ನವದೆಹಲಿ :ಪೆಗಾಸಸ್​ ಬೇಹುಗಾರಿಕೆ ಸಾಫ್ಟ್​ವೇರ್​ನಿಂದ ವಿಪಕ್ಷ ರಾಜಕಾರಣಿಗಳ ಮತ್ತು ಪತ್ರಕರ್ತರ ಫೋನ್​ಗಳನ್ನು ಹ್ಯಾಕ್​ ಮಾಡುಲಾಗುತ್ತಿದೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಿಂದ ಹಿಡಿದು, ಸಂಸತ್​ವರೆಗೆ ದೇಶದಲ್ಲಿ ಸಂಚಲನ ಮೂಡಿಸಿದೆ. ಹೀಗಿರುವಾಗ ಪೆಗಾಸಸ್ ಪ್ರಕರಣದ ಬಗ್ಗೆ ವಿಶೇಷ ತನಿಖೆ ಆದೇಶಿಸಬೇಕೆಂದು ಕೋರಿ ಹಲವು ರಿಟ್​ ಅರ್ಜಿಗಳು ಸುಪ್ರೀಂ ಕೋರ್ಟ್​ ಮುಂದೆ ವಿಚಾರಣೆಗೆ ಬಂದಿವೆ.
ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್​ ಅವರನ್ನೊಳಗೊಂಡ ನ್ಯಾಯಪೀಠವು, ಹಿರಿಯ ಪತ್ರಕರ್ತ ಎನ್​.ರಾಮ್​ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತು. ಪೆಗಾಸಸ್ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಕೋರಿರುವ ಅರ್ಜಿದಾರರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗೀತನಕ್ಕೆ ಧಕ್ಕೆಯಾಗಿದೆ ಎಂದು ಪ್ರಸ್ತಾಪಿಸಿದರು.
ಇದನ್ನೂ ಓದಿ:ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ಯಾವುದೇ ರಾಜಿಯಿಲ್ಲ: ಸಿಎಂ ಬೊಮ್ಮಾಯಿ
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರು, ಫೋನ್ ಹ್ಯಾಕ್​ ಆಗುತ್ತಿದೆ ಎಂದ ಪಕ್ಷದಲ್ಲಿ ಯಾರೂ ಈ ಬಗ್ಗೆ ಐಟಿ ಕಾಯ್ದೆಯಡಿ ದೂರು ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಮತ್ತೊಬ್ಬ ಅರ್ಜಿದಾರ ವಕೀಲ ಎಂ.ಎಲ್​.ಶರ್ಮ ಅವರಿಗೆ ನ್ಯೂಸ್​ಪೇಪರ್​ ಕಟಿಂಗ್​ಗಳನ್ನಷ್ಟೇ ಅಡಕ ಮಾಡಿ ಕೋರ್ಟ್​ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದೀರಲ್ಲಾ ಎಂದು ಕೇಳಿದರು. ಜೊತೆಗೇ, ಈ ಬಗೆಗಿನ “ಪತ್ರಿಕಾ ವರದಿಗಳು ಸರಿಯಾಗಿವೆ ಎಂದರೆ ಆರೋಪಗಳು ಗಂಭೀರವಾಗಿವೆ” ಎಂದೂ ಅಭಿಪ್ರಾಯಪಟ್ಟರು.
ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪ್ರಾತಿನಿಧ್ಯ ಇರಬೇಕು ಎಂದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ವಕೀಲರಿಗೆ ಅರ್ಜಿಗಳ ಪ್ರತಿಗಳನ್ನು ನೀಡಲು ಸೂಚಿಸಿ, ವಿಚಾರಣೆಯನ್ನು ಆಗಸ್ಟ್​ 10ಕ್ಕೆ ಮುಂದೂಡಿತು.(ಏಜೆನ್ಸೀಸ್)
ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ಗೆ ಮತ್ತೊಂದು ಶಾಕ್! ಪ್ರಶಾಂತ್​ ಕಿಶೋರ್​ ರಾಜೀನಾಮೆ

‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
