ಅಮರಾವತಿ:ಆಂಧ್ರಪ್ರದೇಶ ಉಪಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ, ಪೀಟಾಪುರಂ ಕ್ಷೇತ್ರದ ಶಾಸಕ ಪವನ್​ ಕಲ್ಯಾಣ್​ರನ್ನು ನೇಮಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಸಚೊವ ಸಂಪುಟದ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ನಟ ಪವನ್​ ಕಲ್ಯಾಣ್​ ಅವರಿಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್​ ರಾಜ್​, ಅರಣ್ಯ ಇಲಾಖೆ, ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ಗೆ ಮಾನವ ಸಂಪನ್ಮೂಲ, ಐಟಿ-ಬಿಟಿ ಖಾತೆಯನ್ನು ನೀಡಲಾಗಿದೆ.
Congratulations to@PawanKalyanGaru on becoming the Deputy Chief Minister of Andhra Pradesh. I congratulate all my colleagues in the cabinet on being assigned their portfolios. Together, we have taken a solemn oath to serve the people of Andhra Pradesh and usher in an era of…pic.twitter.com/rpG3BnFSlv
ಇದನ್ನೂ ಓದಿ: ಈ ರೀತಿಯ ಗಂಡಸರನ್ನು ನಂಬಲು ಭಯವಾಗುತ್ತದೆ; ರಶ್ಮಿಕಾ ಮಂದಣ್ಣ ಹೀಗೆನ್ನಲು ಕಾರಣವೇನು?
ಜೂನ್​ 12ರಂದು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಪ್ರಮಾಣವಚನ ಸ್ವೀಕರಿಸಿದ್ದರು. ಇದೇ ವೇಳೆ ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಸೇರಿದಂತೆ ಹಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 25 ಸದಸ್ಯರ ಸಚಿವ ಸಂಪುಟದಲ್ಲಿ ಪವನ್ ಕಲ್ಯಾಣ್ ಅವರ ನೇತೃತ್ವದ ಜನಸೇನಾದಿಂದ ಮೂವರು ಹಾಗೂ ಬಿಜೆಪಿಯಿಂದ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ಬಾರಿ (ಅಖಂಡ ಆಂಧ್ರಪ್ರದೇಶ), ರಾಜ್ಯ ವಿಭಜನೆಯಾದ ನಂತರ ಈಗ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಕೂಟವು ಭರ್ಜರಿ ಗೆಲುವು ಸಾಧಿಸಿತ್ತು. ವಿಧಾನಸಭಾ ಚುನಾವಣೆಗಳಲ್ಲಿ 175 ಸ್ಥಾನಗಳ ಪೈಕಿ 164 ಸ್ಥಾನ ಮತ್ತು 25 ಲೋಕಸಭಾ ಸ್ಥಾನಗಳ ಪೈಕಿ 21 ಸ್ಥಾನ ಗೆದ್ದಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 11 =
Remember me
