ನವದಹೆಲಿ:ಪಶುವೈದ್ಯರೊಬ್ಬರು ಕೋಳಿತ್ಯಾಜ್ಯದಿಂದ ಬಯೋಡೀಸೆಲ್​ ಕಂಡುಹಿಡಿದಿದ್ದು, ಅದಕ್ಕೀಗ ಪೇಟೆಂಟ್ ಕೂಡ ಸಿಕ್ಕಿದೆ. ಕೇರಳದ ಪಶುವೈದ್ಯಕೀಯ ಕಾಲೇಜೊಂದರ ಅಸೋಸಿಯೇಟ್​ ಪ್ರೊಫೆಸರ್​ ಜಾನ್​ ಅಬ್ರಹಾಂ ಇಂಥದ್ದೊಂದು ಸಂಶೋಧನೆ ನಡೆಸಿದ್ದಾರೆ.
ಚಿಕನ್​ ಸ್ಟಾಲ್​ ಹಾಗೂ ಹೋಟೆಲ್​ಗಳಲ್ಲಿ ಸಿಗುವ ಕೋಳಿಯ ತ್ಯಾಜ್ಯವನ್ನು ಬಯೋಡೀಸೆಲ್​ ಆಗಿ ಪರಿವರ್ತಿಸುವ ಕುರಿತಂತೆ 2009-12ರ ಅವಧಿಯಲ್ಲೇ ಜಾನ್​ ಸಂಶೋಧನ ನಡೆಸಿ ಯಶಸ್ವಿಯಾಗಿದ್ದರು. ಈ ಬಯೋಡೀಸೆಲ್​ 38 ಕಿ.ಮೀ. ಮೈಲೇಜ್​ ಕೊಡಲಿದ್ದು, ಈಗಿನ ಇಂಧನ ಬಳಕೆಯಿಂದ ಆಗುವ ಮಾಲಿನ್ಯವನ್ನು ಶೇ. 40ರಷ್ಟು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅವರ ಈ ಸಂಶೋಧನೆಗೆ ಜುಲೈ 7ರಂದು ಪೇಟೆಂಟ್ ಲಭಿಸಿದೆ.
ಹಕ್ಕಿ ಹಾಗೂ ಹಂದಿಗಳಿಂದ ಹೆಚ್ಚಿನ ಫ್ಯಾಟ್​ ಸ್ಯಾಚುರೇಷನ್​ ಲಭ್ಯವಿರುವುದರಿಂದ ಅವುಗಳಿಂದ ಕೊಠಡಿ ಉಷ್ಣತೆಯಲ್ಲೇ ತೈಲವನ್ನು ಸಂಸ್ಕರಿಸಬಹುದು. ಮಾತ್ರವಲ್ಲ, ಚಿಕನ್​ ವೇಸ್ಟ್ ಕಡಿಮೆ ದರದಲ್ಲಿ ಹಾಗೂ ಸುಲಭದಲ್ಲಿ ಲಭಿಸುವುದರಿಂದ ಬಯೋಡೀಸೆಲ್​ ಕಂಡುಹಿಡಿಯಲು ಅದನ್ನು ಬಳಸಿದೆ ಎಂಬುದಾಗಿ ಜಾನ್​ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಬಯೋಡೀಸೆಲ್​ನಲ್ಲಿ ಹೆಚ್ಚಿನ ಆಮ್ಲಜನಕ ಇರುವುದರಿಂದ ಇಂಜಿನ್ ಕ್ಷಮತೆ ಕೂಡ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಮುಖ್ಯಮಂತ್ರಿ ಬದಲಾವಣೆ ವಿಚಾರ: ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇನು?

ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 17 =
Remember me
