ಮುಂಬೈ:ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವದ ಬಗ್ಗೆ ಅಸಮಾಧಾನ ಎದ್ದಿರುವುದು ಹಳೆಯ ವಿಚಾರವಾಯಿತು. ಇದೀಗ ಯುಪಿಎ ಮೈತ್ರಿಕೂಟದಲ್ಲೂ ಅಂಥದ್ದೊಂದು ಅಸಮಾಧಾನದ ಹೊಗೆ ಎದ್ದಿದೆ. ಶಿವಸೇನಾ ನಾಯಕ ಸಂಜಯ್ ರಾವುತ್ ಈ ವಿಚಾರವಾಗಿ ಮಾತನಾಡಿದ್ದು, ಸೋನಿಯಾ ಗಾಂಧಿ ಬದಲು ಶರದ್ ಪವಾರ್ ನಾಯಕತ್ವ ವಹಿಸಲಿ ಎಂದು ಹೇಳುವ ಮೂಲಕ ನೆಹರೂ-ಗಾಂಧಿ ಕುಟುಂಬದ ಪ್ರಭಾವ ಕುಸಿದಿದೆ ಎಂಬುದನ್ನು ಸೂಚ್ಯವಾಗಿ ಹೇಳಿತೋರಿಸಿದ್ದಾರೆ.
ಶರದ್ ಪವಾರ್ ಅವರಿಗೆ ರಾಜಕೀಯ ಮುತ್ಸದ್ದಿತನವೂ ಇದೆ. ವಿಶಾಲ ಅನುಭವ, ದೇಶ ಎದುರಿಸುತ್ತಿರುವ ಸವಾಲುಗಳ ಕುರಿತ ತಿಳಿವಳಿಕೆ ಅರಿವೂ ಇದೆ. ಅದೇ ರೀತಿ ದೇಶದ ಜನರ ನಾಡಿಮಿಡಿತವನ್ನೂ ಅವರು ಅರಿತುಕೊಂಡಿದ್ದಾರೆ. ದೇಶವನ್ನು ಮುನ್ನಡೆಸುವ ಶಕ್ತಿ ಸಾಮರ್ಥ್ಯಗಳು ಶರದ್​ ಪವಾರ್ ಅವರಿಗೆ ಇದೆ. ಶಿವಸೇನಾ ಅವರನ್ನು ಬೆಂಬಲಿಸುತ್ತದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ಇದನ್ನೂ ಓದಿ:ಯಾರಿಗೆ ಕೀಲಿ’ಕೈ’?; ಹೊಸ ನಾಯಕತ್ವಕ್ಕೆ ಸೋನಿಯಾ ಸೂಚನೆ
ಶರದ್ ಪವಾರ್ ಅವರು ಡಿಸೆಂಬರ್ 12ರಂದು 80ನೇ ಹುಟ್ಟುಹಬ್ಬ ಆಚರಿಸುತ್ತಿದ್ದು, ಅದಕ್ಕೂ ಪೂರ್ವಭಾವಿಯಾಗಿ ಸಂಜಯ್ ರಾವುತ್ ಈ ಮಾತನ್ನು ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದ ವೇಳೆ, ಯುಪಿಎ ಮೈತ್ರಿಕೂಟದಲ್ಲಿ ಸೋನಿಯಾ ಗಾಂಧಿ ನಾಯಕತ್ವದ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಸಂಜಯ್ ರಾವುತ್​, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮುಂದೇನಾಗಲಿದೆ ಎಂಬುದು ಖಂಡಿತ ನಿಮಗೆ ಗೊತ್ತಿರಲ್ಲ ಎಂದು ಹೇಳಿದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಮಾತುಕತೆಗೆ ರೆಡಿ ಇದ್ದೇವೆ, ಪ್ರಸ್ತಾವನೆ ಓದಿ- ರೈತ ನಾಯಕರಿಗೆ ಕೇಂದ್ರ ಕೃಷಿ ಸಚಿವ ತೋಮರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 3 =
Remember me
