ಅಮರಾವತಿ:ಚಿಕಿತ್ಸೆ ಎಂದರೆ ಯಾರಿಗೆ ಆತಂಕ, ಭಯವಾಗುವುದಿಲ್ಲ ಹೇಳಿ. ಆದರೆ ಆಂಧ್ರಪ್ರದೇಶದ ಗುಂಟೂರು ಜನರಲ್​ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಇಷ್ಟವಾದ ಸಿನಿಮಾವನ್ನು ತೋರಿಸುತ್ತಲೇ ಬ್ರೈನ್ ಟ್ಯೂಮರ್ ಸರ್ಜರಿಯನ್ನು ವೈದ್ಯರು ಯಶಸ್ವಿಯಾಗಿ ಮುಗಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಇಂತಹ ಪವಾಡ ನಡೆದಿದೆ. ಗುಂಟೂರು ಜಿಜಿಹೆಚ್ ವೈದ್ಯರು ರೋಗಿಯು ಎಚ್ಚರವಾಗಿರುವಾಗಲೇ ಬ್ರೈನ್ ಆಪರೇಷನ್ ಮಾಡಿದರು. ಆತನ ಗಟ್ಟಿತನ ಎಲ್ಲರನ್ನು ನಿಬ್ಬೆರಗಾಗಿಸಿದೆ.
ಇದನ್ನೂ ಓದಿ:PAN-Aadhaar ಕಾರ್ಡ್ ಲಿಂಕ್​ ಮಾಡದ ಜನ: ಕೇಂದ್ರಕ್ಕೆ ಬಂದ ಲಾಭಾಂಶ ಕೇಳಿದ್ರೆ ಬೆರಗಾಗ್ತೀರಾ!
ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಮಂಡಲದ 48 ವರ್ಷದ ಐಲಾಪುರನ್ನವರ ಪಾಂಡು ಅಸ್ವಸ್ಥರಾಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಜನವರಿ 2ರಂದು ಗುಂಟೂರು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಯ ಬಲಗೈ ಮತ್ತು ಕಾಲು ನಿರ್ಜೀವವಾಗಿತ್ತು. ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಮೆದುಳಿನ ಎಡಭಾಗದಲ್ಲಿರುವ ಮೋಟಾರ್ ಕಾರ್ಟೆಕ್ಸ್‌ನಲ್ಲಿ ಗೆಡ್ಡೆ ಇರುವುದು ಪತ್ತೆಯಾಯಿತು. ಇದರಿಂದ ಕಾಲು ಮತ್ತು ಕೈ ನಿರ್ಜೀವವಾಗಿದೆ ಎಂದು ವೈದ್ಯರು ರೋಗಿಯ ಸಂಬಂಧಿಕರಿಗೆ ತಿಳಿಸಿದ್ದಾರೆ.

ಮೆದುಳಿನ ಸೂಕ್ಷ್ಮ ಭಾಗವಾಗಿರುವುದರಿಂದ ರೋಗಿಯು ಎಚ್ಚರವಾಗಿರುವಾಗಲೇ ಆಪರೇಷನ್ ಮಾಡಬೇಕಾಗುತ್ತದೆ. ಮುಖ್ಯವಾಗಿ ಆಪರೇಷನ್ ವೇಳೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದೂ ವೈದ್ಯರು ರೋಗಿಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ರೋಗಿಯ ಕುಟುಂಬಸ್ಥರ ಅನುಮತಿ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಮುಂದಾಗಿದ್ದಾರೆ. ಸರಿಯಾಗಿ ಆ ವೇಳೆಯಲ್ಲಿ ರೋಗಿ ಪಾಂಡುವಿನ ಫೇವರಿಟ್ ಹೀರೋ ಮಹೇಶ್ ಬಾಬು ಎಂದು ತಿಳಿದು ಪಾಂಡುವಿನ ಫೇವರಿಟ್ ಪೋಕಿರಿ ಸಿನಿಮಾವನ್ನು ಪ್ರದರ್ಶಿಸುತ್ತಾ ಆತ ಅದನ್ನು ನೋಡುತ್ತಲೇ ಆಪರೇಷನ್ ಶುರು ಮಾಡಿದ್ದಾರೆ.
ಪ್ರೊ.ಕೆ.ವಿ.ವಿ ಸತ್ಯನಾರಾಯಣ ಮೂರ್ತಿ, ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಬಳಿಕ ಮಾತನಾಡಿ ಪೂರ್ವನಿಗದಿಯಂತೆ ರೋಗಿಯೊಂದಿಗೆ ಮಾತನಾಡುತ್ತಾ ಕಾಲು, ತೋಳುಗಳನ್ನು ಚಲಿಸುತ್ತಾ ಮೆದುಳಿನ ಸೂಕ್ಷ್ಮ ಭಾಗಗಳಿಗೆ ಹಾನಿಯಾಗದಂತೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಅವೇಕ್ ಕ್ರ್ಯಾನಿಯೊಟಮಿ ಸರ್ಜರಿ ಎಂದು ಕರೆಯಲಾಗುತ್ತದೆ.

ಮೆದುಳಿನ ಇತರ ಭಾಗಗಳಿಗೆ ಯಾವುದೇ ತೊಂದರೆಯಾಗದಂತೆ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದರು. ಕಾರ್ಯಾಚರಣೆಯ ನಂತರ, ಸಂಪೂರ್ಣ ಚೇತರಿಕೆಯ ನಂತರ ರೋಗಿಯನ್ನು ಬಿಡುಗಡೆ ಮಾಡಲಾಯಿತು. ಕಾಲು ಮತ್ತು ತೋಳಿನ ದೌರ್ಬಲ್ಯ ಕಡಿಮೆಯಾಗಿದ್ದು, ರೋಗಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗುಂಟೂರಿನಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗಿಲ್ಲ ಎಂದು ಅಧೀಕ್ಷಕ ಕಿರಣ್ ಹೇಳಿದರು. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ವೈದ್ಯರನ್ನು ಅಭಿನಂದಿಸಿದರು.
ಸರ್ಜರಿಯಿಂದ ರೋಗಿ ಚೇತರಿಸಿಕೊಂಡಿದ್ದಾರೆ. ಅವರ ಕಾಲು ಮತ್ತು ಕೈಗಳಲ್ಲಿನ ದೌರ್ಬಲ್ಯವು ಕಡಿಮೆಯಾಗಿದೆ ಮತ್ತು ಅವರು ಈಗ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಡಾ.ಮೂರ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ.ಪೆಂಚಲಯ್ಯ, ಡಾ.ಸುರೇಂದ್ರ ವರ್ಮ, ಡಾ.ಸತ್ಯ ನವಮಿ ಮತ್ತು ಪಿಜಿ ವಿದ್ಯಾರ್ಥಿಗಳಾದ ಡಾ.ಕೃಷ್ಣುಡು, ಡಾ.ಸಾಯಿತೇಜ, ಡಾ.ಮಹೇಶ್ ಅವರನ್ನೊಳಗೊಂಡ ಅವರ ತಂಡ ಶಸ್ತ್ರಚಿಕಿತ್ಸೆ ಮಾಡಿದ ತಂಡವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 14 =
Remember me
