ಸ್ಮಾರ್ಟ್​ಫೋನ್​ಗಳನ್ನು ಎರಡು ಮೂಲ ಆಪರೇಟಿಂಗ್ ಸಿಸ್ಟಂ ಬಳಸಿಕೊಂಡು ತಯಾರಿಸಲಾಗುತ್ತದೆ. ಇದರಲ್ಲಿ ಒಂದು ಗೂಗಲ್​ನ ಆಂಡ್ರಾಯ್್ಡ ಆಪರೇಟಿಂಗ್ ಸಿಸ್ಟಂ ಆಗಿದ್ದರೆ, ಇನ್ನೊಂದು ಆಪಲ್​ನ ಐಫೋನ್ ಆಪರೇಟಿಂಗ್ ಸಿಸ್ಟಂ. ಭಾರತದಲ್ಲಿನ ಶೇ. 95ಕ್ಕಿಂತಲೂ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಂಡ್ರಾಯ್್ಡ ಆಪರೇಟಿಂಗ್ ಸಿಸ್ಟಂ ಆಧರಿಸಿವೆ. ಈ ಕ್ಷೇತ್ರದಲ್ಲಿರುವ ಏಕಸ್ವಾಮ್ಯವನ್ನು ದುರುಪಯೋಗ ಮಾಡಿಕೊಂಡು ತನ್ನ ಇತರ ಉತ್ಪನ್ನಗಳನ್ನು ಮಾರುತ್ತಿದೆ ಎಂಬ ಆರೋಪ ಗೂಗಲ್ ವಿರುದ್ಧ ಇದೆ. ಈ ರೀತಿ ನ್ಯಾಯಸಮ್ಮತವಲ್ಲದ ವ್ಯಾಪಾರ ಸ್ಪರ್ಧೆಯ ಕಾರಣಕ್ಕಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಕಳೆದ ಗುರುವಾರ ಗೂಗಲ್​ಗೆ 162 ಮಿಲಿಯನ್ ಡಾಲರ್ (1,337.76 ಕೋಟಿ ರೂಪಾಯಿ) ಮೊತ್ತದ ತಾತ್ಕಾಲಿಕ ದಂಡ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ 936 ಕೋಟಿ ರೂ. ದಂಢ ವಿಧಿಸಿದೆ.
ಗೂಗಲ್​ಗೆ ಸೂಚನೆ:ತನ್ನ ವ್ಯಾಪಾರ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳುವಂತೆ ಸಿಸಿಐ ಗೂಗಲ್​ಗೆ ಹಲವಾರು ಬಾರಿ ಸೂಚನೆಗಳನ್ನು ನೀಡಿತ್ತು. ಉದಾಹರಣೆಗೆ, ಅನುಕೂಲಕರ ಮೂಲ ಉಪಕರಣ ತಯಾರಕರಿಗೆ (ಒಇಎಂ) ತನ ಪ್ಲಗ್​ಇನ್ ಸೇವೆಗಳ ಪ್ರವೇಶ ನಿರಾಕರಿಸಬಾರದು ಮತ್ತು ಒಇಎಂಗಳಿಗೆ ಪ್ಲೇ ಸ್ಟೋರ್ ಪರವಾನಗಿ ನೀಡುವುದನ್ನು ಗೂಗಲ್ ಸರ್ಚ್, ಕ್ರೋಮ್ ಬ್ರೌಸರ್, ಯುಟ್ಯೂಬ್, ಗೂಗಲ್ ಮ್ಯಾಪ್ಸ್ ಅಥವಾ ಇನ್ನಾವುದೇ ಗೂಗಲ್ ಅಪ್ಲಿಕೇಶನ್​ಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕೆಂಬ ಷರತ್ತಿಗೆ ತಳಕು ಹಾಕಬಾರದು ಎಂದು ಸಿಸಿಐ ಸೂಚಿಸಿತ್ತು. ಬಳಕೆದಾರರು ತಮ್ಮ ಡೀಫಾಲ್ಟ್ ಸರ್ಚ್ ಇಂಜಿನ್ ಅನ್ನು ಆಯ್ಕೆ ಮಾಡಲು ಗೂಗಲ್ ಅನುಮತಿಸಬೇಕು ಹಾಗೂ ತಮ್ಮ ಅಪ್ಲಿಕೇಶನ್​ಗಳನ್ನು ಗೂಗಲ್ ಪ್ಲೇ ಸ್ಟೋರ್​ನ ಹೊರಗಡೆ ಸೈಡ್-ಲೋಡಿಂಗ್ ಮೂಲಕ ವಿತರಿಸುವ ಅಪ್ಲಿಕೇಶನ್ ಡೆವಲಪರ್​ಗಳ ಸಾಮರ್ಥ್ಯವನ್ನು ಕೂಡ ನಿರ್ಬಂಧಿಸಬಾರದು ಎಂದು ಸಿಸಿಐ ಸೂಚಿಸಿತ್ತು. ಭದ್ರತಾ ಬೆದರಿಕೆ ಸಾಧ್ಯತೆಯ ನೆಪವನ್ನಿಟ್ಟುಕೊಂಡು ಗೂಗಲ್ ಸಂಸ್ಥೆಯು ಬಳಕೆದಾರರಿಗೆ ಸೈಡ್-ಲೋಡಿಂಗ್ ಅಪ್ಲಿಕೇಶನ್​ಗಳ ವಿರುದ್ಧ ದೀರ್ಘಕಾಲದಿಂದ ಎಚ್ಚರಿಕೆ ನೀಡುತ್ತ ಬಂದಿರುವುದನ್ನು ಗಮನಿಸಿ ಸಿಸಿಐ ಈ ಸೂಚನೆ ನೀಡಿದೆ.
