ಹೈದರಾಬಾದ್​/ನವದೆಹಲಿ:ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ ಅವರನ್ನು ಭಾನುವಾರ ಸಂಜೆ ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಅಜಾದ್​, ವಾಪಸ್ಸು ದೆಹಲಿಗೆ ಕಳುಹಿಸಲಾಗಿದೆ. ಅಲ್ಲದೆ, ಬಂಧಿಸುವ ಮುನ್ನ ನನ್ನ ಬೆಂಬಲಿಗರು ಮೇಲೆಯೂ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತೆಲಂಗಾಣದಲ್ಲಿ ಸರ್ವಾಧಿಕಾರ ತುತ್ತತುದಿಯಲ್ಲಿದೆ. ಮೊದಲು ನಮ್ಮ ಜನರನ್ನು ದಂಡಗಳಿಂದ ಥಳಿಸಿ ಬಳಿಕ ಬಂಧಿಸಲಾಯಿತು. ಬಳಿಕ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಕರೆತಂದು ವಾಪಸ್ಸು ದೆಹಲಿಗೆ ಕಳುಹಿಸಿದರು ಎಂದು ಇಂದು ಬೆಳಗ್ಗೆ ಟ್ವೀಟ್​ ಮಾಡಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಕಚೇರಿಯ್ನನು ಟ್ಯಾಗ್​ ಮಾಡಿದ್ದಾರೆ. ಅಲ್ಲದೆ, ಬಹುಜನ ಸಮಾಜ ಈ ಅವಮಾನವನ್ನು ಸಹಿಸುವುದಿಲ್ಲ. ಆದಷ್ಟು ಬೇಗ ಮತ್ತೆ ಮರಳುವೇ ಎಂದು ಹೇಳಿದ್ದಾರೆ.
ಭಾನುವಾರ ಹೈದರಾಬಾದ್​ನ ಮೆಹದಿಪಟ್ನಂನ ಕ್ರೈಸ್ಟಲ್​ ಗಾರ್ಡನ್​ ಆಯೋಜಿಸಲಾಗಿದ್ದ ಸಿಎಎ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಅಜಾದ್​ ಮತ್ತವರ ಬೆಂಬಲಿಗರನ್ನು ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿದ್ದರು.
ಸಾರ್ವಜನಿಕ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಹೀಗಾಗಿ ಸೆಕ್ಷನ್​ 151 ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೈದರಾಬಾದ್​ ಪೊಲೀಸ್​ ಆಯುಕ್ತರಾದ ಅಂಜನಿ ಕುಮಾರ್​ ತಿಳಿಸಿದ್ದರು. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ತಿಳಿದುಬಂದಲ್ಲಿ ಭಾರತೀಯ ದಂಡ ಸಂಹಿತೆ 151 ಸೆಕ್ಷನ್ ಅಡಿಯಲ್ಲಿ ಯಾರನ್ನು ಬೇಕಾದರು ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇದೆ.
ಕಳೆದ ತಿಂಗಳು ದೆಹಲಿಯ ದರಿಯಾಗಂಜ್​ನಲ್ಲಿ ಪ್ರತಿಭಟನಾ ವೇಳೆ ಬಂಧಿಯಾಗಿದ್ದ ಅಜಾದ್​, ಜನವರಿ 16ರಂದು ಜಾಮೀನು ಪಡೆದ ತಿಹಾರ್​ ಜೈಲಿನಿಂದ ಹಿಂದಿರುಗಿ ಬಂದಿದ್ದರು.(ಏಜೆನ್ಸೀಸ್​)
तेलंगाना में तानाशाही चरम पर है लोगों के विरोध प्रदर्शन करने के अधिकार को छीना जा रहा है पहले हमारे लोगों को लाठियां मारी गई फिर मुझे गिरफ्तार कर लिया गया,अब मुझे एयरपोर्ट ले आएं है दिल्ली भेज रहे है।@TelanganaCMOयाद रखे बहुजन समाज इस अपमान को कभी नही भूलेगा। जल्द वापिस आऊंगा— Chandra Shekhar Aazad (@BhimArmyChief)January 27, 2020
तेलंगाना में तानाशाही चरम पर है लोगों के विरोध प्रदर्शन करने के अधिकार को छीना जा रहा है पहले हमारे लोगों को लाठियां मारी गई फिर मुझे गिरफ्तार कर लिया गया,अब मुझे एयरपोर्ट ले आएं है दिल्ली भेज रहे है।@TelanganaCMOयाद रखे बहुजन समाज इस अपमान को कभी नही भूलेगा। जल्द वापिस आऊंगा
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + fourteen =
Remember me
