ಪಟಿಯಾಲ:ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ, ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್​ಪಾಲ್​ ಸಿಂಗ್​ ಹಾಗೂ ಆತನ ಸಹಚರ ಪಪಲ್​ಪ್ರೀತ್​ ಸಿಂಗ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಪಟಿಯಾಲ ಪೊಲೀಸರು ಮಹಿಳೆ ಹಾಗೂ ಸಹಚರನನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಬಲ್ಬೀರ್​ ಕೌರ್​ ಎಂದು ಗುರುತಿಸಲಾಗಿದ್ದು ಮಾರ್ಚ್​ 19ರಂದು ಪಟಿಯಾಲದ ಹರಗೋಬಿಂದ್​ ನಗರದಲ್ಲಿ ಅಮೃತ್​ಪಾಲ್​ ಹಾಗೂ ಪಪಲ್​ಪ್ರೀತ್​ಗೆ ಆಶ್ರಯ ನೀಡಿದ್ದಳು ಎಂದು ತಿಳಿದು ಬಂದಿದೆ.
ಅಮೃತ್​ಪಾಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಯ ನೀಡಿದ ಆರೋಪದ ಮೇಲೆ ಗುರುವಾರ ಪೊಲೀಸರು ಹರಿಯಾಣದ ಕುರುಕ್ಷೇತ್ರ ಮೂಲದ ಮಹಿಳೆ ಬಲ್ಜಿತ್​ ಕೌರ್​ರನ್ನು ಬಂಧಿಸಿದ್ದರು.
ಇದನ್ನೂ ಓದಿ:ಅಮೃತ್​ಪಾಲ್​ ಸಿಂಗ್​ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ; ಪಟಿಯಾಲದಲ್ಲಿ ಅಡಗಿರುವ ಶಂಕೆ?
ಶನಿವಾರ ಪೊಲೀಸರು ಅಮೃತ್​ಪಾಲ್​ನ ಸಹಚರ ತೇಜಿಂದ್ರ್ ಸಿಂಗ್​ ಗಿಲ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಬಲ್ವಂತ್​ ಸಿಂಗ್​ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರ್​​ಸಿಮ್ರತ್​ ಸಿಂಗ್​ ಅಮೃತ್​ಪಾಲ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಕುಲಿ-ಕುರ್ದ್​ ಗ್ರಾಮದ ಬಲ್ವಂತ್​ ಸಿಂಗ್​ ಎಂಬುವವರನ್ನು IPC ಸೆಕ್ಷನ್​​ 212ರ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಶನಿವಾರ ಅಮೃತ್​ಪಾಲ್​ ಸಿಂಗ್​ಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಣಾದಲ್ಲಿ ವೈರಲ್​ ಆಗಿದ್ದವು. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನ ನೀಡಿರಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eight =
Remember me