ಹೆಚ್ಚುವರಿ ಪ್ರಯೋಜನ:ಗೂಗಲ್ ಕಂಪನಿಯು ಆಂಡ್ರಾಯ್್ಡ ಆಪರೇಟಿಂಗ್ ಸಿಸ್ಟಮ್ ಮತ್ತು ಇತರ ಪರವಾನಗಿಗಳನ್ನು ನಿರ್ವಹಿಸುತ್ತದೆ. ಹೀಗಾಗಿ, ಇದು ಆಂಡ್ರಾಯ್್ಡ ಸಾಧನಗಳಲ್ಲಿ ಸರ್ಚ್ ಅಪ್ಲಿಕೇಶನ್, ವಿಜೆಟ್ ಮತ್ತು ಕ್ರೋಮ್ ಬ್ರೌಸರ್​ನಂತಹ ಪ್ರಮುಖ ಹುಡುಕಾಟ ಪ್ರವೇಶ ಬಿಂದುಗಳನ್ನು ಪ್ರಿ ಇನ್​ಸ್ಟಾಲ್ ಮಾಡುವಂತೆ ಒತ್ತಡ ಹೇರಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಅನುಕೂಲಕರವಾಗಿದೆ. ಇದಲ್ಲದೆ, ಆಂಡ್ರಾಯ್ಡ್ ಸಾಧನಗಳಲ್ಲಿ ಯುಟ್ಯೂಬ್​ನಂತಹ ಇತರ ಆದಾಯ ಗಳಿಸುವ ಅಪ್ಲಿಕೇಶನ್​ಗಳಿಗೆ ಸಂಬಂಧಿಸಿದಂತೆ ಗೂಗಲ್ ಗಮನಾರ್ಹ ಸ್ಪರ್ಧಾತ್ಮಕ ಅನುಕೂಲಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ, ಮಾಡಾ (ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ) ಮೂಲಕ ಗೂಗಲ್ ಪಡೆದುಕೊಳ್ಳುವ ಸುರಕ್ಷಿತ ಮಾರುಕಟ್ಟೆ ಪ್ರವೇಶವನ್ನು ಅದರ ಪ್ರತಿಸ್ಪರ್ಧಿಗಳು ಎಂದಿಗೂ ಪಡೆಯಲು ಸಾಧ್ಯವಿಲ್ಲ ಎಂದು ಸಿಸಿಐ ತನ್ನ ಆದೇಶದಲ್ಲಿ ತಿಳಿಸಿದೆ.
ಸಿಸಿಐ ಆದೇಶದಲ್ಲಿ ಹೇಳಿದ್ದೇನು?:ಮೇಕ್​ವೆುೖಟ್ರಿಪ್ ಮತ್ತು ಗೊಇಬಿಬೊ ತಮ್ಮ ಮಾರುಕಟ್ಟೆ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಸಿಸಿಐ ಹೇಳಿದೆ. ಒಯೊ ಮತ್ತು ಮೆಕ್​ವೆುೖಟ್ರಿಪ್- ಗೊಇಬಿಬೊ ನಡುವಿನ ವಾಣಿಜ್ಯ ವ್ಯವಸ್ಥೆಯು ಈ ಫ್ರಾಂಚೈಸರ್​ಗಳ ಸೇವೆಗಳನ್ನು ಪಡೆಯುತ್ತಿದ್ದ ಫ್ಯಾಬ್​ಹೋಟೆಲ್​ಗಳು, ಟ್ರಿಬೋ ಮತ್ತು ಸ್ವತಂತ್ರ ಹೋಟೆಲ್​ಗಳನ್ನು ಪಟ್ಟಿಯಿಂದ ಹೊರಗಿಡಲು ಕಾರಣವಾಗಿದ್ದು, ಇದು ಸ್ಪರ್ಧಾವಿರೋಧಿಯಾಗಿದೆ ಎಂದು ಆಯೋಗವು ಹೇಳಿದೆ. ಇದರರ್ಥ, ಇತರ ಬುಕಿಂಗ್ ವೆಬ್​ಸೈಟ್ ಪ್ಲಾಟ್​ಫಾಮರ್್​ಗಳಲ್ಲಿ ಒಂದೇ ರೀತಿಯ ಅಥವಾ ಹೆಚ್ಚಿನ ಬೆಲೆಗಳನ್ನು ನೀಡುವಂತೆ ಹೋಟೆಲ್​ಗಳನ್ನು ಮೇಕ್​ವೆುೖಟ್ರಿಪ್ ಕಂಪನಿಯು ಒತ್ತಾಯಿಸಲು ಸಾಧ್ಯವಿಲ್ಲ.
