ಮುಂಬೈ: ರಾಜಕೀಯ ದ್ವೇಷದ ಕಾರಣಕ್ಕೆ ನವದೆಹಲಿಯಲ್ಲಿರುವ ಶರದ್ ಪವಾರ್ ಅವರ ಅಧಿಕೃತ ನಿವಾಸದ ಸೆಕ್ಯುರಿಟಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಶುಕ್ರವಾರ ಆರೋಪಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖ್ಯ ವಕ್ತಾರ, ಸಚಿವ ನವಾಬ್ ಮಲಿಕ್​, ಇಂತಹ ನಡೆಯಿಂದ ಪಕ್ಷದ ನಾಯಕರನ್ನು ಹಿಮ್ಮೆಟ್ಟಿಸಲಾಗದು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧದ ಹೋರಾಟವನ್ನು ಪಕ್ಷದ ನಾಯಕರು ಮುಂದುವರಿಸುತ್ತಾರೆ ಎಂದು ಹೇಳಿದರು.
ಪವಾರ್​ ಅವರು ರಾಜ್ಯಸಭಾ ಸದಸ್ಯರು ಮತ್ತು ಮಾಜಿ ಸಚಿವರು. ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ವೈ ಶ್ರೇಣಿಯ ಭದ್ರತೆ ಇತ್ತು. ಪವಾರ್ ಅವರ ನಿವಾಸ ದೆಹಲಿಯ 6 ಜನಪಥದಲ್ಲಿದ್ದು, ಅಲ್ಲಿಗೆ ನೀಡಲಾಗಿದ್ದ ಭದ್ರತೆಯನ್ನು ಜನವರಿ 20ರಂದು ಹಿಂಪಡೆಯಲಾಗಿದೆ. ಹೀಗೆ ಸೆಕ್ಯುರಿಟಿ ಹಿಂಪಡೆಯುವಾಗ ಯಾವುದೇ ರೀತಿಯ ಮುನ್ಸೂಚನೆ ನೀಡಿಲ್ಲ. ಹೀಗಾಗಿ ಇದು ರಾಜಕೀಯ ದ್ವೇಷದ ನಡೆ ಎಂದು ಮಲಿಕ್ ಟೀಕಿಸಿದರು.
ಮಹಾರಾಷ್ಟ್ರದಲ್ಲಿ ಪವಾರ್ ಅವರಿಗೆ z+ ಕೆಟಗರಿಯ ಭದ್ರತೆ ಇದೆ. ಶಿವಸೇನಾ ನೇತೃತ್ವದ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿ ಎನ್​ಸಿಪಿ ಇಲ್ಲಿ ಅಧಿಕಾರದಲ್ಲಿದೆ. ಈ ಸರ್ಕಾರ ರಚನೆ ಆಗುವ ನಿಟ್ಟಿನಲ್ಲಿ ಪವಾರ್ ಮಹತ್ವದ ಪಾತ್ರ ನಿರ್ವಹಿಸಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 7 =
Remember me
