ನವದೆಹಲಿ:ಪತಂಜಲಿ ಆಯುರ್ವೆದ ಸಮೂಹ ಒಡೆತನದ ರುಚಿ ಸೋಯಾ ಇಂಡಸ್ಟ್ರೀಸ್​ನ ಹೆಚ್ಚುವರಿ ಷೇರು ವಿತರಿಸುವ (ಎಫ್​ಪಿಒ-ಫಾಲೋ ಆನ್ ಪಬ್ಲಿಕ್ ಆಫರಿಂಗ್) ಪ್ರಕ್ರಿಯೆ ಗುರುವಾರ ಶುರುವಾಗಿದೆ. ಪತಂಜಲಿ ಸಂಸ್ಥೆಯು ಯೋಗ, ಸ್ವಾಸ್ಥ್ಯದ ನಂತರ ಈಗ ಜನರ ಸಮೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರುಚಿ ಸೋಯಾ ಸಂಸ್ಥೆ ಖಾದ್ಯ ತೈಲ ಸೇರಿ ಆಹಾರೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ದೇಶವನ್ನು ಆತ್ಮನಿರ್ಭರ ಮಾಡಲಿದೆ. ರುಚಿ ಸೋಯಾ ದೇಶದ ಕೋಟ್ಯಂತರ ಜನರನ್ನು ಜೋಡಿಸುವ ಕೆಲಸ ಮಾಡಲಿದೆ. ಯೂಕ್ರೇನ್-ರಷ್ಯಾ ಯುದ್ಧದ ಕಾರಣದಿಂದಾಗಿ ಷೇರು ಮಾರುಕಟ್ಟೆ ಕುಸಿತವಾಗಿದ್ದನ್ನು ಕಂಡಿದ್ದೇವೆ. ಆದರೆ ಈ ಕುಸಿತದ ಮಧ್ಯೆಯೇ ನಾವು ಷೇರು ಮಾರುಕಟ್ಟೆ ಪ್ರವೇಶಿಸುತ್ತಿದ್ದೇವೆ. ವಿದೇಶಿ ಆಹಾರೋತ್ಪನ್ನಗಳನ್ನು ಅವಲಂಬಿಸಿದ ದುಷ್ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ವಿದೇಶಗಳು ಯುದ್ಧ ಮಾಡಿಕೊಂಡರೂ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಬಾರದು. ಇದು ಸಾಧ್ಯವಾಗಬೇಕೆಂದರೆ ನಾವು ಆತ್ಮನಿರ್ಭರರಾಗಬೇಕು. ಪತಂಜಲಿ ಮತ್ತು ರುಚಿ ಸೋಯಾ ಸಂಸ್ಥೆಯ ಉದ್ದೇಶ ಅದೇ ಆಗಿದೆ. ರುಚಿ ಸೋಯಾ ಸಂಸ್ಥೆ ಮುಂದಿನ ಐದು ವರ್ಷಗಳಲ್ಲಿ ಆಹಾರ ಮತ್ತು ಕೃಷಿ ಕ್ಷೇತ್ರದ ನಂಬರ್ ಒನ್ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ವಿವರಿಸಿದರು.
ಜಾಗತಿಕ ಬ್ರಾ್ಯಂಡ್ ಗುರಿ:ರುಚಿ ಸೋಯಾ ಸಂಸ್ಥೆಯ ಫಾಲೋ ಆನ್ ಪಬ್ಲಿಕ್ ಆಫರಿಂಗ್​ಗೆ ಮುನ್ನ ಸಂಸ್ಥೆ ಮೇಲೆ ಸಾಂಸ್ಥಿಕ ಹೂಡಿಕೆದಾರರು 1290 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಪ್ರತಿ ಷೇರಿಗೆ ರೂ 650ರಂತೆ 1,98,43,153 ಈಕ್ವಿಟಿ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಪತಂಜಲಿ ಸಂಸ್ಥೆ ಮಾಹಿತಿ ನೀಡಿದೆ. ಅಡುಗೆ ಎಣ್ಣೆ ಕಂಪನಿ ರುಚಿ ಸೋಯಾ, ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರದಲ್ಲಿ ಮತ್ತೆ ಷೇರು ಮಾರುಕಟ್ಟೆ ಪ್ರವೇಶಿಸುವ ಮೊದಲ ಕಂಪನಿ ಆಗಲಿದೆ. ಈ ಕಂಪನಿಯ ಎಫ್​ಪಿಒ ಷೇರುಗಳ ಬೆಲೆ -ಠಿ; 615650 ಆಗಿದೆ.
ಕಂಪನಿಯ ಮೇಲಿರುವ ರೂ. 3,300 ಕೋಟಿ ಸಾಲ ಮರುಪಾವತಿ ಮಾಡಲಾಗುತ್ತಿದ್ದು, ಏಪ್ರಿಲ್ ಅಂತ್ಯದೊಳಗೆ ಅದು ಸಾಲಮುಕ್ತವಾಗಲಿದೆ ಎಂದಿರುವ ಬಾಬಾ ರಾಮ್ ದೇವ್, ರುಚಿ ಮತ್ತು ಪತಂಜಲಿ ಆಹಾರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರಾ್ಯಂಡ್ ಮಾಡುವ ಉದ್ದೇಶ ನಮ್ಮದು. ಬ್ರಾ್ಯಂಡೆಡ್ ಆಹಾರ, ಪೌಷ್ಟಿಕಾಂಶಭರಿತ ಆಹಾರ, ಅಡುಗೆ ಎಣ್ಣೆ, ಆರೋಗ್ಯ ಪೂರಕ ಉತ್ಪನ್ನಗಳನ್ನು ಉತ್ಪಾದನೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದಿದ್ದಾರೆ. ದಿವಾಳಿಯಂಚಿನಲ್ಲಿದ್ದ ರುಚಿ ಸೋಯಾ ಕಂಪನಿ ಮತ್ತು ಅದರ 22 ಅಡುಗೆ ಎಣ್ಣೆ ಘಟಕಗಳನ್ನು ಪತಂಜಲಿ ಕಂಪನಿಯು 2018ರ ಡಿಸೆಂಬರ್​ನಲ್ಲಿ ಹರಾಜು ಪ್ರಕ್ರಿಯೆ ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡಿತ್ತು.
ಪಠ್ಯದಲ್ಲಿ ‌ಭಗವದ್ಗೀತೆ; ನಾವ್ಯಾಕೆ ವಿರೋಧ ಮಾಡ್ಲಿ, ಅದು ನಮ್ಮ ಧರ್ಮ: ಡಿಕೆಶಿ

ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು; ಆದ್ರೆ ಈ ಷರತ್ತುಗಳು ಅನ್ವಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nine =
Remember me