ಇತರ ದೇಶಗಳಲ್ಲೂ ದಂಡ:ಇತರ ದೇಶಗಳಲ್ಲಿ ವಿಧಿಸಲಾದ ದಂಡದ ಪ್ರಮಾಣಕ್ಕೆ ಹೋಲಿಸಿದರೆ ಸಿಸಿಐ ವಿಧಿಸಿರುವ ದಂಡದ ಮೊತ್ತ ಕಡಿಮೆ. 2017ರಲ್ಲಿ, ಐರೋಪ್ಯ ಆಯೋಗವು ಯುರೋಪ್ ಒಕ್ಕೂಟದ ‘ವಿಶ್ವಾಸ ವಿರೋಧಿ’ (ಆಂಟಿಟ್ರಸ್ಟ್) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೂಗಲ್​ಗೆ 2.42 ಶತಕೋಟಿ ಯುರೋ (19,496 ಕೋಟಿ ರೂಪಾಯಿ) ದಂಡ ವಿಧಿಸಿತ್ತು. ಒಂದು ಸರ್ಚ್ ಇಂಜಿನ್ ಆಗಿ ಪ್ರಾಬಲ್ಯವನ್ನು ದುರುಪಯೋಗ ಮಾಡಿಕೊಂಡು, ತನ್ನ ಮತ್ತೊಂದು ಉತ್ಪನ್ನವಾದ ‘ಶಾಪಿಂಗ್ ಸೇವೆ ಹೋಲಿಕೆ’ ಮಾರಾಟ ಮಾಡಲು ಮುಂದಾಗಿದ್ದಕ್ಕಾಗಿ ಈ ದಂಡ ವಿಧಿಸಲಾಗಿತ್ತು. 2018ರಲ್ಲಿ ಐರೋಪ್ಯ ಒಕ್ಕೂಟದ ಕಾರ್ಯಕಾರಿ ಆಯೋಗವು 4 ಶತಕೋಟಿ ಯುರೋ (32,225 ಕೋಟಿ ರೂಪಾಯಿ) ದಂಡ ವಿಧಿಸಿರುವುದನ್ನು ಐರೋಪ್ಯ ನ್ಯಾಯಾಲಯ ಎತ್ತಿಹಿಡಿದಿದೆ.
392 ಕೋಟಿ ರೂ. ದಂಡ:ಸಿಸಿಐ ಕಳೆದ ಬುಧವಾರ, ಆನ್​ಲೈನ್​ನಲ್ಲಿ ಹೋಟೆಲ್ ಬುಕಿಂಗ್ ಮಾಡುವ ವೆಬ್​ಸೈಟ್​ಗಳಾದ ಮೇಕ್​ವೆುೖಟ್ರಿಪ್, ಗೊಇಬಿಬೊ ಮತ್ತು ಮಿತವ್ಯಯಿ ಹೋಟೆಲ್​ಗಳ ಸರಪಳಿ ಹೊಂದಿರುವ ಒಯೊಗೆ ಒಟ್ಟು 392 ಕೋಟಿ ರೂ. ದಂಡ ವಿಧಿಸಿದೆ. ಹೋಟೆಲ್ ಕೊಠಡಿ ಲಭ್ಯತೆ ಪಟ್ಟಿಗಳಲ್ಲಿ ‘ಸ್ಪರ್ಧಾತ್ಮಕ ವಿರೋಧಿ’ ನಡವಳಿಕೆಗಾಗಿ ಈ ದಂಡ ಹಾಕಲಾಗಿದೆ. ಇದರಲ್ಲಿ ಮೇಕ್​ವೆುೖಟ್ರಿಪ್ ಮತ್ತು ಗೊಇಬಿಬೊಗೆ 223.48 ಕೋಟಿ ರೂಪಾಯಿ ಹಾಗೂ ಒಯೊಗೆ 168.88 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಮೇಕ್​ವೆುೖಟ್ರಿಪ್ ತನ್ನ ಪ್ಲಾಟ್​ಫಾಮರ್್​ನಲ್ಲಿ ಸಾಫ್ಟ್​ಬ್ಯಾಂಕ್ ಬೆಂಬಲಿತ ಒಯೊಗೆ ವಿಶೇಷ ಆದ್ಯತೆ ನೀಡಿದೆ ಎಂದು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್​ಎಚ್​ಆರ್​ಐ) ದೂರು ನೀಡಿದ ನಂತರ ಸಿಸಿಐ 2019ರಿಂದ ಈ ಕಂಪನಿಗಳ ವಿರುದ್ಧ ತನಿಖೆ ಕೈಗೊಂಡಿದೆ.
