ಹೈದರಾಬಾದ್ :ಪವರ್​ ಸ್ಟಾರ್ ಎಂದೇ ಜನಪ್ರಿಯರಾಗಿರುವ ತೆಲುಗು ನಟ ಪವನ್​ ಕಲ್ಯಾಣ್​ ಅವರಿಗೆ ಇದೀಗ ಕರೊನಾ ನೆಗೆಟೀವ್ ಬಂದಿದೆ. ಅಲ್ಪಮಟ್ಟದ ಅಸ್ವಸ್ಥತೆಯನ್ನು ಇನ್ನೂ ಅನುಭವಿಸುತ್ತಿದ್ದರೂ, ಪೂರ್ಣ ಚೇತರಿಕೆ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಅವರ ರಾಜಕೀಯ ಪಕ್ಷವಾದ ಜನಸೇನಾ ಹೇಳಿಕೆ ನೀಡಿದೆ.
ಏಪ್ರಿಲ್ ನಡುವಿನಲ್ಲಿ ತಮ್ಮ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ ಬೆನ್ನಲ್ಲೇ ಪವನ್ ಕಲ್ಯಾಣ್​ ಅವರಿಗೂ ಕರೊನಾ ಪಾಸಿಟೀವ್ ಬಂದಿತ್ತು. ಕಲ್ಯಾಣ್​​ರ ಚಿಕಿತ್ಸೆಗೆ ವೈದ್ಯರ ತಂಡ ಮುಡಿಪಾಗಿತ್ತು. ಖಮ್ಮಂನ ಹೃದ್ರೋಗ ತಜ್ಞರಾದ ಡಾ.ಟಿ.ಸುಮನ್ ಅವರಿಗೆ ಚಿಕಿತ್ಸೆ ನೀಡಲು ಹೈದರಾಬಾದ್‌ಗೆ ಬಂದಿದ್ದರು. ಅಪೊಲೊ ಆಸ್ಪತ್ರೆಯ ವೈದ್ಯಕೀಯ ತಂಡ ಈ ಅವಧಿಯಲ್ಲಿ ಅವರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ:‘ಪೂರ್ತಿ ಮುಂಬೈಗೆ ಒಂದೇ ದಿನದಲ್ಲಿ ಲಸಿಕೆ ನೀಡಬಲ್ಲೆವು, ಆದರೆ…’
ಕಲ್ಯಾಣ್​​ರ ಸಹೋದರ ನಟ ಚಿರಂಜೀವಿ ಮತ್ತು ಸೋದರಳಿಯ ನಟ ರಾಮ್ ಚರಣ್ ಅವರ ಚಿಕಿತ್ಸೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿದರೆ, ನಿರ್ಮಾಪಕ ನಾಗ ವಂಶಿ ಅವರ ಆರೈಕೆ ಮಾಡಲು ಅವರೊಂದಿಗೆ ಉಳಿದುಕೊಂಡಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಆ್ಯಂಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ

ಮುಂದುವರೆದ ಭ್ರಷ್ಟಾಚಾರ ಆರೋಪ : ಮಾಜಿ ಪೊಲೀಸ್​ ಕಮಿಷನರ್​ ವಿರುದ್ಧ ವ್ಯಾಪಾರಿಗಳ ಹೇಳಿಕೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
