ಹೈದರಾಬಾದ್​:ಟಾಲಿವುಡ್​ ನಟ ಪವನ್​ ಕಲ್ಯಾಣ ಇತ್ತೀಚಿಗೆ ತಮ್ಮ ವೈಯುಕ್ತಿಕ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದು, ಅವರು ತಮ್ಮ ಮೂರನೇ ಪತ್ನಿಗೆ ಶೀಘ್ರದಲ್ಲೇ ವಿಚ್ಛೇದನ ನೀಡಲಿದ್ದಾರೆ ಎನ್ನುವ ಮಾತುಗಳು ಚಿತ್ರರಂಗಲ್ಲಿ ಕೇಳಿ ಬರುತ್ತಿವೆ.ನಟ ಪವನ್ ಕಲ್ಯಾಣ್, ತೀನ್ ಮಾರ್ ಶೂಟಿಂಗ್ ವೇಳೆ ಅನ್ನಾ ಲೆಜ್​ನೆವಾ ಎಂಬ ಮಾಡೆಲ್​ನ ಪ್ರೀತಿಯಲ್ಲಿ ಬಿದ್ದಿದ್ದರು. ಈ ಜೋಡಿಯು 2013ರ ಡಿಸೆಂಬರ್​ನಲ್ಲಿ ವಿವಾಹವಾಗಿದ್ದರು. ಹತ್ತು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಡುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.ಇದನ್ನೂ ಓದಿ:ನೀಲಿಚಿತ್ರ ನಟಿಯಂತೆ ಡ್ರೆಸ್‌ ಮಾಡಲು ಪತ್ನಿಗೆ ಒತ್ತಾಯಿಸಿದ ಪತಿ ಅರೆಸ್ಟ್​​ಸದ್ಯ ಇವರಿಬ್ಬರು ಬೇರೆ ಬೇರೆಯಾಗಿ ವಾಸವಾಗಿದ್ದು ಎನ್ನುವ ವದಂತಿಗಳು ಹರಿದಾಡುತ್ತಿದ್ದು, ಪವನ್ ಕಲ್ಯಾಣ್ ತಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ ಪತ್ನಿ ಅನ್ನಾ ಜತೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಜತೆಗೆ ಕುಟುಂಬದ ಪ್ರಮುಖ ಕಾರ್ಯಕ್ರಮಗಳಲ್ಲಿ ಅನ್ನಾ ಅನುಪಸ್ಥಿತಿಯು ವಿಚ್ಛೇದನದ ವದಂತಿಗಳನ್ನು ಹೆಚ್ಚಿಸಿದೆ.ಅಲ್ಲದೆ, ಪವನ್ ಕಲ್ಯಾಣ್ ಹಾಜರಿದ್ದ ನಟ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ, ರಾಮ್ ಚರಣ್ ಮತ್ತು ಉಪಾಸನಾ ಮಗಳು ಕ್ಲಿನ್ ಕಾರಾ ಕೊನಿಡೆಲಾ ತೊಟ್ಟಿಲು ಸಮಾರಂಭನ ಹಾಗೂ ವರಾಹಿ ಯಾತ್ರೆ ಪ್ರಾರಂಭವಾಗುವ ಸಮಯದಲ್ಲಿಯೂ ಪತ್ನಿ ಅನ್ನಾ ಅನುಪಸ್ಥಿತಿಯು ವಿಚ್ಛೇದನದ ಊಹಾಪೋಹಗಳಿಗೆ ಮತ್ತಷ್ಟು ಶಕ್ತಿ ತುಂಬಿದೆ.ಇದನ್ನೂ ಓದಿ:ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ?; ರಾಜ್ಯ ಕಾಂಗ್ರೆಸ್​ ಟೀಕೆ
ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದು, 2008ರಲ್ಲಿ ಈ ಜೋಡಿಯು ಬೇರ್ಪಟ್ಟಿತ್ತು. ವಿಚ್ಛೇದನದ ಒಂದು ವರ್ಷದ ನಂತರ ಪವನ್​, ರೇಣು ದೇಸಾಯಿರನ್ನು ವಿವಾಹವಾಗಿದ್ದರು. ಆದರೆ 2012ರಲ್ಲಿ ಈ ಸಂಬಂಧ ಮುರಿದುಹೋಯಿತು. ನಂತರ ಮತ್ತೆ ಒಂದು ವರ್ಷದ ನಂತರ 2013ರಲ್ಲಿ ಪವನ್​ ಕಲ್ಯಾಣ, ಅನ್ನಾರನ್ನು ವಿವಾಹವಾಗಿದ್ದರು.ಇನ್ನು, ವಿಚ್ಛೇದನದ ಕುರಿತಾದ ಯಾವುದೇ ವದಂತಿಗಳ ಬಗ್ಗೆ ನಟ ಪವನ್ ಕಲ್ಯಾಣ್ ಅಥವಾ ಮೆಗಾ ಫ್ಯಾಮಿಲಿ ಯಾವುದೇ ಅಧಿಕೃತ ಹೇಳಿಕೆ ಅಥವಾ ಪ್ರತಿಕ್ರಿಯೆಯನ್ನು ನೀಡಿಲ್ಲ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nine =
Remember me