ದಂಡ ಹೆಚ್ಚಳ ಸಾಧ್ಯತೆ:ಅಗತ್ಯವಿರುವ ಹಣಕಾಸಿನ ವಿವರಗಳು ಮತ್ತು ಪೂರಕ ದಾಖಲೆಗಳನ್ನು ಒದಗಿಸಲು ಗೂಗಲ್​ಗೆ 30 ದಿನಗಳ ಕಾಲಾವಕಾಶವನ್ನು ಸಿಸಿಐ ನೀಡಿದೆ. ಈಗ ವಿಧಿಸಲಾಗಿರುವ ದಂಡವು ತಾತ್ಕಾಲಿಕವಾಗಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ಮೊದಲಲ್ಲ:ಗೂಗಲ್​ಗೆ ಸಿಸಿಐ ದಂಡ ವಿಧಿಸಿರುವುದು ಇದು ಎರಡನೇ ಬಾರಿ. 2018ರಲ್ಲಿ, ಆನ್​ಲೈನ್ ಹುಡುಕಾಟಕ್ಕಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅನ್ಯಾಯದ ವ್ಯಾಪಾರ ಅಭ್ಯಾಸಗಳಿಗಾಗಿ 136 ಕೋಟಿ ರೂ. ದಂಡ ವಿಧಿಸಿತ್ತು.
ಮುಂದೇನು?:ಒಯೊ ಮತ್ತು ಮೇಕ್​ವೆುೖಟ್ರಿಪ್ ಕಂಪನಿಗಳು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ‘ಬಹುತೇಕವಾಗಿ ನಮ್ಮ ಗ್ರಾಹಕರು ನಮ್ಮ ಅಪ್ಲಿಕೇಶನ್, ವೆಬ್​ಸೈಟ್ ಮತ್ತು ಭಾರತದಲ್ಲಿನ ಇತರ ಚಾನಲ್​ಗಳ ಮೂಲಕ ನೇರವಾಗಿ ಬುಕ್ ಮಾಡುತ್ತಾರೆ. ನಮ್ಮ ವ್ಯಾಪಾರದ ಅಭ್ಯಾಸಗಳು ಮತ್ತು ನಡವಳಿಕೆಗಳು ಕಾನೂನುಗಳಿಗೆ ಅನುಗುಣವಾಗಿರುತ್ತವೆ’ ಎಂದು ಒಯೊ ಹೇಳಿದೆ. ‘ಇ-ಕಾಮರ್ಸ್ ಮಾರುಕಟ್ಟೆಯ ಬೆಳವಣಿಗೆಯ ಮೇಲೆ ಈ ಆದೇಶವು ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ನಾವು ಭಾವಿಸುತ್ತೇವೆ. ಸಿಸಿಐ ಆದೇಶ ಪ್ರಶ್ನಿಸಿ 60 ದಿನಗಳ ಒಳಗಾಗಿ ರಾಷ್ಟ್ರೀಯ ಕಂಪನಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ನಮ್ಮ ಕಾನೂನು ಸಲಹೆಗಾರರ ಸಲಹೆಯಂತೆ ಮುಂದಿನ ಕ್ರಮ ನಿರ್ಧರಿಸುತ್ತೇವೆ’ ಎಂದು ಮೇಕ್​ವೆುೖಟ್ರಿಪ್ ಹೇಳಿದೆ.
ಟ್ವಿಟರ್​ಗೆ ಎಲಾನ್ ಮಸ್ಕ್ ಮಾಲೀಕತ್ವ; ಮರಳಿ ಸಿಗುತ್ತಾ ನಟಿ ಕಂಗನಾಗೆ ಟ್ವಿಟರ್ ಅಕೌಂಟ್?

ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
