ಅಮರಾವತಿ:ಆಸ್ಪತ್ರೆ ಎಂದರೆ ಭಯ ಪಡುವವರಿದ್ದಾರೆ. ಇನ್ನು ಆಪರೇಷನ್​ ಅಂದು ಬಿಟ್ಟರೆ ಮುಗಿದೇ ಹೋಯಿತು. ಆದರೆ ಕೆಲವರಿಗೆ ಇಂತದ್ದರಲ್ಲಿ ಹೆದರಿಕೆಯೇ ಇರುವುದಿಲ್ಲ. ಇಲ್ಲೊಬ್ಬ ರೋಗಿ ತನ್ನ ಮೆದುಳಿನ ಆಪರೇಷನ್​ ಆಗುತ್ತಿದ್ದರೂ ಯಾವುದೇ ಭಯ, ಚಿಂತೆಯಿಲ್ಲದೆ ಬಿಗ್​ ಬಾಸ್​ ರಿಯಾಲಿಟಿ ಶೋ ಹಾಗೂ ಹಾಲಿವುಡ್​ನ ಅವತಾರ್​ ಸಿನಿಮಾ ನೋಡಿದ್ದಾನೆ.
ಇದನ್ನೂ ಓದಿ:ಆನ್​ಲೈನ್​ನಲ್ಲಿ ಲೈಟ್​ ಆರ್ಡರ್​ ಮಾಡಿದವರಿಗೆ ಬಂತು ಜೇಡ! ಆನ್​ಲೈನ್​ ಗ್ರಾಹಕರೇ ಎಚ್ಚರ
ಈ ರೀತಿಯ ಘಟನೆ ಆಂಧ್ರ ಪ್ರದೇಶದ ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್​ ಸಮಯದಲ್ಲಿ ರೋಗಿ ಈ ರೀತಿ ನಡೆದುಕೊಂಡಿರುವುದಕ್ಕೂ ಒಂದು ಕಾರಣವಿದೆ.
ವರ ಪ್ರಸಾದ್​ ಹೆಸರಿನ 33 ವರ್ಷದ ವ್ಯಕ್ತಿಗೆ ಮೆದುಳಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆತನ ಮೆದುಳಿನ ಎಡ ಪ್ರೀಮಿಯೊಟರ್​ ಪ್ರದೇಶದಲ್ಲಿ ಉಂಟಾಗಿದ್ದ ಗ್ಲಿಯೊಮಾವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ರೋಗಿ ಎಚ್ಚರವಾಗಿಯೇ ಇರಬೇಕಂತೆ. ಅದೇ ಕಾರಣದಿಂದಾಗಿ ರೋಗಿಗೆ ಬಿಗ್​ ಬಾಸ್​ ನೋಡಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ:ಬೆದರಿಕೆ, ನಿಂದನೆ, ಅವಮಾನಕರ ಪೋಸ್ಟ್​ ಮಾಡಿದರೆ 5 ವರ್ಷ ಜೈಲು, 10 ಸಾವಿರ ರೂ ದಂಡ!
ವರ ಪ್ರಸಾದ್​ಗೆ ಈ ಹಿಂದೆ 2016ರಲ್ಲಿಯೂ ಮೆದುಳಿನ ಆಪರೇಷನ್​ ಆಗಿತ್ತಂತೆ. ಆದರೆ ಆ ಸಮಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಕಾಯಿಲೆ ಮತ್ತೊಮ್ಮೆ ಕಾಣಿಸಿಕೊಂಡಿತ್ತು. ಇದೀಗ ಸಂಪೂರ್ಣ ಚಿಕಿತ್ಸೆ ನೀಡಲಾಗಿದ್ದು, ಶನಿವಾರ ಆತ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾನೆ. (ಏಜೆನ್ಸೀಸ್​)
ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

ಲೈಂಗಿಕ ಕಿರುಕುಳ ನೀಡಿದ ಅಪರಾಧಿಗಳಿಗೆ ನಡುರಸ್ತೆಯಲ್ಲಿ ಬಸ್ಕಿ ಹೊಡೆಯುವ ಶಿಕ್ಷೆ; ಕೋರ್ಟ್​ಗೆ ಹೋಗುವುದರೊಳಗೆ ಹೈರಾಣಾದ ಅಪರಾಧಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
