ಮುಂಬೈ:ಫೀಚರ್ ಫೋನ್ ಬಳಕೆದಾರರಿಗೂ ಅನುಕೂಲ ವಾಗುವಂತೆ ಇಂಟರ್​ನೆಟ್ ರಹಿತ ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್-ಬೇಸ್ಡ್) ಪಾವತಿ ಸೌಲಭ್ಯವನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹೇಳಿದರು.
ದ್ವೈಮಾಸಿಕ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆಯ ಬಳಿಕ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಅವರು, ದೇಶಾದ್ಯಂತ ಬಳಕೆದಾರರ ಅನುಕೂಲಕಕ್ಕಾಗಿ ಯುಪಿಐ ಪಾವತಿಯನ್ನು ಸರಳಗೊಳಿಸುವುದಕ್ಕೆ 3 ಕ್ರಮಗಳನ್ನು ಪ್ರಸ್ತಾಪಿಸಿದರು. ಅನುಮತಿ ಪೂರ್ವದಲ್ಲೇ ಸಾಗರೋತ್ತರ ಶಾಖೆಗಳಿಂದ ಬಂಡ ವಾಳವನ್ನು ಭಾರತಕ್ಕೆ ತರುವುದಕ್ಕೆ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
ಎರಡು ಸ್ಕೀಮ್ಳು:ಆರ್​ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್ ಮತ್ತು ಐಪಿಒ ಆಫರಿಂಗ್ ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಯುಪಿಐ ವಹಿವಾಟು ಮಿತಿಯನ್ನು 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದು ಆರ್​ಬಿಐ ಗಿಲ್ಟ್ ಸೆಕ್ಯುರಿಟೀಸ್ ಖಾತೆ ಹೊಂದಿದ ಬಳಕೆದಾರರಿಗೆ ಅನುಕೂಲ ಮಾಡಿಕೊಡಲಿದೆ. ಸಣ್ಣ ಮೌಲ್ಯದ ವಹಿವಾಟಿಗಾಗಿ ‘ಆನ್-ಡಿವೈಸ್’ ವಾಲೆಟ್​ನಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಇದು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಬಳಕೆದಾರರಿಗೆ ಪಾವತಿಯನ್ನು ಸುಲಭಗೊಳಿಸಲಿದೆ. ಯುಪಿಐ, ಕಾರ್ಡ್​ಗಳು, ವಾಲೆಟ್​ಗಳನ್ನು ಒಳಗೊಂಡ ಪಾವತಿ ಸಿಸ್ಟಮ್ಲ್ಲಿರುವ ವಿವಿಧ ಚಾರ್ಜಸ್ ಬಗ್ಗೆ ಚರ್ಚಾ ಪತ್ರವನ್ನು ಆರ್​ಬಿಐ ಶೀಘ್ರವೇ ಬಿಡುಗಡೆ ಮಾಡಲಿದೆ.
ಐಪಿಒ ಆಫರಿಂಗ್​ಗೆ ಯುಪಿಐ ಪಾವತಿ:ಷೇರುಪೇಟೆಯಲ್ಲಿ ಇನಿಷಿಯಲ್ ಪಬ್ಲಿಕ್ ಆಫರಿಂಗ್ಸ್ (ಐಪಿಒ)ನಲ್ಲಿ ಯುಪಿಐ ಪಾವತಿ ಬಳಕೆ 2019ರ ಜನವರಿ 1ರಿಂದ ಶುರುವಾಗಿದೆ. ಅಲ್ಲಿಂದೀಚೆಗೆ ಇದು ಜನಪ್ರಿಯವಾಗಿದ್ದು, ಬಳಕೆ ಶೇಕಡ 10ರಷ್ಟು ಅಂದಾಜಿಸಲಾಗಿದೆ. 2020ರ ಮಾರ್ಚ್ ತಿಂಗಳ ತನಕ 1 ಲಕ್ಷ ರೂ. ತನಕ ಐಪಿಒಗೆ ಹೂಡಿಕೆ ಮಾಡಲು ಯುಪಿಐ ಮೂಲಕ ಸಾಧ್ಯವಿತ್ತು. ಬಳಿಕ ಇದನ್ನು 2 ಲಕ್ಷ ರೂ.ಗೆಏರಿಸಲಾಗಿತ್ತು. ಈಗ ಇದು 5 ಲಕ್ಷ ರೂ.ಗೆ ಏರಿಕೆಯಾಗಿದೆ.
ಫಿನ್​ಟೆಕ್ ವ್ಯವಸ್ಥೆಯಲ್ಲಿ ಯುಪಿಐ:ಭಾರತದ ಫಿನ್​ಟೆಕ್ ವ್ಯವಸ್ಥೆಯಲ್ಲಿ ಯುಪಿಐಗೆ ಮಹತ್ವದ ಸ್ಥಾನವಿದೆ. ಇದು ಒಂದು ತಂತ್ರಜ್ಞಾನವಾಗಿ ಮಾತ್ರ ಉಳಿದಿಲ್ಲ. ಈ ಹಣಕಾಸು ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಯುಪಿಐ ಪಾವತಿ ಒಟ್ಟು 260 ಶತಕೋಟಿ ಡಾಲರ್ ತಲುಪಿದೆ. ಹಿಂದಿನ ತ್ರೖೆಮಾಸಿಕಕ್ಕೆ ಹೋಲಿಸಿದರೆ ಶೇಕಡ 26 ಏರಿಕೆ ದಾಖಲಾಗಿದೆ. ಫೋನ್​ಪೇ, ಗೂಗಲ್ ಪೇ, ಪೇಟಿಎಂ ಸೇರಿ ವಿವಿಧ ಪಾವತಿ ಪ್ಲಾಟ್​ಫಾರಂಗಳಿಗೆ ಯುಪಿಐ ಬೆನ್ನೆಲುಬು.
ಭಾರತೀಯ ರಿಸರ್ವ್ ಬ್ಯಾಂಕ್ ರಿವರ್ಸ್ ರೆಪೋ ದರವನ್ನು ಶೇಕಡ 4ರಲ್ಲಿ ಸ್ಥಿರವಾಗಿ ಮುಂದುವರಿಸಿದೆ. ಬ್ಯಾಂಕುಗಳಿಂದ ಪಡೆಯುವ ಸಾಲದ ದರವನ್ನು ಕೂಡ ಶೇಕಡ 3.35ರಲ್ಲೇ ಮುಂದುವರಿಸಿದೆ. ಮಾರ್ಜಿನಲ್ ಸ್ಟಾ್ಯಂಡಿಂಗ್ ಫೆಸಿಲಿಟಿ (ಎಂಎಸ್​ಎಫ್) ಮತ್ತು ಬ್ಯಾಂಕ್ ರೇಟ್ ಕೂಡ ಶೇಕಡ 4.25ರಲ್ಲೇ ಮುಂದುವರಿಯಲಿದೆ. ರಿಯಲ್ ಜಿಡಿಪಿ ಶೇಕಡ 9.5ಕ್ಕೆ ಮತ್ತೆ ತಲುಪಿದೆ. ಹಣದುಬ್ಬರ ಪ್ರಮಾಣ ಶೇಕಡ 5.3ರಲ್ಲಿ ಸ್ಥಿರವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
