ನವದೆಹಲಿ:ಪೇಟಿಎಂ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒನ್​ 97 ಕಮ್ಯುನಿಕೇಷನ್ಸ್ (ಪೇಟಿಎಂ) ಷೇರು, ಸತತ ಎರಡನೇ ದಿನವೂ ಏರಿಕೆ ಕಂಡಿದೆ.
ಇದನ್ನೂ ಓದಿ:500-501ರ ನಡುವೆ ಅದೆಷ್ಟೋ ನಡೆಯಿತು.. ರವಿಚಂದ್ರನ್ ಅಶ್ವಿನ್ ಪತ್ನಿ ಹೀಗೆ ಹೇಳಿದ್ದರ ಹಿಂದಿನ ಮರ್ಮವೇನು?
ಬಿಎಸ್‌ಇ ಸೋಮವಾರ ಶೇಕಡಾ ಐದು ಏರಿಕೆ ಕಂಡು 358.55ರೂ.ಸಮೀಪ ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿತು. ವ್ಯಾಪಾರಿ ಉದ್ದೇಶಕ್ಕಾಗಿ ಆಕ್ಸಿಸ್ ಬ್ಯಾಂಕ್‌ನೊಂದಿಗೆ ಒಪ್ಪಂದವನ್ನು ಘೋಷಿಸಿದ ನಂತರ ಕಂಪನಿಯ ಷೇರುಗಳು ಏರಿಕೆ ಕಂಡವು.
ಪೇಟಿಎಂ ಪೋಷಕ ಒನ್​ 97 ಕಮ್ಯುನಿಕೇಷನ್ಸ್ ತನ್ನ ನೋಡಲ್ ಖಾತೆಯನ್ನು ಪೇಮೆಂಟ್ಸ್ ಬ್ಯಾಂಕ್‌ನಿಂದ ಆಕ್ಸಿಸ್​ ಬ್ಯಾಂಕ್‌ಗೆ ವರ್ಗಾಯಿಸಿದೆ. ಈ ಕಾರಣದಿಂದಾಗಿ, ಮಾರ್ಚ್ 15 ರ ನಂತರ ವ್ಯಾಪಾರಿಗಳಿಗೆ ಪೇಟಿಎಂ ಕ್ಯೂಆರ್, ಸೌಂಡ್‌ಬಾಕ್ಸ್ ಮತ್ತು ಕಾರ್ಡ್ ಮೆಷಿನ್ ಸೇವೆಗಳು ಎಂದಿನಂತೆ ಮುಂದುವರಿಯುತ್ತದೆ ಎಂದು ಕಂಪನಿ ತಿಳಿಸಿದೆ.
ನೋಡಲ್ ಖಾತೆ ಮೂಲಕ ಕಂಪನಿಯ ಗ್ರಾಹಕರು ಮತ್ತು ವ್ಯಾಪಾರಿಗಳ ಎಲ್ಲಾ ವಹಿವಾಟುಗಳನ್ನು ಈ ಖಾತೆಯ ಮೂಲಕ ಇತ್ಯರ್ಥಪಡಿಸಲಾಗುತ್ತದೆ.
ಜನವರಿ 31 ರಂದು ಆರ್‌ಬಿಐ ಪೇಟಿಎಂ ಬ್ಯಾಂಕ್​(ಪಿಪಿಬಿಎಲ್) ಮೇಲೆ ನಿರ್ಬಂಧ ಹೇರಿದ್ದು ಗೊತ್ತೇ ಇದೆ. ಫೆಬ್ರವರಿ 29 ರ ನಂತರ ಪ್ರಿಪೇಯ್ಡ್ ವರ್ಗಾವಣೆ, ವ್ಯಾಲೆಟ್‌ಗಳು, ಫಾಸ್ಟ್ಯಾಗ್‌ಗಳು, ಎನ್​ಸಿಎಂಸಿಗಳಲ್ಲಿ ಠೇವಣಿ. ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಆದೇಶಿಸಲಾಗಿದೆ. ಇತ್ತೀಚೆಗೆ, ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ. ಆರ್‌ಬಿಐ ನಿರ್ಬಂಧಗಳ ಘೋಷಣೆಯ ನಂತರ ಕಂಪನಿಯ ಷೇರುಗಳು ಕುಸಿಯುತ್ತಲೇ ಇದ್ದವು. ಆಕ್ಸಿಸ್ ಬ್ಯಾಂಕ್ ಜತೆಗಿನ ಒಪ್ಪಂದದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಕೊಂಚ ರಿಲೀಫ್ ಸಿಕ್ಕಿದೆ.
ಇಡಿ ಮುಚ್ಚಿದರೆ ಘಟಾನುಘಟಿ ನಾಯಕರು ಬಿಜೆಪಿ ತೊರೆಯಲಿದ್ದಾರೆ : ಕೇಜ್ರಿವಾಲ್​​​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × five =
Remember me
