೆಟ್ ಸಿಬ್ಬಂದಿಯೊಂದಿಗೆ ವಿಳಂಬದ ಬಗ್ಗೆ ತೀವ್ರ ವಾಗ್ವಾದದಲ್ಲಿ ತೊಡಗಿದಾಗ ವಿಮಾನ ನಿಲ್ದಾಣವು ಗಲಾಟೆಯ ತಾಣವಾಗಿ ಬದಲಾವಣೆಗೊಂಡಿತು. ಈ ಘಟನೆ ಇತರೆ ಪ್ರಯಾಣಿಕರಿಗೆ ಕೆಲ ಕಾಲ ಕಿರಿಕಿರಿ ಉಂಟು ಮಾಡಿದ್ದು, ಜಗಳಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೂಡಲೇ ಪ್ರತಿಕ್ರಿಯಿಸಿದ್ದಾರೆ.
ಪ್ರಯಾಣಿಕರಿಗೆ ಸಮಾಧಾನ ಹೇಳಿದ ಅಧಿಕಾರಿಗಳು, “ಇಂದು (ನ.1) ಮಧ್ಯಾಹ್ನ ಸುಮಾರು 3:10 ಗಂಟೆಗೆ, ಸ್ಪೈಸ್‌ಜೆಟ್ ಏರ್‌ಲೈನ್ ಫ್ಲೈಟ್ ನಂ. ಎಸ್‌ಜಿ-8721/ಎಸ್‌ಟಿಡಿ ಮೂಲಕ ಪಾಟ್ನಾಗೆ ಹೊರಟಿದ್ದ ಪ್ರಯಾಣಿಕರ ಗುಂಪು ದೇಶೀಯ ಬೋರ್ಡಿಂಗ್ ಗೇಟ್ 54 ರಲ್ಲಿ ಗಲಾಟೆ ಸೃಷ್ಟಿಸುತ್ತಿರುವುದು ಗಮನಕ್ಕೆ ಬಂದಿತು. ವಿಚಾರಿಸಿದಾಗ, ವಿಮಾನವು ಹೊರಟಿದೆ ಎಂದು ತಿಳಿದುಬಂದಿದೆ. ಒಳಬರುವ ವಿಮಾನ ಆಗಮಿಸಿದ್ದರಿಂದ 7 ಗಂಟೆಗಳಿಗೂ ಹೆಚ್ಚು ಕಾಲ ತಡವಾಯಿತು. ಈ ಕಾರಣಕ್ಕೆ ಕೆಲವರು ಹತಾಶೆಗೊಂಡರು ಮತ್ತು ಬಿ/ಗೇಟ್ ಪ್ರದೇಶದಲ್ಲಿ ಏರ್‌ಲೈನ್ಸ್ ಸಿಬ್ಬಂದಿಯೊಂದಿಗೆ ವಾಗ್ವಾದ ಸೃಷ್ಟಿಸಿದರು”ಎಂದು ತಿಳಿಸಿದರು.
ಇದನ್ನೂ ಓದಿ:BJP-JDS ಮೈತ್ರಿ; ಸೀಟ್ ಹೊಂದಾಣಿಕೆ ಬಗ್ಗೆ HDD ಹೇಳಿದ್ದೇನು?
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಪೈಸ್‌ಗೆಟ್ ಸಂಸ್ಥೆ, ಕಳೆದ ರಾತ್ರಿಯೇ ಸಮಯವನ್ನು ಬದಲಾಯಿಸಲಾಗಿದೆ ಮತ್ತು ಪ್ರಯಾಣಿಕರಿಗೆ ಅದರ ಬಗ್ಗೆ ಸೂಕ್ತವಾಗಿ ತಿಳಿಸಲಾಗಿತ್ತು. ಇಂದಿನ ಸ್ಪೈಸ್‌ಜೆಟ್ ದೆಹಲಿ-ಪಾಟ್ನಾ SG 8721 ವಿಮಾನವು ಈಗಾಗಲೇ ತನ್ನ ಗಮ್ಯಸ್ಥಾನಕ್ಕೆ ಬಂದಿಳಿದಿದೆ. ಗುರುವಾರ ರಾತ್ರಿ ವಿಮಾನದ ನಿರ್ಗಮನವನ್ನು ಪರಿಷ್ಕರಿಸಲಾಗಿದೆ ಮತ್ತು ಪ್ರಯಾಣಿಕರಿಗೆ ಕಳೆದ ರಾತ್ರಿ 12.40ಕ್ಕೆ ಪರಿಷ್ಕೃತ ನಿರ್ಗಮನದ ಸಮಯವನ್ನು ಸರಿಯಾಗಿ ತಿಳಿಸಲಾಗಿದೆ, ಇದರಿಂದಾಗಿ ಅವರು ತಮ್ಮ ಪ್ರಯಾಣವನ್ನು ಪ್ಲಾನ್​ ಮಾಡಬಹುದು ಎಂದು ತಿಳಿಸಿತು,(ಏಜೆನ್ಸೀಸ್).
ಈ ರಾಶಿಯವರಿಗಿಂದು ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ: ನಿತ್ಯಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
