ಜೈಪುರ:ರಾಜಸ್ಥಾನದ ಕರೌಲಿ ಜಿಲ್ಲೆಯ ಹಿಂಡೌನ್​ ನಗರದಲ್ಲಿ ಜೈನ ಸ್ವಾಮೀಜಿಯೊಬ್ಬರು ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಇವರು ತಂಗಿದ್ದ ಕೋಣೆಯಲ್ಲಿ ಪತ್ತೆಯಾದ ಬ್ಯಾಗ್​ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಶನಿವಾರ ಅದನ್ನು ತೆರೆದು ನೋಡಿದಾಗ ಅದರಲ್ಲಿ ಕಾಂಡೋಮ್​ ಪ್ಯಾಕೆಟ್​ಗಳು ಮತ್ತು ನೀಲಿಚಿತ್ರಗಳಿದ್ದ 33 ಪೆನ್​ಡ್ರೈವ್​ಗಳು, ಎರಡು ಲ್ಯಾಪ್​ಟಾಪ್​ಗಳು, 19 ಮೊಬೈಲ್​ ಫೋನ್​ಗಳು ಮತ್ತು 4 ಹಾರ್ಡ್​ಡಿಸ್ಕ್​ಗಳು ಪತ್ತೆಯಾಗಿವೆ.
ಜೋಧಪುರದ ಮೂಲದ ಜೈನ ಸ್ವಾಮೀಜಿ ಆಚಾರ್ಯ ಸುಕುಮಲ್​ ನಂದಿ (38) ಬಂಧಿತರು. ಇವರು ಹಿಂಡೌನ್​ ಪಟ್ಟಣದ ಮೋಹನ್​ನಗರ ಬಡಾವಣೆಯಲ್ಲಿ ಜೈನ ಬಸದಿಯಲ್ಲಿ ನೆಲೆಸಿದ್ದರು.
ಗುರುವಾರದಂದು ಗರ್ಭಿಣಿ ತನ್ನ ನಾದಿನಿ ಹಾಗೂ ಪತಿಯೊಂದಿಗೆ ಆಚಾರ್ಯ ನಂದಿ ಅವರ ದರ್ಶನಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಆಕೆಯ ನಾದಿನಿ ಒಬ್ಬಳೆ ಸಿಕ್ಕಾಗ ಸ್ವಾಮೀಜಿ ಅತ್ಯಾಚಾರ ಎಸಗಲು ಯತ್ನಿಸಿದ್ದರು. ಆದರೆ, ಆಕೆ ಅವರ ಹಿಡಿತದಿಂದ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ. ಇದಾದ ಬಳಿಕ ಗರ್ಭಿಣಿಯನ್ನು ಏಕಾಂತದಲ್ಲಿ ಭೇಟಿಯಾಗುವಂತೆ ಸ್ವಾಮೀಜಿ ಸೂಚಿಸಿದ್ದರು ಎನ್ನಲಾಗಿದೆ.
ಆಕೆ ಸ್ವಾಮೀಜಿಯ ಕೋಣೆಗೆ ಹೋದಾಗ, ಸ್ವಾಮೀಜಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಅಲ್ಲದೆ, ಈ ವಿಷಯವನ್ನು ಹೊರಗೆ ಬಾಯ್ಬಿಟ್ಟರೆ ತಮ್ಮ ಪ್ರಭಾವವನ್ನು ಬಳಸಿಕೊಂಡು ಇಡೀ ಕುಟುಂಬವನ್ನೇ ಸರ್ವನಾಶ ಮಾಡುವುದಾಗಿ ಬೆದರಿಸಿದ್ದರು.
ಇದನ್ನೂ ಓದಿ:ಮಧ್ಯರಾತ್ರಿ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದ ಭೂಪ!
ಇಷ್ಟಾದರೂ ಆಕೆ ಮನೆಗೆ ಮರಳಿದ ಬಳಿಕ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅವರೆಲ್ಲರೂ ಈ ಬಗ್ಗೆ ಪ್ರಶ್ನಿಸಲು ಜೈನ ಬಸದಿಗೆ ಬಂದಾಗ ಸ್ವಾಮೀಜಿ ತಮ್ಮ ಕೋಣೆಯಲ್ಲಿ ತಮ್ಮನ್ನೇ ಬಂಧಿಯಾಗಿಸಿಕೊಂಡಿದ್ದರು. ಕೊನೆಗೆ ಪೊಲೀಸರ ನೆರವು ಪಡೆದು ಬಾಗಿಲು ಒಡೆದು ಒಳಹೋಗಿ ಅವರನ್ನು ಬಂಧಿಸಲಾಗಿತ್ತು ಎಂದು ಭರತ್​ಪುರ ರೇಂಜ್​ನ ಡಿಐಜಿ ಲಕ್ಷ್ಮಣ್​ ಗೌರ್​ ತಿಳಿಸಿದ್ದಾರೆ.
ಸ್ವಾಮೀಜಿ ಇದ್ದ ಕೋಣೆಯ ತಪಾಸಣೆ ನಡೆಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಮತ್ತು ಪೊಲೀಸರ ತಂಡ, ಕೋಣೆಯಲ್ಲಿದ್ದ ದೊಡ್ಡ ಬ್ಯಾಗ್​ ಅನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಕಾಂಡೋಮ್​ ಪ್ಯಾಕೆಟ್​ಗಳು, ಪೆನ್​ಡ್ರೈವ್​ಗಳು, ಹಾರ್ಡ್​ಡಿಸ್ಕ್​ ಮತ್ತು ಲ್ಯಾಪ್​ಟಾಪ್​ಗಳು ಪತ್ತೆಯಾಗಿದ್ದಾಗಿ ಹೇಳಿದ್ದಾರೆ.
ಪೆನ್​ಡ್ರೈವ್​ಗಳು ಮತ್ತು ಹಾರ್ಡ್​ಡಿಸ್ಕ್​ಗಳನ್ನು ಪರಿಶೀಲಿಸಿದಾಗ ಅದರಲ್ಲಿ ನೀಲಿಚಿತ್ರಗಳು ಇರುವುದು ಪತ್ತೆಯಾಯಿತು. ಇದೀಗ ಸ್ವಾಮೀಜಿಯನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.
https://www.vijayavani.net/trying-to-cheat-in-the-name-of-lucky-draw-in-hassan-auto-driver-safe/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − six =
Remember me
