ಹೈದರಾಬಾದ್ :ಜನಸೇನಾ ಪಕ್ಷದ ಹಲವು ಸದಸ್ಯರಿಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದ ನಂತರ ಪಕ್ಷದ ಅಧ್ಯಕ್ಷರಾದ ತೆಲುಗು ನಟ ಪವನ್ ಕಲ್ಯಾಣ್ ಅವರು ಮುನ್ನೆಚ್ಚರಿಕೆಯಾಗಿ ಸ್ವಯಂ ನಿರ್ಬಂಧ(ಕ್ವಾರೆಂಟೈನ್)ದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಮುಖ್ಯ ಕಾರ್ಯಕರ್ತರು ಮತ್ತು ಕಲ್ಯಾಣ್ ಅವರ ವೈಯಕ್ತಿಕ ಸಿಬ್ಬಂದಿಯಲ್ಲಿ ಹಲವರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಅವರು ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಲಾಗಿದೆ.
ಇದನ್ನೂ ಓದಿ:ಪವನ್​ ಕಲ್ಯಾಣ್​ರ ‘ವಕೀಲ್ ಸಾಬ್’ ಬಿಡುಗಡೆ
“ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಮುಖ್ಯ ಕಾರ್ಯನಿರ್ವಾಹಕರು, ಭದ್ರತೆ ಮತ್ತು ವೈಯಕ್ತಿಕ ಸಿಬ್ಬಂದಿಗಳಲ್ಲಿ ಬಹುತೇಕರು ಕಳೆದ ವಾರ ಕರೋನಾಗೆ ಒಳಗಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ಪವನ್ ಕಲ್ಯಾಣ್ ವೈದ್ಯರ ಸಲಹೆಯ ಮೇರೆಗೆ ಕ್ವಾರೆಂಟೈನ್​​ಗೆ ಒಳಗಾಗಿದ್ದಾರೆ. ಆದಾಗ್ಯೂ, ಅವರು ದೈನಂದಿನ ಕಾರ್ಯಗಳು ಮತ್ತು ಪಕ್ಷದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಪಕ್ಷದ ಮುಖಂಡರೊಂದಿಗೆ ಟೆಲಿಕಾನ್ಫರೆನ್ಸ್​ ಮೂಲಕ ಮಾತನಾಡುತ್ತಿದ್ದಾರೆ” ಎಂದು ಜನಸೇನಾ ಪಕ್ಷದ ಪಿ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್)
ಭಾರತದಲ್ಲಿ ಇಂದಿನಿಂದ ನಾಲ್ಕು ದಿನ ‘ಲಸಿಕೆ ಉತ್ಸವ’
ಬಂಗಾಳ ಚುನಾವಣೆ : ಕರೊನಾ ಮುನ್ನೆಚ್ಚರಿಕೆ ಇಲ್ಲದೆ ಪ್ರಚಾರ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
