ಕೊಚ್ಚಿ:ಕೇರಳದ ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್​ ಅಯ್ಯರ್​ ಅವರು ತಮ್ಮ ಜೀವನದಲ್ಲಾದ ಕರಾಳ ಘಟನೆಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಅವರು ಆರನೇ ವಯಸ್ಸಿನಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮತ್ತು ಆ ನೋವಿನಿಂದ ಹೊರಬಂದಿದ್ದು ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಕುರಿತು ವರದಿ ಮಾಡುವಾಗ ಗಮನಿಸಬೇಕಾದ ಮುಖ್ಯ ಅಂಶಗಳ ಬಗ್ಗೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಲು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯಾ ಎಸ್​ ಅಯ್ಯರ್​ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ:ರಾಜಕಾರಣದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣ ನಿಲ್ಲುತ್ತದೆ: ಸುಪ್ರೀಂ ಕೋರ್ಟ್​
ನಾನು ಆರನೇ ವಯಸ್ಸಿನಲ್ಲಿ ಕೆಟ್ಟ ಅನುಭವ ಎದುರಿಸಿದೆ. ಆ ಇಬ್ಬರು ಮುಖಗಳು ನನಗೆ ಸರಿಯಾಗಿ ನೆನಪಿಲ್ಲ. ನನ್ನನ್ನು ಪ್ರೀತಿಯಿಂದ ಅವರ ಬಳಿಗೆ ಕರೆದು ನನ್ನ ದೇಹವನ್ನು ಮುಟ್ಟಿದರು. ನನ್ನ ಬಟ್ಟೆಗಳನ್ನು ಕಳಚಿ, ಬೆತ್ತಲೆಗೊಳಿಸಲು ಯತ್ನಿಸಿದರು. ಏನೋ ಅನಿರೀಕ್ಷಿತ ಘಟನೆ ನಡೆಯಲಿದೆ ಎಂಬುದು ನನಗೆ ಅರ್ಥವಾದಾಗ ನಾನು ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು ಓಡಿ ಹೋದೆ. ಆ ಸಮಯದಲ್ಲಿ ನನಗೆ ಹಾಗೆ ಮಾಡಬೇಕೆಂದು ಅನಿಸಿತು. ಆದರೆ, ಎಲ್ಲ ಮಕ್ಕಳೂ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ದಿವ್ಯಾ ಅವರು ಹೇಳಿದರು.
ನನ್ನ ಪಾಲಕರು ಮಾನಸಿಕವಾಗಿ ನನಗೆ ಬೆಂಬಲ ನೀಡಿದ್ದರಿಂದ ನಾನು ಆ ನೋವಿನಿಂದ ಹೊರಬರಲು ಸಾಧ್ಯವಾಯಿತು. ಆ ಬಳಿಕ ನಾನು ಜನಸಂದಣಿಯನ್ನು ಎದುರಿಸಿದಾಗ, ಆ ಎರಡು ಮುಖಗಳು ಇವೆಯೇ ಎಂದು ನೋಡಲು ನಾನು ಎಲ್ಲರನ್ನೂ ಎಚ್ಚರಿಕೆಯಿಂದ ನೋಡುತ್ತೇನೆ. ಇಂತಹ ಕರಾಳ ಘಟನೆಗಳು ಅಮಾಯಕ ಮಕ್ಕಳ ಜೀವನದ ಉದ್ದಕ್ಕೂ ಕಾಡುತ್ತವೆ ಎಂದರು.(ಏಜೆನ್ಸೀಸ್​)
ಏ.1ರಿಂದ 2,000 ರೂ. ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ 1.1% ವಿನಿಮಯ ಶುಲ್ಕ!

ಟೆಕ್​ ದೈತ್ಯ ಗೂಗಲ್​ಗೆ ಬಿತ್ತು ಭಾರಿ ಮೊತ್ತದ ದಂಡ; CCI ಆದೇಶ ಎತ್ತಿ ಹಿಡಿದ NCLAT

ಮೇ 10 ಮತದಾನದ ದಿನ ಅಲ್ಲ… ಭ್ರಷ್ಟಾಚಾರ ಬಡಿದೋಡಿಸುವ ದಿನ; ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
