ನವದೆಹಲಿ:ಮಹಿಳೆಯರನ್ನು ಶೈಕ್ಷಣಿಕವಾಗಿ ಮುಂದುವರಿಯುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ.
ಅದರಂತೆ, ಪದವಿ ಶಿಕ್ಷಣ ಪೂಣರ್ಗೊಳಿಸಿದ ಮಹಿಳಾ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಪಾಸ್​ಪೋರ್ಟ್​ ಕೂಡ ನೀಡುವ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ.
ಇದನ್ನೂ ಓದಿ;ಒಂದು ಕಾರು ಕೊಂಡರೆ ಮತ್ತೊಂದು ಫ್ರೀ…, ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​…!
ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​ ಇಂಥದ್ದೊಂದು ಯೋಜನೆ ಘೋಷಿಸಿದ್ದಾರೆ. ವಿದ್ಯಾರ್ಥಿನಿಯರು ಪದವಿ ಪೂರ್ಣಗೊಳಿಸುತ್ತಿದ್ದಂತೆ ಕಾಲೇಜಿನಲ್ಲಿಯೇ ಪಾಸ್​ಪೋರ್ಟ್​ ಕೂಡ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಸ್ತೆ ಸಂಚಾರ ನಿಯಮಗಳು ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ 18- 25 ವಯಸ್ಸಿನವರಿಗೆ ವಾಹನ ಚಾಲನಾ ಕಲಿಕಾ ಪರವಾನಗಿ ಹಾಗೂ ಹೆಲ್ಮೆಟ್​ ವಿತರಣಾ ಸಮಾರಂಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಜತೆಗೆ, ಇನ್ನು ಮುಂದೆ ಕಾಲೇಜಿನಲ್ಲಿಯೇ ವಾಹನ ಚಾಲನಾ ಪರವಾನಗಿಯನ್ನು ವಿತರಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ;ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್​ ಫ್ರಾಡ್​ನಲ್ಲಿ ಈತನನ್ನು ಮೀರಿಸೋರೆ ಇಲ್ಲ…!
ಪಂಜಾಬ್​, ಹರಿಯಾಣ ಸೇರಿ ಉತ್ತರ ಭಾರತದ ರಾಜ್ಯಗಳಿಂದ ವಿದೇಶಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ಉಳಿದ ರಾಜ್ಯಗಳಿಗೆ ಹೋಳಿಸಿದಲ್ಲಿ ಇಲ್ಲಿ ಪಾಸ್​ಪೋಟ್​ರ್ ಹೊಂದುವವರ ಸಂಖ್ಯೆಯೂ ಅಧಿಕ ಈ ಕಾರಣಕ್ಕಾಗಿ ಸರ್ಕಾರ ಇಂಥದ್ದೊಂದು ಯೋಜನೆಗೆ ಮುಂದಾಗಿದೆ.
ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
