ನವದೆಹಲಿ: ಕಾಂಗ್ರೆಸ್​ ಅವನತಿ ಶುರುವಾಗಿದ್ದು 2013ರಲ್ಲಿ. ಆಗ ಶೀಲಾ ದೀಕ್ಷಿತ್​ ಅವರೇ ಮುಖ್ಯಮಂತ್ರಿಯಾಗಿದ್ದರು ಎಂದು ಹೇಳುವ ಮೂಲಕ ಪಕ್ಷದ ವಲಯದಲ್ಲಿಯೇ ಅಸಮಾಧಾನ ಮೂಡಿಸಿದ್ದ ಕಾಂಗ್ರೆಸ್​ ನಾಯಕ ಪಿಸಿ ಚಾಕೋ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಶೀಲಾ ದೀಕ್ಷಿತ್​ ಹೆಸರನ್ನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಶೀಲಾ ಜಿ ಅವರ ಆಡಳಿತದಲ್ಲಿಯೇ ಕಾಂಗ್ರೆಸ್​ ಅವನತಿ ಶುರುವಾಗಿತ್ತು ಎಂದು ನಾನು ಹೇಳಲಿಲ್ಲ. 2013, 2014, 2015ರಲ್ಲಿ ಸೋತೆವು. 2017 ರ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆಯಲ್ಲೂ ನಮಗೆ ಸೋಲಾಯಿತು ಎಂದು ಹೇಳಿದರು.
ನನ್ನ ಮಾತುಗಳು ತಪ್ಪಾಗಿ ಬಿಂಬಿತವಾಗಲು ಯಾರು ಕಾರಣ ಎಂಬುದು ನಮಗೆ ಗೊತ್ತು. ನಾನು ಶೀಲಾ ದೀಕ್ಷಿತ್​ ಅವರನ್ನು ದೂಷಿಸಿದ್ದೇನೆ ಎಂದು ಉದ್ದೇಶಪೂರ್ವಕವಾಗಿಯೇ ಆರೋಪ ಮಾಡಲಾಗುತ್ತಿದೆ. ಇದು ಮೊದಲಲ್ಲ. ಹಿಂದೆ ಕೂಡ ಇದನ್ನೇ ಮಾಡಲಾಗಿತ್ತು ಎಂದು ತಿಳಿಸಿದರು.
ಇಂದು ಬೆಳಗ್ಗೆ ರಾಜೀನಾಮೆ ನೀಡುವ ವೇಳೆ ಪ್ರತಿಕ್ರಿಯೆ ನೀಡಿದ್ದ ಚಾಕೋ ಅವರು, ಕಾಂಗ್ರೆಸ್​ ಸೋಲು ಪ್ರಾರಂಭವಾಗಿದ್ದು ಶೀಲಾ ದೀಕ್ಷಿತ್​ ಆಡಳಿತದಲ್ಲಿ ಎಂಬ ಅರ್ಥ ಬರುವಂತೆ ಮಾತನಾಡಿದ್ದರು. (ಏಜೆನ್ಸೀಸ್​)
ದೆಹಲಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು; ಮೃತ ನಾಯಕಿ ಶೀಲಾ ದೀಕ್ಷಿತ್​ರನ್ನು ನೇರ ಹೊಣೆ ಮಾಡಿ ರಾಜೀನಾಮೆ ಸಲ್ಲಿಸಿದ ಪಕ್ಷದ ಉಸ್ತುವಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
