ಮುಂಬೈ:ನಟಿ ಪಾಯಲ್​ ಘೋಷ್​ ಅವರು ಸ್ಯೂಸೈಡ್​ ನೋಟ್​ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದ್ದು, ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.
ಡೇತ್​​ ನೋಟ್​​ನಲ್ಲಿ ಏನಿದೆ?:‘ನಾನು ಪಾಯಲ್ ಘೋಷ್, ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಕಾರಣರಾದವರು…” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಾರಿ ಶಕ್ತಿಯಿಂದ ಮುನ್ನಡೆಯುತ್ತಿದೆ ವಂದೇ ಭಾರತ್​; ಸುರೇಖಾ ಯಾದವ್ ಭಾರತ ಮೊದಲ ಮಹಿಳಾ ರೈಲು ಚಾಲಕಿ!
ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಪತ್ರದಲ್ಲಿ ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಅಭಿಮಾನಿಗಳು ಕಾಮೆಂಟ್​​ ಮಾಡುತ್ತಾ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಕೆಯ ಸ್ಯೂಸೈಡ್​ ನೋಟ್​, ಪೂರ್ಣಗೊಳ್ಳಲಿಲ್ಲ. ಇದು ಆಕೆಯ ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.
ಇದನ್ನೂ ಓದಿ:ಅಚ್ಚರಿ ಮೂಡಿಸಿದ ಮೂರು ಕಾಲಿನ ಆನೆ; ಈ ಸ್ಟೋರಿ ಓದಿ..
ಎರಡು ದಿನಗಳ ಹಿಂದಷ್ಟೇ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ್ದ ನಟಿ, ಈಗ ಆತ್ಮಹತ್ಯೆ ನೋಟ್​ ಬರೆದಿಟ್ಟಿರುವುದರಿಂದ ಎಲ್ಲೆಡೆ ಆತಂಕ ಮನೆಮಾಡಿದೆ. ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಪಾಯಲ್ ಘೋಷ್ ಹೇಳಿದ್ದರು. ಈಗ ಅರೆ ಬರೆದಿರುವ ಸ್ಯೂಸೈಡ್​ ನೋಟ್​ ಬರೆದಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. 33 ವರ್ಷದ ಪಾಯಲ್ ಘೋಷ್ ಹಿಂದಿ ಮಾತ್ರವಲ್ಲದೆ ಇಂಗ್ಲಿಷ್, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
A post shared by Payal Ghosh (@iampayalghosh)





ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
