ನವದೆಹಲಿ: ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಇಲ್ಲ ಎಂದಿದ್ದ ಪೇಟಿಎಂ ಇದೀಗ ಕೆಲವೇ ಗಂಟೆಗಳಲ್ಲಿ ಮರಳಿದೆ. “ಅಪ್​​ಡೇಟ್​: ಆ್ಯಂಡ್​ ವೀ ಆರ್ ಬ್ಯಾಕ್​” ಎನ್ನುತ್ತ ಪ್ಲೇ ಸ್ಟೋರ್​ಗೆ ಪೇಟಿಎಂ ಆ್ಯಪ್​ ವಾಪಸ್​ ಬಂದಿದ್ದು, ಹಲವರು ನಿಟ್ಟುಸಿರು ಬಿಟ್ಟಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಪೇಟಿಎಂ ಆ್ಯಪ್​ಅನ್ನು ಗೂಗಲ್ ಪ್ಲೇಸ್ಟೋರ್​ನಿಂದ ತೆಗೆಯಲಾಗಿತ್ತು. ಅದನ್ನು ಸ್ವತಃ ಪೇಟಿಎಂ ಹೇಳಿಕೊಂಡಿತ್ತು. “ಪೇಟಿಎಂ ಆ್ಯಂಡ್ರಾಯ್ಡ್​ ಆ್ಯಪ್​ ಗೂಗಲ್ ಪ್ಲೇ ಸ್ಟೋರ್​ನಲ್ಲಿ ತಾತ್ಕಾಲಿಕವಾಗಿ ಲಭ್ಯವಿರದ್ದರಿಂದ ಡೌನ್​ಲೋಡ್​ ಅಥವಾ ಅಪ್​ಡೇಟ್​ ಸಾಧ್ಯವಿಲ್ಲ. ಆದರೆ, ನಿಮ್ಮ ಎಲ್ಲ ಹಣವೂ ಸುರಕ್ಷಿತವಾಗಿರಲಿದೆ, ನಾವು ಶೀಘ್ರದಲ್ಲೇ ವಾಪಸ್ ಬರಲಿದ್ದೇವೆ” ಎಂದು ಕಂಪನಿ ಟ್ವೀಟ್​ ಮಾಡಿತ್ತು. ಇದಾದ ಸುಮಾರು ನಾಲ್ಕು ಗಂಟೆಗಳಲ್ಲಿ ಪೇಟಿಎಂ ಗೂಗಲ್​ ಪ್ಲೇ ಸ್ಟೋರ್​ಗೆ ಮರಳಿದೆ.
Update: And we're back! 🥳
— Paytm (@Paytm)September 18, 2020

“ಆ್ಯಪ್ ಮೂಲಕ ಪೇಟಿಎಂ ಜೂಜಿಗೆ ಉತ್ತೇಜನ ನೀಡುತ್ತದೆ. ಆದ್ದರಿಂದ ಅದರ ಮೇಲೆ ನಿಷೇಧ ಹೇರಲಾಗಿದೆ. ಜೂಜು ಕಟ್ಟುವ ಯಾವುದೇ ಆ್ಯಪ್ ಅಥವಾ ಗೇಮ್​ಗಳನ್ನು ಪ್ಲೇಸ್ಟೋರ್‌ನಲ್ಲಿ ನಾವು ಇರಿಸಿಕೊಳ್ಳುವುದಿಲ್ಲ. ಈ ಬಗ್ಗೆ ಪೇಟಿಎಂ ಆ್ಯಪ್ ಡೆವಲಪರ್‌ಗಳಿಗೂ ತಿಳಿಸಲಾಗಿದೆ” ಎಂದು ಗೂಗಲ್​ ಸ್ಪಷ್ಟನೆ ನೀಡಿತ್ತು. ಆದರೆ ಈ ನಾಲ್ಕೈದು ಗಂಟೆಗಳಲ್ಲಿ ಗೂಗಲ್ ಹಾಗೂ ಪೇಟಿಎಂ ಮಧ್ಯೆ ನಡೆದ ಒಪ್ಪಂದ ಏನು? ಯಾವ ಷರತ್ತಿನ ಮೇಲೆ ಪೇಟಿಎಂ ಆ್ಯಪ್​ಗೆ ಮತ್ತೆ ಪ್ಲೇಸ್ಟೋರ್​ನಲ್ಲಿ ಅವಕಾಶ ನೀಡಲಾಗಿದೆ ಎಂಬುದು ಸದ್ಯಕ್ಕೆ ಬಹಿರಂಗಗೊಂಡಿಲ್ಲ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
