ನವದೆಹಲಿ:ನಿನ್ನೆ (ಫೆ.8) ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ಮಾತನಾಡುವಾಗ ನಟ ಶಾರುಖ್​ ಖಾನ್​ ನಟನೆಯ ಪಠಾಣ್​ ಸಿನಿಮಾದ ಯಶಸ್ಸನ್ನು ಪ್ರಶಂಸಿದ್ದಾರೆ ಎಂಬ ಚರ್ಚೆಯಾಗುತ್ತಿದೆ. ಮೋದಿ ಅವರು ಹೆಸರಳೇದೆ ಪಠಾಣ್​ ಸಿನಿಮಾ ಯಶಸ್ಸನ್ನು ಉಲ್ಲೇಖಿಸುವ ಮೂಲಕ ಜಮ್ಮು-ಕಾಶ್ಮೀರದ ಶ್ರೀನಗರದ ಸಿನಿಮಾ ವಲಯದಲ್ಲಿ ಸ್ವಾಗತಾರ್ಹ ಬದಲಾವಣೆಗೆ ಕೊಡುಗೆ ನೀಡಿದೆ ಎಂದಿದ್ದಾರೆ.
ಜ. 25ರಂದು ಬಿಡುಗಡೆಯಾದ ಪಠಾಣ್​ ಸಿನಿಮಾ ಬಾಲಿವುಡ್​ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ. ದಕ್ಷಿಣ ಭಾರತ ಸಿನಿಮಾಗಳ ಎದುರು ಮಂಕಾಗಿದ್ದ ಬಾಲಿವುಡ್​ಗೆ ಪಠಾಣ್​ ಹೊಸ ಭರವಸೆಯನ್ನು ತುಂಬಿದೆ. ಈಗಾಗಲೇ ಪಠಾಣ್​ ಸಿನಿಮಾ 800 ಕೋಟಿ ರೂ. ಅಧಿಕ ಕಲೆಕ್ಷನ್​ ಮಾಡಿದ್ದು, ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ ಎಂಬು ಬಾಕ್ಸ್​ಆಫೀಸ್​ ಪಂಡಿತರ ಲೆಕ್ಕಾಚಾರವಾಗಿದೆ.
ನಿನ್ನೆ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮ-ಕಾಶ್ಮೀರದಲ್ಲಿ ಬದಲಾಗುತ್ತಿರುವ ಸನ್ನಿವೇಶವನ್ನು ಉಲ್ಲೇಖಿಸಿದರು. ದಶಕಗಳ ಬಳಿಕ ಶ್ರೀನಗರದಲ್ಲಿ ಚಿತ್ರಮಂದಿರಗಳು ಹೌಸ್​ಫುಲ್​ ಆಗುತ್ತಿದೆ ಎಂದು ಹೇಳಿದರು. ಆದರೆ, ಯಾವ ಸಿನಿಮಾ ಎಂಬುದನ್ನು ಪ್ರಧಾನಿ ಹೇಳಲಿಲ್ಲ. ಆದರೆ, ಶಾರುಖ್​ ಅಭಿಮಾನಿಗಳು ಪ್ರಧಾನಿ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಬ್ಲಾಕ್​ ಬಸ್ಟರ್​ ಪಠಾಣ್​ ಬಗ್ಗೆ ಮಾತನಾಡುವಾಗ ದಶಕಗಳ ಬಳಿಕ ಶ್ರೀನಗರದಲ್ಲಿ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಆಗಿವೆ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದರು ಎಂದು ಎಸ್​ಆರ್​ಕೆ ಯೂನಿವರ್ಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಬರೆಯಲಾಗಿದೆ.
ಪಠಾಣ್‌ ಸಿನಿಮಾದ ಅದ್ಧೂರಿ ಬಿಡುಗಡೆಯು 25 ಸಿಂಗಲ್​ ಸ್ಕ್ರೀನ್ ಚಿತ್ರಮಂದಿರಗಳ ಪುನರುಜ್ಜೀವನಕ್ಕೆ ಸಹಾಯ ಮಾಡಿದೆ ಎಂದು ವರದಿಯಾಗಿದೆ. ಲಾಕ್‌ಡೌನ್ ಸಮಯದಲ್ಲಿ ಅವುಗಳನ್ನು ಮುಚ್ಚಲಾಗಿತ್ತು. ಇದೀಗ ಪಠಾಣ್‌ ಸಿನಿಮಾದಿಂದಾಗಿ ಪುನರುಜ್ಜೀವನಗೊಳ್ಳುತ್ತಿದೆ. ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ವಿರುದ್ಧದ ವಿಧ್ವಂಸಕ ಕೃತ್ಯವನ್ನು ಬೆಂಬಲಿಸಬೇಡಿ ಎಂದು ಪ್ರಧಾನಿ ಮೋದಿ ತಮ್ಮ ಮಂತ್ರಿಗಳನ್ನು ಕೇಳಿದರು ಮತ್ತು ಪಠಾಣ್ ಸಿನಿಮಾದ ಸುಗಮವಾಗಿ ಬಿಡುಗಡೆ ಅನುವು ಮಾಡಿಕೊಟ್ಟಿದ್ದರು.(ಏಜೆನ್ಸೀಸ್​)
"Theatres in#Srinagarare running HOUSEFULL after DECADES🔥" says PM@narendramodiwhile talking about BLOCKBUSTER#Pathaan
Book your tickets NOW:https://t.co/z4YLOG2NRI|https://t.co/lcsLnUSu9Y@iamsrk@yrf#ShahRukhKhan#SRK#PathaanReview#NarendraModi#NarendraModiSpeechpic.twitter.com/Q7byChYFwN
— Shah Rukh Khan Universe Fan Club (@SRKUniverse)February 8, 2023

ಮೊದಲ ರಾತ್ರಿಯ ಖಾಸಗಿ ವಿಡಿಯೋ ಹಂಚಿಕೊಂಡ ದಂಪತಿ! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಇಡಿ ಬಲೆಯಲ್ಲಿ ಸುಂದರಿ! ನಟಿಯಾಗಿ ಬದಲಾದ ಮಾಜಿ ತೆರಿಗೆ ಅಧಿಕಾರಿಯ ಮಹಾ ವಂಚನೆ ಬಯಲು

ಕಬ್ಜ ಚಿತ್ರದಲ್ಲಿ ತಾನ್ಯಾ; ಉಪೇಂದ್ರ ಜತೆ ವಿಶೇಷ ಹಾಡಿನಲ್ಲಿ ಮಿಂಚಲಿರುವ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + three =
Remember me
