ನವದೆಹಲಿ:ಪಾಸ್​ಪೋರ್ಟ್​ ಅರ್ಜಿಯಲ್ಲಿ ತಮ್ಮ ಮೇಲಿರುವ ಕ್ರಿಮಿನಲ್​ ಪ್ರಕರಣಗಳ ಬಗ್ಗೆ ಮರೆ ಮಾಚಿದ್ದಕ್ಕೆ ನರ್ಮದಾ ಉಳಿಸಿ ಆಂದೋಲನದ ಮೇಧಾ ಪಾಟ್ಕರ್​ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಮುಂಬೈ ಪಾಸ್​ಪೋರ್ಟ್​ ಕಚೇರಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.
2019ರ ಜೂನ್​ನಲ್ಲಿ ಈ ಬಗ್ಗೆ ಮೇಧಾ ವಿರುದ್ಧ ಪತ್ರಕರ್ತರೊಬ್ಬರು ದೂರು ದಾಖಲಿಸಿದ್ದರು. ಅದರಲ್ಲಿ ಕ್ರಿಮಿನಲ್​ ದೂರುಗಳ ಸಂಗತಿಗಳನ್ನು ಮರೆ ಮಾಚಿ ಪಾಸ್​ಪೋರ್ಟ್​ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಆ ದೂರಿನಲ್ಲಿ ಮೇಧಾ ಪಾಟ್ಕರ್​ ವಿರುದ್ಧ 9 ಕ್ರಿಮಿನಲ್​ ಪ್ರಕರಣಗಳಿರುವ ಬಗ್ಗೆ ಸಾಕ್ಷಿಗಳನ್ನು ನೀಡಲಾಗಿತ್ತು. ಈ ಎಲ್ಲ ಪ್ರಕರಣಗಳು ಮಧ್ಯಪ್ರದೇಶದಲ್ಲಿ ದಾಖಲಾಗಿದ್ದು ವಿಚಾರಣೆಗೆ ಬಾಕಿ ಇವೆ ಎಂದು ತಿಳಿಸಲಾಗಿತ್ತು.
2017ರ ಮಾರ್ಚ್​ 30ರಂದು ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಮೇಧಾ ಪಾಟ್ಕರ್​, ತನ್ನ ವಿರುದ್ಧ ಯಾವ ಕ್ರಿಮಿನಲ್​ ಪ್ರಕರಣಗಳು ಇಲ್ಲ ಎಂದು ಅರ್ಜಿಯಲ್ಲಿ ಭರ್ತಿ ಮಾಡಿದ್ದರು. ಕ್ರಿಮಿನಲ್​ ದೂರಿನ ಕಾಲಂನಲ್ಲಿ ನನ್​ (ಇಲ್ಲ) ಎಂದು ದಾಖಲಿಸಿದ್ದರು.
ಮುಂಬೈ ಪ್ರಾದೇಶಿಕ ಪಾಸ್​ಪೋರ್ಟ್​ ಕಚೇರಿ ಮಧ್ಯಪ್ರದೇಶದ ಪೊಲೀಸ್​ ಮಹಾ ನಿರ್ದೇಶಕರಿಗೂ ಈ ಬಗ್ಗೆ ಪತ್ರ ಬರೆದಿತ್ತು. ಆಗ ಡಿಜಿಪಿ ಮೇಧಾ ಅವರ ವಿರುದ್ಧ ಐದು ಕ್ರಿಮಿನಲ್​ ಪ್ರಕರಣಗಳಿರುವ ಬಗ್ಗೆ ಮಾಹಿತಿ ನೀಡಿದ್ದರು.
ಇದರಿಂದ ಪಾಸ್​ಪೋರ್ಟ್​ ಕಚೇರಿ ಮೇಧಾ ಅವರಿಗೆ ಅಕ್ಟೋಬರ್​ 18ರಂದು ನೋಟಿಸ್​ ಜಾರಿಗೊಳಿಸಿತ್ತು. ಅದಕ್ಕೆ ಅವರು 10 ದಿನಗೊಳಗಾಗಿ ಉತ್ತರ ನೀಡಲು ತಿಳಿಸಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 4 =
Remember me
