ನವದೆಹಲಿ: ಡ್ರ್ಯಾಗನ್ ಚೀನಾದ 59ಕ್ಕೂ ಹೆಚ್ಚು ಆಪ್​ಗಳನ್ನು ನಿರ್ಬಂಧಿಸುವ ಮೂಲಕ ಮೇಕ್ ಇನ್ ಇಂಡಿಯಾ ಸಂಕಲ್ಪ ಈಡೇರಿಸುವ ಪಣ ತೊಟ್ಟಿರುವ ಕೇಂದ್ರ ಸರ್ಕಾರ ದೇಶದ ವಿವಿಧ ಕಂಪನಿಗಳಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ(ಪಿಬಿಒಸಿ)ವಿಸ್ತರಿಸಿರುವ ಹೂಡಿಕೆಯ ಬೇರು ಕಂಡು ದಂಗಾಗಿದೆ.
ಎರಡು ವರ್ಷಗಳ ಹಿಂದಷ್ಟೇ ಆರ್​ಬಿಐ ಭಾರತದಲ್ಲಿ ಶಾಖೆ ಆರಂಭಿಸಲು ಪಿಬಿಒಸಿಗೆ ಅನುಮತಿ ಕೊಟ್ಟಿತ್ತು. ಈ ಬ್ಯಾಂಕ್​ನ ಮೂಲಕ ಚೀನಾದ ಹಲವು ಕಂಪನಿಗಳು ತಮ್ಮ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ಪರೋಕ್ಷವಾಗಿ ನಿಯಂತ್ರಿಸಲ್ಪಟ್ಟಿರುವ ಕಂಪನಿಗಳಲ್ಲಿ , ಭಾರತೀಯ ಆರ್ಥಿಕತೆಯಲ್ಲಿ ವ್ಯೂಹಾತ್ಮಕವಾಗಿ ಮಹತ್ವ ಪಡೆದುಕೊಂಡಿರುವ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಒಲವು ತೋರಿದ್ದವು ಎನ್ನಲಾಗಿದೆ. ಕೇಂದ್ರ ಸರ್ಕಾರ ತನ್ನ ವಿದೇಶಿ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದ ಬಳಿಕ ಈ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.
ಎಲ್ಲೆಲ್ಲಿ ಪಿಬಿಒಸಿ ಹೂಡಿಕೆ?: ಎಚ್​ಡಿಎಫ್​ಸಿ- ಶೇ.1, ಇತರ ಹಲವು ಸಂಸ್ಥೆಗಳಲ್ಲಿ ಶೇ.1 ಅಥವಾ ಅದಕ್ಕಿಂತ ಕಡಿಮೆ ಹೂಡಿಕೆ ಇರುವುದರಿಂದ ಗಮನಕ್ಕೆ ಬರುತ್ತಿಲ್ಲ ಪಿರಾಮಲ್ ಎಂಟರ್​ಪ್ರೖೆಸಸ್-ಶೇ.0.43(137 ಕೋಟಿ ರೂಪಾಯಿ), ಅಂಬುಜಾ ಸಿಮೆಂಟ್-ಶೇ.32(122 ಕೋಟಿ ರೂಪಾಯಿ), ಎಚ್​ಡಿಎಫ್​ಸಿ-ಶೇ.1.0 (13,100 ಕೋಟಿ ರೂಪಾಯಿ)
ಇದನ್ನೂ ಓದಿ:ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕ್ ವಿರುದ್ಧ ಭಾರಿ ಪ್ರತಿಭಟನೆ
ಹೂಡಿಕೆಯ ಹೊಳೆ: 2019ರಲ್ಲಿ ಸಣ್ಣ ಪಾಲುದಾರ ಕಂಪನಿಯಾಗಿ ಭಾರತಕ್ಕೆಕಾಲಿಟ್ಟ ಪಿಬಿಒಸಿ ಅತಿ ಕಡಿಮೆ ಸಮಯದಲ್ಲಿ ಹಲವಾರು ಕಂಪನಿಗಳ ಪಾಲುದಾರಿಕೆ ಪಡೆಯಿತು. ಆದರೆ ಒಟ್ಟಾರೆ ಎಷ್ಟೆಷ್ಟು ಹೂಡಿಕೆ ಮಾಡಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಂದು ಚೀನಾ ಕಂಪನಿಗಳು ಪ್ರಮುಖ ಹೂಡಿಕೆದಾರರಾಗಿ ಹೊರಹೊಮ್ಮಿರುವ ಹಿಂದೆ ಚೀನಾದ ಈ ಕೇಂದ್ರೀಯ ಬ್ಯಾಂಕ್​ನ ಪ್ರಭಾವ ಸಾಕಷ್ಟು ಕೆಲಸ ಮಾಡಿದೆ. ತಾಂತ್ರಿಕತೆಯ ಸ್ಟಾರ್ಟಪ್​ಗಳು,ರಿಯಲ್ ಎಸ್ಟೇಟ್ ಸೆಕ್ಟೇರ್​ನಲ್ಲೂ ತನ್ನ ಹೂಡಿಕೆ ಬೇರನ್ನು ವಿಸ್ತರಿಸಿಕೊಂಡಿದೆ. ಅಲಿಬಾಬಾ, ಪೇಟಿಎಂ ಗ್ರೂಪ್, ಝೋಮ್ಯಾಟೋ, ಬಿಜೂಸ್​ನಂಹ ಕಂಪನಿಗಳ ಮೂಲಕ ಭಾರತದಲ್ಲಿ ಹೂಡಿಕೆಯ ಹೊಳೆ ಹರಿಸುತ್ತಿದೆ.
ಲಡಾಖ್​ನಲ್ಲಿ 20 ಸಾವಿರ ಕೋಟಿ ಮೌಲ್ಯದ ರಸ್ತೆ ಅಭಿವೃದ್ಧಿ ಕಾಮಗಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
