ತಿರುವನಂತಪುರಂ:ಶಾಲೆಯಿಂದ ಮನೆಗೆ ಬಸ್‌ನಲ್ಲಿ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ 56 ವರ್ಷದ ವ್ಯಕ್ತಿಯ ಮುಖಕ್ಕೆ ತಾಯಿ ಮೂಗು ಮುರಿಯುವಂತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೇರಳದ ಪಟ್ಟಣಂತಿಟ್ಟದಲ್ಲಿ ನಡೆದಿದೆ. ಅಡೂರ್ ಮುಂಡಪಲ್ಲಿಯ ರಾಧಾಕೃಷ್ಣ ಪಿಳ್ಳೈ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ:ಅರಳಿ ಎಲೆ ಮೇಲೆ ಅರಳಿದ ಯೋಗಾಸನಗಳು! ಶಿವಕುಮಾರ್ ಪ್ರತಿಭೆಗೆ ನೆಟ್ಟಿಗರು ಫಿದಾ..
ಶುಕ್ರವಾರ(ಜೂ.22) ಸಂಜೆ 5 ಗಂಟೆಯಲ್ಲಿ ಪಟ್ಟಣಂತಿಟ್ಟದ ನೆಲ್ಲಿಲಿಮ್ ಜಂಕ್ಷನ್‌ನಲ್ಲಿ ರಾಧಾಕೃಷ್ಣ ಪಿಳ್ಳೈ ಶಾಲೆಯಿಂದ ಮನೆಗೆ ಬಸ್‌ನಲ್ಲಿ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ನಂತರ ಬಾಲಕಿ ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದು ತಾಯಿಗೆ ತಿಳಿಸಿದೆ.
ಬಾಲಕಿಯ ತಾಯಿ ಕೂಡಲೇ ಸ್ಥಳಕ್ಕಾಗಮಿಸಿ ಸಮೀಪದ ಅಂಗಡಿ ಬಳಿ ನಿಂತಿದ್ದ ರಾಧಾಕೃಷ್ಣನನ್ನು ವಿಚಾರಿಸಿದ್ದಾರೆ. ಈ ವೇಳೆ ಆಕೆ ಬಳಿಯೂ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಆಗ ಆಕೆ ಆತನ ಮುಖಕ್ಕೆ ಬಲವಾದ ಗುದ್ದುಗಳನ್ನು ಕೊಟ್ಟಿದ್ದಾಳೆ. ಇದರಿಂದಾಗಿ ರಾಧಾಕೃಷ್ಣನ್ ಮೂಗು ಮುರಿದು ರಕ್ತ ಸ್ರಾವವಾಗಿದೆ.
ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ರಾಧಾಕೃಷ್ಣನ್ ಮೇಲೆ ಹಲ್ಲೆ ನಡೆಸಿದ ಮಹಿಳೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + 13 =
Remember me
