ದೆಹಲಿ:ಸಮಾಲೋಚನೆ ವೇಳೆ ಹಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೋಗಿಯನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಿಹಾರದ ನಿವಾಸಿ ರಾಜ್‌ಕುಮಾರ್ (21) ಎಂಬಾತ ಗಂಗಾರಾಮ್ ಆಸ್ಪತ್ರೆಯೊಳಗೆ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಯಾಗಿದ್ದು, ನರಶಸ್ತ್ರಚಿಕಿತ್ಸಕರಾದ ಸನಾತನ್ ಸಿಂಗ್ ಚಬ್ರಾ ಎಂಬುವರ ಹೆಬ್ಬೆರಳಿಗೆ ಚಿಕ್ಕ ಗಾಯವಾಗಿದೆ. ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿರುವ ಆರೋಪಿಯು2021ರಿಂದವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದನು.
ಇದನ್ನೂ ಓದಿ:ತೃತೀಯಲಿಂಗಿಯನ್ನು ವಿವಾಹವಾದ ಯುವಕ: ಕೊಲೆಗೆ ಸಂಚು, ಜೀವ ಬೆದರಿಕೆ ಎಂದು ಕುಟುಂಬಸ್ಥರ ವಿರುದ್ಧ ದೂರು
ಮಂಗಳವಾರ ಮಧ್ಯಾಹ್ನ 3.50ರ ಸುಮಾರಿಗೆ ವೈದ್ಯರ ಬಳಿ ಸಮಾಲೋಚನೆಗೆಂದು ಬಂದಿದ್ದು, ಇದ್ದಕ್ಕಿದ್ದಂತೆ ಕೋಪಗೊಂಡು ಹಣ್ಣುಗಳ ಸಿಪ್ಪೆಯನ್ನು ತೆಗೆಯಲು ಬಳಸುವ ತೀಕ್ಷ್ಣವಾದ ಚಾಕುವಿನಿಂದ ವೈದ್ಯರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ.
ಆದರೆ, ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಸಮಯೋಚಿತ ಮಧ್ಯಪ್ರವೇಶದಿಂದ ವೈದ್ಯರಿಗೆ ಗಂಭೀರ ಗಾಯವಾಗುವುದು ತಪ್ಪಿದ್ದು, ಕೂಡಲೇ ಹಲ್ಲೆ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ವೈದ್ಯರ ದೂರಿನ ಮೇರೆಗೆ ರೋಗಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
