ಪಟನಾ:ಕೋವಿಡ್​-19 ಪ್ರಕರಣಗಳು ಸ್ಥಿರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ರಾಜಧಾನಿ ಪಟನಾವನ್ನು ಲಾಕ್​ಡೌನ್​ ಮಾಡಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಅದರಂತೆ ಜುಲೈ 10ರಿಂದ ಆರಂಭವಾಗಿ ಜುಲೈ 16ರವರೆಗೆ ಪಟನಾ ಲಾಕ್​ಡೌನ್​ ಆಗಲಿದೆ.
ಈ ಬಗ್ಗೆ ಆದೇಶ ಬಿಡುಗಡೆ ಮಾಡಿರುವ ಅವರು, ಲಾಕ್​ಡೌನ್​ ಅವಧಿಯಲ್ಲಿ ಅಗತ್ಯವಸ್ತುಗಳ ಮಾರಾಟ ಅಂಗಡಿಗಳು ಬಿಟ್ಟು ಬೇರಾವುದೇ ಅಂಗಡಿಗಳು ತೆರೆದಿರುವುದಿಲ್ಲ. ಪ್ರಾರ್ಥನಾ ಮಂದಿರ, ದೇಗುಲಗಳು ಕೂಡ ಬಂದ್​ ಆಗಿರಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವಿಶ್ವ ಹೂಡಿಕೆದಾರರ ಸೆಳೆಯಲಿದೆ ಬೆಂಗಳೂರಿನ ಚಿಂಗಾರಿ; ಸಂಗೀತ ಸಂಯೋಜಕರಿಗೂ ಆದಾಯ
ಮಂಗಳವಾರ ಹೊಸದಾಗಿ 385 ಮಂದಿ ಕೋವಿಡ್​ ಪರೀಕ್ಷೆ ವರದಿ ಪಾಸಿಟಿವ್​ ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 12,525 ತಲುಪಿದೆ. ಇದುವರೆಗೆ 97 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಟನಾವನ್ನು ಒಂದು ವಾರ ಲಾಕ್​ಡೌನ್​ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಪಟನಾ ಜಿಲ್ಲೆಯಲ್ಲಿ ಇದುವರೆಗೆ 12 ಜನ ಕೋವಿಡ್​ಗೆ ಬಲಿಯಾಗಿದ್ದಾರೆ. ದರ್ಭಾಂಗಾ (7), ಸಮಷ್ಟಿಪುರ (6), ಭಾಗಲ್ಪುರ, ಮುಜಾಫರಪುರ್​, ನಳಂದಾ, ಪೂರ್ವ ಚಂಪಾರಣ್​, ರೋಹಟಾಸ್​ ಮತ್ತು ಸರನ್​ನಲ್ಲಿ ತಲಾ ಐವರು ಮೃತಪಟ್ಟಿದ್ದಾರೆ.
ವಿಶ್ವ ಹೂಡಿಕೆದಾರರ ಸೆಳೆಯಲಿದೆ ಬೆಂಗಳೂರಿನ ಚಿಂಗಾರಿ; ಸಂಗೀತ ಸಂಯೋಜಕರಿಗೂ ಆದಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
