ನವದೆಹಲಿ:ಭಾರತೀಯ ಸೇನೆಯುಹೊಸ ವಿನ್ಯಾಸದ ಸಮವಸ್ತ್ರಕ್ಕೆ ಪೇಟೆಂಟ್ ಮಾಡಿಸಿದೆ. ಸೇನಾ ಸಮವಸ್ತ್ರದ ಹೊಸ ವಿನ್ಯಾಸವನ್ನು ನಕಲು ಮಾಡಬಾರದೆಂದು ಬೌದ್ಧಿಕ ಆಸ್ತಿ ಹಕ್ಕನ್ನು (ಐಪಿಆರ್) ನೋಂದಾಯಿಸಿರುವುದಾಗಿ ಗುರುವಾರ ತಿಳಿಸಿದೆ. ಹೀಗಾಗಿ ಇನ್ನುಮುಂದೆ ಅದೇ ಮಾದರಿಯ ಸೇನಾ ಸಮವಸ್ತ್ರದ ವಿನ್ಯಾಸವನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಕೋಲ್ಕತದಲ್ಲಿರುವ ಇರುವ ವಿನ್ಯಾಸ ಮತ್ತು ಟ್ರೇಡ್ ಮಾರ್ಕ್​ನ ಮಹಾ ನಿರ್ದೇಶನಾಲಯ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದೆ.
ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ನ್ಯಾಷನಲ್ ಟೆಕ್ನಾಲಜಿ ಸೇನೆಯ ಈ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಿದೆ. ಹೊಸ ಸಮವಸ್ತ್ರವು ಸಮಕಾಲೀನ ನೋಟ ಮತ್ತು ಕ್ರಿಯಾತ್ಮಕ ವಿನ್ಯಾಸ ಹೊಂದಿದೆ. ಹಗುರವಾಗಿದ್ದು, ತ್ವರಿತವಾಗಿ ಒಣಗುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಮಹಿಳಾ ಸೈನಿಕರ ಸಮವಸ್ತ್ರಕ್ಕೆ ಲಿಂಗ ನಿರ್ದಿಷ್ಟ ಮಾರ್ಪಾಡುಗಳನ್ನು ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 11 =
Remember me
