ಪಾಟ್ನಾ:ತಾಯಿಯ ಆರೋಗ್ಯ ನೋಡಿಕೊಳ್ಳಲು ಕರ್ತವ್ಯಕ್ಕೆ ಗೈರಾಗಿದ್ದ ಕಾರಣಕ್ಕಾಗಿ ಸೇವೆಯಿಂದ ವಜಾಗೊಳಿಸಿದ್ದ ಸಿಆರ್​ಪಿಎಫ್​ ಸಿಬ್ಬಂದಿ ಅನ್ನು ಮರುಸೇರ್ಪಡೆಗೊಳಿಸುವಂತೆ ಪಾಟ್ನಾ ಹೈಕೋರ್ಟ್​ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಪಿಬಿ ಬಜಂತ್ರಿ ಮತ್ತು ಅಲೋಕ್ ಕುಮಾರ್ ಪಾಂಡೆ ಅವರಿದ್ದ ವಿಭಾಗೀಯ ಪೀಠವು ತನ್ನ ಆದೇಶವನ್ನು ಮೂರು ತಿಂಗಳೊಳಗೆ ಜಾರಿಗೆ ತರುವಂತೆ ಸೂಚಿಸಿದೆ.
ಇದನ್ನು  ಓದಿ:ದೋಡಾ ಎನ್​ಕೌಂಟರ್​​; ಸೇನಾ ಕ್ಯಾಪ್ಟನ್​​ ಹುತಾತ್ಮ.. ನಾಲ್ವರು ಉಗ್ರರು ಹತ
ಸಿಆರ್​ಪಿಎಫ್​​ ಸಿಬ್ಬಂದಿ ಸುಮಿತ್ ಕುಮಾರ್​​​ ಕ್ಯಾನ್ಸರ್ ರೋಗಿದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ನೋಡಿಕೊಳ್ಳಲು 196 ದಿನಗಳಿಂದ ಸೇವೆಗೆ ಗೈರಾಗಿದ್ದರು. ಈ ಕಾರಣದಿಂದಾಗಿ 2013ರಲ್ಲಿ ಉದ್ಯೋಗದಿಂದ ವಜಾಗೊಳಿಸಿದ ಬಳಿಕ ಸುಮಿತ್​ ಕುಮಾರ್​ ನ್ಯಾಯಾಲಯದ ಮೆಟ್ಟಿಲೇರಿದರು. ಪ್ರಸ್ತುತ ಪ್ರಕರಣದಲ್ಲಿ ಸಿಆರ್​ಪಿಎಫ್​​ ಸಿಬ್ಬಂದಿ ತನ್ನ ತಾಯಿಗೆ ಕ್ಯಾನ್ಸರ್​​ ಇರುವುದು ಪತ್ತೆಯಾದ ಬಳಿಕ ಅವರ ಚಿಕಿತ್ಸೆಗಾಗಿ ರಜೆಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಆದರೆ 196 ದಿನಗಳಿಗೆ ಯಾವುದೇ ರಜೆ ಮಂಜೂರಾತಿ ಇಲ್ಲದ ಕಾರಣ ನಿಯಂತ್ರಣ ಮೀರಿದೆ ಎಂದು ವಿವರಣೆ ನೀಡಲಾಯಿತು.
2012 ಮೇ 23ರಿಂದ 2012 ಡಿಸೆಂಬರ್​ 4 ರವರೆಗೆ ಕರ್ತವ್ಯಕ್ಕೆ ಗೈರುಹಾಜರಾದ ಕಾರಣ ಸಿಆರ್​ಪಿಎಫ್​ ಸಿಬ್ಬಂದಿಯನ್ನು ಪರಾರಿ ಎಂದು ಘೋಷಿಸಿ ಇಲಾಖಾ ವಿಚಾರಣೆ ಪ್ರಾರಂಭಿಸಲು ಕಾರಣವಾಯಿತು. ಇಲಾಖಾ ವಿಚಾರಣೆಯು ಸುಮಿತ್ ಕುಮಾರ್​ ಅವರನ್ನು ವಜಾಗೊಳಿಸಿತು. ತಾಯಿಯ ಆರೋಗ್ಯದ ಕಾರಣದಿಂದ ರಜೆ ವಿಸ್ತರಣೆಗಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ಗಮಸನಿಸಿದ ನ್ಯಾಯಾಲಯವು, ಸುಮಿತ್​ ಕುಮಾರ್​​​ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಪೀಲುದಾರರ ಸೇವೆಯನ್ನು ಮರುಸ್ಥಾಪಿಸಲು ಮತ್ತು ಮೇಲ್ಮನವಿದಾರರಿಗೆ ವಿತ್ತೀಯ ಪ್ರಯೋಜನಗಳನ್ನು ವಿಸ್ತರಿಸುವಂತೆ ನ್ಯಾಯಾಲಯ ಸೂಚಿಸಿದೆ. (ಏಜೆನ್ಸೀಸ್​​)
ನನಗೆ ಖಾನ್​ತ್ರಯರ ಸಿನಿಮಾ ನಿರ್ದೇಶಿಸುವ ಆಸೆಯಿದೆ; ನನ್ನ ಫೇವರಿಟ್​ ಖಾನ್​​ ಇವರೆ ಎಂದ ನಟಿ ಕಂಗನಾ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five − four =
Remember me
