ಪಟ್ಟಣಂತಿಟ್ಟ:ಓಣಂ ಬಂಪರ್​ ಲಾಟರಿಯ ಫಲಿತಾಂಶವನ್ನು ಮೊನ್ನೆ (ಸೆ.22) ಘೋಷಣೆ ಮಾಡಲಾಯಿತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್​ ಖರೀದಿ ಮಾಡಿದರು. ತಮಿಳುನಾಡಿ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ. ಒಂದು ಟಿಕೆಟ್​ಗೆ 500 ರೂ. ಪಾವತಿಸಿ ಏನನ್ನೂ ಪಡೆಯದ ಹಿನ್ನೆಲೆಯಲ್ಲಿ ಅನೇಕರಿಗೆ ನಿರಾಸೆಯೂ ಆಗಿದೆ. ಆದರೆ, ಪಟ್ಟಣಂತಿಟ್ಟ ಮೂಲದ ರಾಜನ್​ ಮಾತ್ರ ನಿರಾಶರಾಗಿಲ್ಲ.
ಮಾಧ್ಯಮ ವರದಿಗಳ ಪ್ರಕಾರ ರಾಜನ್​ ಅವರು ನಿವೃತ್ತ ಸರ್ಕಾರಿ ನೌಕರರು. ಕಳೆದ 55 ವರ್ಷಗಳಿಂದ ಲಾಟರಿ ಖರೀದಿ ಮಾಡುತ್ತಿದ್ದಾರೆ. ಲಾಟರಿ ಟಿಕೆಟ್​ಗಾಗಿಯೇ ಈವರೆಗೆ 12 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಲಾಟರಿ ಖರೀದಿ ಮಾಡಿದ ರಾಜನ್​ ಈ ಬಾರಿ ಕೇವಲ 500 ರೂಪಾಯಿ ಗೆದ್ದಿದ್ದಾರೆ.
ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ನಿರ್ಮಾಪಕ ಎಂ.ಎನ್. ಸುರೇಶ್
ರಾಜನ್​ ಅವರು 9 ಸಾವಿರ ರೂ. ಖರ್ಚು ಮಾಡಿ 18 ಬಾರಿ ಓಣಂ ಬಂಪರ್​ ಲಾಟರಿ ಟಿಕೆಟ್​ ಖರೀದಿ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಲಾಟರಿಗೆ ಕೇವಲ 500 ರೂಪಾಯಿ ಬಹುಮಾನವನ್ನು ಪಡೆದಿದ್ದಾರೆ. ಇದುವರೆಗೂ ರಾಜನ್​ ಒಂದೂವರೆ ಲಕ್ಷ ಲಾಟರಿ ಟಿಕೆಟ್​ಗಳನ್ನು ಖರೀದಿ ಮಾಡಿದ್ದಾರೆ. ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಮೊದಲ ಬಾರಿಗೆ ಬಹುಮಾನ ಬಂದಿದೆ. ಆದರೆ, ಕೇವಲ 500 ರೂಪಾಯಿ.
ಕೇವಲ 500 ರೂ. ಬಂದರೂ ಬೇಸರಿಸಿಕೊಳ್ಳದ ರಾಜನ್​, ಲಾಟರಿ ಟಿಕೆಟ್​ಗಳ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಸಾಧ್ಯವಾಗುವಷ್ಟ ದಿನ ಲಾಟರಿ ಖರೀದಿ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಗ್ಯಾಸ್​ ಸೊರಿಕೆಯಾಗಿ ಸಿಲಿಂಡರ್ ಸ್ಫೋಟ; ಮೂವರು ಮೃತ್ಯು

VIDEO| ಗಣಪತಿ ವಿಸರ್ಜನೆ ಕಾರ್ಯಕ್ರದಲ್ಲಿ ಬಾಯ್​ಫ್ರೆಂಡ್ ಜೊತೆ ಭರ್ಜರಿ ಸ್ಟೆಪ್ಸ್​ ಹಾಕಿದ ಜಾಹ್ನವಿ ಕಪೂರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 4 =
Remember me
