ಹೈದರಾಬಾದ್​: ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕಾರಣದಲ್ಲಿದ್ದರೂ ಎರಡೂ ತೆಲುಗು ರಾಜ್ಯಗಳ ಸಿನಿರಸಿಕರಲ್ಲಿ ಪ್ರಭಾವ ಇನ್ನೂ ಉಳಿಸಿಕೊಂಡಿದ್ದಾರೆ. ಸತತವಾಗಿ ಸಿನಿಮಾ ಮಾಡುತ್ತಿರುವ ಪವನ್ ಈಗ ಮಾಡುತ್ತಿರುವ ಚಿತ್ರಗಳಲ್ಲಿ ‘ಹರಿಹರ ವೀರಮಲ್ಲು’ ಕೂಡ ಒಂದು.
ಇದನ್ನೂ ಓದಿ:ಕಾಂತಾರ 2 ರಲ್ಲಿ ಜೂ.ಎನ್​ಟಿಆರ್​.. ಕನ್ನಡ- ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ!
ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ‘ಹರಿಹರ ವೀರಮಲ್ಲು’. ಅದ್ಧೂರಿ ಬಜೆಟ್ ನಲ್ಲಿ ಬರುತ್ತಿರುವ ಕ್ರೇಜಿ ಸಿನಿಮಾ, ಮೊಘಲ್ ಸಾಮ್ರಾಟರ ಕಥೆಯನ್ನಾಧರಿಸಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗುತ್ತಿದೆ.
ಹೀಗಾಗಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಚ್ಯುತಿ ಬರದ ರೀತಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಹೈ ರೇಂಜ್ ಬಜೆಟ್ ನಲ್ಲಿ ತಯಾರಾಗುತ್ತಿರುವ ‘ಹರಿಹರ ವೀರಮಲ್ಲು’ ಸಿನಿಮಾದ ಶೂಟಿಂಗ್ ಬಹಳ ದಿನಗಳ ಹಿಂದೆಯೇ ಶುರುವಾಗಿದೆ. ಆದರೆ ಅನಿವಾರ್ಯ ಕಾರಣಗಳಿಂದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಹೀಗಿರುವಾಗ ಚಿತ್ರದ ಟಾಕಿ ಭಾಗವನ್ನು ಆದಷ್ಟು ಬೇಗ ಮುಗಿಸಲು ಚಿತ್ರತಂಡ ಯೋಚಿಸಿದೆ.
ಆದರೆ, ಪವನ್ ಆಂಧ್ರದ ಚುನಾವಣೆಗಳಲ್ಲಿ ನಿರತರಾಗಿದ್ದರಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆ. ಇತ್ತೀಚೆಗಷ್ಟೇ ‘ಹರಿಹರ ವೀರಮಲ್ಲು’ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಡಿಯೋ ಬಿಡುಗಡೆ ಮಾಡಿ ಆ ವದಂತಿಗಳಿಗೆ ಕಡಿವಾಣ ಹಾಕುವುದಾಗಿ ಘೋಷಿಸಿದೆ.
ಈ ಹಿನ್ನಲೆಯಲ್ಲಿ ಈ ಸಿನಿಮಾ ಮುಂದಿನ ಸಂಕ್ರಾಂತಿಗೆ ತೆರೆಗೆ ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಅದು ನಿಜವೇ ಆಗಿದ್ದಲ್ಲಿ ಜನವರಿ 10ರಂದು ಬಿಡುಗಡೆಯಾಗಲಿರುವ ಚಿರಂಜೀವಿ ಅಭಿನಯದ ‘ವಿಶ್ವಂಭರ’ ಚಿತ್ರಕ್ಕೆ ಪೈಪೋಟಿ ಒಡ್ಡಲಿದೆ. ಹಾಗಾಗಿ ಅದು ಸಾಧ್ಯವಾಗುವುದಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
ಆದರೆ, ಇತ್ತೀಚಿನ ಮಾಹಿತಿ ಪ್ರಕಾರ ಜನವರಿ 15ಕ್ಕೆ ಪವನ್ ಸಿನಿಮಾ ರಿಲೀಸ್ ಆಗಲಿದೆ. ಅಂದರೆ ಈ ಎರಡು ಚಿತ್ರಗಳ ನಡುವೆ 5 ದಿನಗಳ ಅಂತರವಿರುತ್ತದೆ.
ಅದ್ಧೂರಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ‘ಹರಿಹರ ವೀರಮಲ್ಲು’ ಸಿನಿಮಾ ತಯಾರಾಗುತ್ತಿದೆ. ನಿಧಿ ಅಗರ್ವಾಲ್ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರವನ್ನು ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಎಂ ರತ್ನಂ ನಿರ್ಮಿಸುತ್ತಿದ್ದಾರೆ.
ಟಿಎಂಸಿ 42 ಸ್ಥಾನಗಳ ಪಟ್ಟಿ: INIDA ಕೂಟಕ್ಕೆ ಹೊಡೆತ- ಕಾಂಗ್ರೆಸ್ ಇನ್ನೂ ಆಶಾವಾದಿ..!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen − three =
Remember me
