ನವದೆಹಲಿ:ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಪ್ರಪಂಚದಾದ್ಯಂತ ಹರಡುತ್ತಿದೆ. ಕರೊನಾ ಬಗ್ಗೆ ಭಯಭೀತರಾಗಿರುವ ಜನರು ಬೇರೆಯವರೊಂದಿಗೆ ಹ್ಯಾಂಡ್​ ಶೇಕ್​ ಮಾಡುವುದಕ್ಕೂ ಯೋಚಿಸುವಂತಾಗಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಹ್ಯಾಂಡ್​ ಶೇಕ್​ ಬದಲಾಗಿ ನಮಸ್ತೆ ಎಂದು ವಿಷ್​ ಮಾಡುವ ಟ್ರೆಂಡ್​ ಆರಂಭವಾಗಿದೆ.
ದೇಶಕ್ಕೆ ಕರೊನಾ ವೈರಸ್​ ಬಂದಿರುವ ಹಿನ್ನೆಲೆ ಯಾರೂ ಹ್ಯಾಂಡ್​ ಶೇಕ್​ ಮಾಡಬೇಡಿ. ಬದಲಾಗಿ ನಮಸ್ತೆ ಎಂದು ವಿಷ್​ ಮಾಡಿ ಎಂದು ಕೆಲ ದಿನಗಳ ಹಿಂದೆ ಬಾಲಿವುಡ್​ನ ಹಿರಿಯ ನಟ ಅನುಪಮ್​ ಖೇರ್​ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈಗ ದೇಶಿಗರು ಮಾತ್ರವಲ್ಲದೆ ವಿದೇಶಿಯರೂ ಕೂಡ ನಮಸ್ತೆ ಎಂದು ನಮಸ್ಕರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿವೆ. ಪ್ರವೀಣ ಕಸ್ವಾನ್​ ಎನ್ನುವವರು ಟ್ವಿಟ್ಟರ್​ನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದು, ಅದರಲ್ಲಿ ವಿದೇಶಿಗರು ಹ್ಯಾಂಡ್​ ಶೇಕ್​ ಬದಲಾಗಿ ನಮಸ್ತೆ ಮಾಡುತ್ತಿರುವುದು ಸೆರೆಯಾಗಿದೆ.
ಇಸ್ರೇಲ್​ನಲ್ಲಿಯೂ ಸಹ ಕರೊನಾ ವೈರಸ್​ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಇಸ್ರೇಲ್​ನ ಜನರು ಹ್ಯಾಂಡ್​ ಶೇಕ್​ನ ಬದಲು ನಮಸ್ತೆ ಹೇಳಬೇಕು ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್​ ನೆತನ್ಯಾಹೂ ಸೂಚಿಸಿದ್ದಾರೆ.
ಅದಷ್ಟೇ ಅಲ್ಲದೆ ಬಾಲಿವುಡ್​ನ ಅನೇಕ ಸ್ಟಾರ್​ಗಳು ಕರೊನಾ ಮುಗಿಯುವವರೆಗೂ ಹ್ಯಾಂಡ್​ ಶೇಕ್​ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಸಲ್ಮಾನ್​ ಖಾನ್​ ಕೂಡ ಈ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಾವು ಕೈ ಮುಗಿದು ಕುಳಿತಿರುವ ಫೋಟೋವೊಂದನ್ನು ಹಾಕಿ ಕರೊನಾ ವೈರಸ್​ ಹೋಗುವ ತನಕ, ಅಪ್ಪುಗೆ, ಹ್ಯಾಂಡ್​ ಶೇಕ್​ ಬದಲು ಮಾಡುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
Namaste 🙏🏻 🙏🏻
See we Indians told to do this to world many many years ago. Now just a class on ‘how to do namaste properly’.#CoronaViruspic.twitter.com/P1bToirPin
— Parveen Kaswan, IFS (@ParveenKaswan)March 12, 2020

Netanyahu announcing Israel's new extreme measures against#corona. Orders Israelis to stop shaking hands, suggests following Indian custom of namaste instead. 🙏🏽pic.twitter.com/8dGZUUtwEU
— Noga Tarnopolsky (@NTarnopolsky)March 4, 2020

https://www.instagram.com/p/B9VvxM1laKc/?utm_source=ig_embed
ಹೀಗೆ ಮಾಡಿದರೆ ಕರೊನಾ ಕಾಲರ್​ ಟ್ಯೂನ್​ ಕೇಳಿಸುವುದಿಲ್ಲ!

ಐಪಿಎಲ್​ ಬೇಡವೆನ್ನುತ್ತಿರುವುದಕ್ಕೆ ಕಾರಣ ಇಲ್ಲಿದೆ ನೋಡಿ; ಕ್ರೀಡಾಂಗಣದಲ್ಲಿಯೂ ಹರಡುತ್ತೆ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 8 =
Remember me
